ರೈಲು ಪ್ರಯಾಣ ಬರೀ 5,000 ಕಿ.ಮೀ....!!
ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ. ಅದರಲ್ಲಿ ಬಸ್ಸು, ವಿಮಾನ, ರೈಲಿನ ಅಂಕಿ ಅಂಶಗಳನ್ನ ಪಟ್ಟಿ ಮಾಡಿ ನೋಡಿದಾಗ...ನನಗೇ ಅಚ್ಚರಿಯೆನಿಸ್ತು..!!!
ಬಸ್ಸು - ಸುಮಾರು 80,000 ಕಿ.ಮೀ.ಗಳು
ವಿಮಾನ - ಸುಮಾರು ಬಸ್ಸಿನ ಅರ್ದದಷ್ಟು ಕಿ.ಮೀ.ಗಳ ಹತ್ತಿರ
ರೈಲು - ಬರೀ 5,000 ಕಿ.ಮೀ.ಗಳಷ್ಟು!!?? ಅದರಲ್ಲೂ ನಮ್ಮದೇಶದಲ್ಲಿ ಒಂದು 3,000 ಕಿ.ಮೀಗಳಿರಬಹುದೇನೊ ಅಷ್ಟೆ...
ಬರೀ 3,000 ಕಿ.ಮೀ!!! ಅದ್ಯಾಕೋ ನನಗೆ ಒಂಥರಾ ಗಿಲ್ಟಿ ಫೀಲಾಯ್ತು...:( ಜೊತೆಗೆ ನಮ್ಮಮ್ಮ.."ಬಸ್ಸಿನಲ್ಲಿ ಬಹಳ ಓಡಾಡೋದು ಒಳ್ಳೇದಲ್ಲ"..ಸ್ವಿಚ್ ಓವರ್ ಟು ರೈಲು ಅಂತ :)
ಸರಿ ಇವೆಲ್ಲಾ ವಿಚಾರಗಳನ್ನ ನೆನಪಿನಲ್ಲಿಟ್ಟುಕೊಂಡು ಬೆಳಗ್ಗೆನೆ ಮೆಜಸ್ಟಿಕ್ ರೈಲ್ವೆ ಸ್ಟೇಷನ್ ಟಿಕೆಟ್ ಕೌಂಟರ್ನಲ್ಲಿ ಟಿಕೆಟ್ ತಗೊಂಡು..೮ ಗಂಟೆಯ ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನ್ ಎಷ್ಟನೇ ಫ್ಲಾಟ್ ಫಾರಂ? ಅಂದಾಗ
...ಬಲಗಡೆ ಕೆಳಗೆ subway ಯಿಂದ 8ನೇ ಫ್ಲಾಟ್ ಫಾರಂಗೆ ಹೋಗಿ ಅಂತ ಕೌಂಟರಿನೊಳಗಿಂದ ಹೆಣ್ಣುಮಗಳ ಉತ್ತರ ಬಂತು.
ಅಬ್ಬ ಅದೇನು subway ಅಂತೀರಾ!! :( ವರ್ಣಿಸೋಕಾಗೋಲ್ಲ ನನ್ನ ಕೈಲಿ...!!
ಆಗ್ಲೇ ಒಂದು ರೈಲು ಬಂದು ನಿಂತಿತ್ತು..ಟೀ ಅಂಗಡಿಯವಂಗೆ ಕೇಳಿ ಕನ್ಫರ್ಮ್ ಮಾಡಿಕೊಂಡೆ. ಅಲ್ಲಿದ್ದ ಪ್ರಯಾಣಿಕರೆಲ್ಲಾ ರೈಲ್ವೆ ಬೋಗಿಯ ಬಾಗಿಲ ಬಳಿ ಮುಗಿಬಿದ್ದಿದ್ದರು...ಆದ್ರೆ ಬಾಗಿಲು ಇನ್ನು ತೆಗೆದಿರಲ್ಲಿಲ್ಲ!! ಅದ್ಯಾರೋ ಆಸಾಮಿ ತುರ್ತು ನಿಗಮದ ಕಿಟಕಿ ತೆರೆದು ಒಳಗೆ ತೂರಿ ಬಾಗಿಲು ತೆಗೆದೇ ಬಿಟ್ಟ...ನಾನು ಟೈಮ್ ಮತ್ತು ಜನರ ಗುಂಪನ್ನ ಒಮ್ಮೆ ನೋಡಿದೆ...ಇನ್ನು ೭.೩೫ ಆರಾಮಾಗಿ ಕುಳಿತರೂ ಅರ್ಧ ಕಂಪಾರ್ಟ್ಮಮೆಂಟ್ ತುಂಬೊವಷ್ಟು ಜನ...ಆಗ್ಲೇ ಜನರು ಕಿಟಕಿ ಬಳಿ ಹೋಗಿ ಟವೆಲ್ ಕರ್ಚಿಪ್ ಹಾಕ್ತಿದ್ರು.. ಜನ ಮರುಳೋ ಜಾತ್ರೆ ಮರುಳೋ ಗೊತ್ತಾಗ್ಲಿಲ್ಲ :D ನಾನು ಕಿಟಕಿ ಹತ್ತಿರದ ಒಂದು ಸೀಟಿರೋವಲ್ಲಿ ಕುಳಿತೆ...ಮೂರ್ನೆ ಬಾರಿಯ ಪ್ಯಾಸೆಂಜರ್ ಟ್ರೈನ್ ಅನುಭವ...ಬಹಳ ಹುಮ್ಮಸ್ಸಿತ್ತು..ಜನ ಬರ್ತಾ ಇದ್ರೂ ಹೋಗ್ತಾ ಇದ್ರೂ...೮ ಗಂಟೆಗೆ ರೈಲು ಹೊರಟಿತು...
ಊರು ಬಿಟ್ಟಂತೆಲ್ಲಾ...ಕಿಟಕಿ ಹೊರಗೆ ಹಸಿರು ಹೊಲ ಗದ್ದೆ ತೋಟಗಳು ಶುರುವಾಯ್ತು...ಒಳಗೆ ಜಾಹೀರಾತುಗಳು!!
ಹೌದು...ಜಾಹೀರಾತುಗಳು ಟೀವೀಲಲ್ಲ...ಕಂಪಾರ್ಟ್ಮಮೆಂಟ್ ಒಳಗೆ!! :)
ಮೊದಲು ನ್ಯೂಸ್ ಪೇಪರ್ನವ,
ನಂತರ ಮಲ್ಲಿಗೆ ಇಡ್ಲಿಯವ,
ಕಾಫಿ ಟೀಯವ,
ಬಂಗಾರದ ಬಣ್ಣದ ಸರ ಮಾರುವವ,
ಟಾರ್ಚ್ ಇರೋ ಕೀಚೈನ್ ಮಾರುವವ,
ಹತ್ತಕ್ಕೆ ಮೂರು ಪೆನ್ನು ಮಾರುವವ,
ಬಿಡಿ ಮಲ್ಲಿಗೆ, ಕನಕಾಂಬರ ಮಾರೋ ಹೂವಾಡಗಿತ್ತಿ,
ಬಾಟಲಿ ನೀರಿನವ,
ಕತ್ತರಿಸಿದ ಸೌತೆ ಕಾಯಿ ಮಾರುವವ,
ಕಂಕುಳಲ್ಲಿ ಕೂಸನ್ನಿಟ್ಟ್ಕೊಂಡು "ನಮ್ಮ ಮನೆಯಲಿ ದಿನವೂ ದಿನವೂ ಚೈತ್ರವೇ" ಹಾಡೇಳಿದ ಹೆಣ್ಮಗಳು,
ಬಾದಾಮಿ ಹಾಲಿನವ,
ದೋಸೆ ಚಿತ್ರಾನ್ನದವ,
ಬಿಸ್ಕತ್ತು,ಪೆಪ್ಸಿಯವ,
ರೈಲಿನ ನೆಲ ಒರೆಸಿ ಚಿಲ್ಲರೆ ಕೇಳೋ ಚಿಕ್ಕ ಹುಡುಗ,
ಬಿಸಿ ಬಿಸಿ ಕಡಲೆ ಪೂರಿಯವ,
ಲೇಸ್,ಕುರ್ಕುರೆಯವ,
ಹುರಿದ,ಬೇಯಿಸಿದ ಸೇಂಗಾ ಮಾರೋ ಅಜ್ಜಿ,
ಕಣ್ಣು ಕಾಣಿಸದವ..
ಟಿಕೆಟ್ ಚೆಕ್ ಮಾಡುವವ,
...........................................
ಹೀಗೆ ನೆನಪಿಡಲಾರದಷ್ಟು ಜನಗಳು...ಜಾಹೀರಾತುಗಳು,ವ್ಯಾಪಾರಗಳು,ದಾನ ಧರ್ಮಗಳು....!!!
ನನಗಂತೂ ನೋಡಿ ನೋಡಿ ಕಣ್ಣುಗಳು ಭಾರವೆನಿಸತೊಡಗಿದವು..ನಿದ್ದೆಗೆ ಜಾರೋ ಮುನ್ನ ಒಂದಷ್ಟು ಫೋಟೋ ಕ್ಲಿಕ್ಕಿಸಿದ್ದಾಯ್ತು.
ಕೊನೆಗೆ ನಮ್ಮ ಟ್ರೈನ್ ನಿಂತಾಗ ಪಕ್ಕದಲ್ಲೇ ಮತ್ತೊಂದು ಟ್ರೈನ್ ಹೋಯಿತು... ಆ ಕ್ಷಣ ಭೌತ ಶಾಸ್ತ್ರದ ಚಲನೆಯ ನಿಯಮಗಳ ನೆನಪಾಯ್ತು...!ಓಡುತ್ತಿದ್ದ ಆ ರೈಲಿನ ಕಿಟಕಿ ಬಳಿ ಕುಳಿತ ಜನಗಳು..ಅವರ ಹಾವ ಭಾವಗಳು...ಸಿನೆಮಾ ರೀಲೊಂದನ್ನ ಓಡಿಸಿ ತೋರಿಸಿದಂತಿತ್ತು :)
ಯಾಕೋ ನನ್ನ ರೈಲು ಪ್ರಯಾಣದ ಅಂಕಿ ಅಂಶಗಳು ಹೆಚ್ಚಾಗೋದು ಕಷ್ಟವೆನಿಸುತ್ತಿದೆ...!! :(
ನಿಮ್ಮ ಪ್ರಯಾಣದ ಅಂಕಿ ಅಂಶಗಳನ್ನ ಲೆಕ್ಕ ಹಾಕಿದ್ದೀರಾ?!! :)
-ಸವಿತ
Comments
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by harshab
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by ASHOKKUMAR
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by srinivasps
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by savithasr
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by srinivasps
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by Nagaraj.G
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by srinivasps
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by Nagaraj.G
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by savithasr
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!
In reply to ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!! by srinivasps
ಉ: ರೈಲು ಪ್ರಯಾಣ ಬರೀ 5,000 ಕಿ.ಮೀ....!!