ರೈಲ್ವೆ ಬಜೆಟ್

ರೈಲ್ವೆ ಬಜೆಟ್

ಸಂಪದಿಗರೇ ಇಂದು ರೈಲ್ವೆ ಬಜೆಟ್.

ಕಳೆದ ಬಾರಿ ಕರ್ನಾಟಕಕ್ಕೇ ಶೂನ್ಯವನಿತ್ತ ಲಾಲು ಈ ಬಾರಿಯೇನಾದರು ನೀಡುವರೆ ಕಾದು ನೋಡಬೇಕು.
ಏನು ಬಜೆಟ್ ದಿನ ಬೇಡಿಕೆ ಇಟ್ಟರೆ ಪ್ರಯೋಜನವೇನು ಎನ್ನಬೇಡಿ. ಇದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಗಳು.

ನನ್ನ ಇಚ್ಛೆಗಳು:

೧) ಸುಮಾರು ೬ ವರ್ಷದಿಂದ ಬೆಂಗಳೂರು ಮೈಸೂರಿನ ೧೩೫ ಕಿ.ಮೀ ದ್ವಿಪಥ ಹಳಿಯಲ್ಲಿ ಕೇವಲ ೬೦ ಕಿ.ಮೀ ಮಾತ್ರ ಮುಗಿದಿದೆ. ಇದಕ್ಕೆ ಹೆಚ್ಚು ಅನುದಾನ ಬರಬೇಕು.
೨) ಸುಮಾರು ೬ ವರ್ಷದಿಂದ ಬೆಂಗಳೂರು ಹುಬ್ಬಳ್ಳಿಯ ದ್ವಿಪಥ ನಿರ್ಮಾಣ ಇನ್ನು ತುಮಕೂರಿನವರೆಗೆ ಸರಿಯಾಗಿ ಮುಗಿದಿಲ್ಲ. ಇದಕ್ಕೆ ಹೆಚ್ಚು ಅನುದಾನ ಬರಬೇಕು.
೩) ಬೆಂಗಳೂರು ಹಾಸನ ನೇರ ರೈಲು ಹಳಿ ನಿರ್ಮಾಣಕ್ಕೆ ಇನ್ನು ೨೦೦ ಕೋಟಿ ರುಪಾಯಿ ಬೇಕಾಗಿದೆ. ಇದು ಪ್ರಾರಂಭವಾಗಿ ಸುಮಾರು ೧೦ ವರ್ಷ ಕಳೆದಿದೆ. ಇನ್ನು ಸುಮಾರು ೮೦-೧೦೦ ಕಿ.ಮೀ ನಷ್ಟು ಕಾಮಗಾರಿ ಬಾಕಿ ಇದೆ. ಇದು ಸಾಕಾರಗೊಂಡರೆ ಬೆಂಗಳೂರು-ಮಂಗಳೂರಿಗೆ ಕೇವಲ ೮ ಘಂಟೆ ರೈಲು ಪ್ರಯಾಣ. ಹಾಗೆ ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳ ಅಭಿವೃದ್ದಿಗೂ ಪೂರಕ.
೪) ಬೆಂಗಳೂರು-ಮಂಗಳೂರು ಹಗಲು ರೈಲು ಹಳಿಗೆ ಬರಬೇಕು.
೫) ಮಂಗಳೂರು-ದಾದರ್ ಹೊಸ ರೈಲು ಪ್ರಾರಂಭವಾಗಬೇಕು.
೬) ಅರಸೀಕೆರೆ-ಮಂಗಳೂರು ಹಳಿ ದ್ವಿಪಥಕ್ಕೆ ಅನುಮೋದನೆ ದೊರೆಯಬೇಕು.
೭) ಮೈಸೂರು-ಮಡಿಕೇರಿ ರೈಲು ಮಾರ್ಗ ಯೋಜನೆ ಸಾಕಾರಗೊಳ್ಳಬೇಕು.
೮) ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆ ಪುನಃ ಪ್ರಾರಂಭವಾಗಬೇಕು. ಇದರಿಂದ ಯೆಲ್ಲಾಪುರ ಘಾಟಿಯಲ್ಲಿ ರಕ್ಕಸ ಗಣಿ ಲಾರಿಗಳ ಆರ್ಭಟ ಕಡಿಮೆಯಾಗುತ್ತದೆ.
೯) ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಯೋಜನೆಗೆ ಅನುಮೋದನೆ. ಇದರಿಂದ ಹೊನ್ನಾವರ ಬಂದರು ನಗರಿಯಾಗಿ ಮಾರ್ಪಾಡುಗೊಳ್ಳುವುದು. ಹಾಗೆ ಬೆಂಗಳೂರು-ಮುಂಬೈಗೆ ಪಾರ್ಯಾಯ ಮಾರ್ಗ ದೊರೆತಂತಾಗುವುದು. ಇದರ ಜೊತೆಗೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ದಟ್ಟಣೆ ಕಡಿಮೆಯಾಗುವುದು.
೧೦) ಮಂಗಳೂರು-ಗೋವಾ ಮಧ್ಯೆ ಮತ್ತೊಂದು ಪ್ಯಾಸೆಂಜರ್ ರೈಲು.
೧೧) ಕೊನೆಯದಾಗಿ ಮಂಗಳೂರು ದಕ್ಷಿಣ ರೈಲ್ವೆ ಹಿಡಿತದಿಂದ ನೈರುತ್ಯ ರೈಲ್ವೆ ತೆಕ್ಕೆಗೆ ಬರಬೇಕು. ಹಾಗೂ ಕರ್ನಾಟಕದ ಕೊಂಕಣ ರೈಲ್ವೆ ಭಾಗ ನೈರುತ್ಯ ರೈಲ್ವೆ ವಲಯಕ್ಕೆ ಸೇರಬೇಕು.

Rating
No votes yet

Comments