ರೈತರೆ ಎಚ್ಚೆತ್ತುಕೊಳ್ಳಿ

ರೈತರೆ ಎಚ್ಚೆತ್ತುಕೊಳ್ಳಿ

ಒಂದು ಪ್ರಯೋಗ ನೀವೆ ಮಾಡಿ
ಕಟಾವಿಗೆ ತಯರಿರುವಂತ ಕಬ್ಬನ್ನು 100 ಕೆ.ಜಿ. ತೆಗೆದುಕೊಳ್ಳಿ, ಅದನ್ನು ಬಿಸಿಲಿನಲ್ಲಿ ಪೂರ್ತಿ ತೇವಾಂಶ ಹೋಗುವುವರೆಗೆ ಒಣಗಿಸಿ ನಂತರ ತೂಕ ಮಾಡಿ ಎಷ್ಟು ಬರುತ್ತೆ ಗುರುತಿಸಿಕೊಳ್ಳಿ ಆನಂತರ ಆ ಒಣಗಿದ ಕಬ್ಬಿಗೆ ಬೆಂಕಿ ಹಚ್ಚಿ ಪೂರ್ತಿಯಾಗಿ ದಹಿಸಿ ನಂತರ ಬರುವ ಅದರ ಬೂದಿಯನ್ನು ತೂಕ ಮಾಡಿ
.....ಹೀಗೆ ಮಾಡಿದಾಗ 100 ಕೇ.ಜಿ. ಕಬ್ಬನ್ನು ಒಣಗಿಸಿದ ನಂತರ ತೂಕ ಮಾಡಿದರೆ 22 ಕೇ.ಜಿ. ಉಳಿಯುತ್ತೆ, ನಂತರ ಈ 22 ಕೇ.ಜಿ. ಒಣ ಕಬ್ಬಿಗೆ ಬೆಂಕಿ ಹಚ್ಚಿ ಬೆಂದು ಉಳಿದ ಬೂದಿಯನ್ನು ತೂಕ ಮಾಡಿದಾಗ ಆ ಬೂದಿಯ ತೂಕ 1.5 ಕೇ.ಜಿ. ಮಾತ್ರ. ಈ ಪ್ರಯೋಗ ನಾನೇ ಮಾಡಿ ಖಂಡಿತವಾಗಿ ಇದೇ ಪಲಿತಾಂಶವನ್ನು ಪಡೆದಿದ್ದೇನೆ. ಆದರೆ ಈ ವಿಷಯ ನಮಗೆ ತಿಳಿದು ಬಂದಿದ್ದು ಮಹರಾಷ್ಟ್ರದ ಸುಭಾಷ್ ಪಾಳೆಕಾರರ ಒಂದು ಕ್ಯಾಂಪ್ ನಲ್ಲಿ.
ಪಾಳೆಕಾರರ ಪ್ರಕಾರ ಏಕೆ ಈ ಪ್ರಯೋಗ
ಗಾಡಿಗಟ್ಟಲೆ ಗೊಬ್ಬರ ಮತ್ತು ಟನ್ನುಗಟ್ಟಲೆ ರಸಗೊಬ್ಬರ(NPK) ಭೂಮಿಗೆ ಸುರಿದು ಸುರಿದು ಲಾಭ ಕಾಣದೆ ಕಂಗಾಲಾಗಿ ಆತ್ಮಹತ್ಯ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿರುವ ರೈತರ ಕಣ್ಣು ತೆರೆಸಲು.
100 ಕೇ.ಜಿ. ಕಬ್ಬು ಒಣಗಿದ ನಂತರ 22ಕೇ.ಜಿ. ಉಳಿದ 78 ಕೇ.ಜಿ. ಎಲ್ಲಿ ಹೋಯಿತು? ಏನಾಯಿತೆಂದರೆ ಆ ಕಬ್ಬಿನಲ್ಲಿದ್ದ ನೀರೆಲ್ಲ ಆವಿ ಆಯಿತು. ವಾತಾವರಣದಿಂದ ಕಬ್ಬಿಗೆ ದೊರೆತಿದ್ದ ನೀರು ಮತ್ತೆ ವಾತಾವರಣಕ್ಕೆ ಸೇರಿತು.
ಒಣಗಿದ ಕಬ್ಬನ್ನು ಸುಟ್ಟು ಉಳಿದ ಬೂದಿಯ ತೂಕ 1.5 ಕೇ.ಜಿ. ಇಲ್ಲಿ ಉಳಿದ 20.5 ಕೇ.ಜಿ. ? ಕಬ್ಬು ಉರಿಯುವಾಗ ಸೂರ್ಯನಿಂದ ಬಂದಿದ್ದು ಬೆಂಕಿಯ ಜ್ವಾಲೆಯಾಗಿ ವಾತಾವರಣ ಸೇರಿತು, ಕಾರ್ಬನ್ ಡೈ ಆಕ್ಸೈಡ್ ನಿಂದ ಬಂದಿದ್ದು ಹೊಗೆಯ ರೂಪದಲ್ಲಿ ವಾತಾವರಣಕ್ಕೆ ಸೇರಿತು. ಈ ಪ್ರಯೋಗ ದಿಂದ ಪ್ರತಿಯೊಬ್ಬ ರೈತನೂ ಗಮನಿಸಬೇಕಾಗಿರುವ ವಿಷಯ, ನಾವು ಬೆಳೆವ ಯಾವುದೇ ಬೆಳೆ ಇರಲಿ ಅದು ಶೇಕಡ 98.5ರಷ್ಟನ್ನು ವಾತಾವರಣದಿಂದ ಪಡೆಯುತ್ತದೆ ಅಂದರೆ ಭೂಮಿಯಿಂದ ಬೆಳೆ ಪಡೆದಿದ್ದು ಶೇಕಡ 1.5 ರಷ್ಟು ಮಾತ್ರ. ಈ 1.5 ರಷ್ಟಕ್ಕೆ ಏನೆಲ್ಲಾ ಮಾಡಿ ಕಂಗಾಲಾಗುತ್ತೇವೆ. ಅಂತ ಪಾಳೆಕಾರರು ಹೇಳುತ್ತಾರೆ. ಇದು ನಿಜ ಕೂಡ, ಹೌದಲ್ಲ್ವ.

Rating
No votes yet

Comments