ರೈಲ್ವೇ ಅಚ್ಚರಿ
ಎಂಟನೆಯದೋ, ಒಂಭತ್ತನೆಯದೋ ಗೊತ್ತಿಲ್ಲ, ಆದರೆ ಮಾತ್ರ ಇದೂ ಒಂದು ಪ್ರಪಂಚದ ಅಚ್ಚರಿಗಳಲ್ಲಿ ಒಂದು.
ಚೆನ್ನೈಯಲ್ಲಿ ನಮಗೆ ಸೋಮವಾರ ಹಾಗೂ ಮಂಗಳವಾರ ದೀಪಾವಳಿ ಪ್ರಯುಕ್ತ ರಜ. ನಾನು 22ನೇ ತಾರೀಖಿನಂದು ಆಸ್ಟ್ರೇಲಿಯಾದಿಂದ ಬಂದುದರಿಂದ, ದೀಪಾವಳಿಗೆ ಊರಿಗೆ ಹೋಗುವ ಯಾವುದೇ ವಿಚಾರವಿರಲಿಲ್ಲ. ಅದೂ ಅಲ್ಲದೆ ಕಳೆದ 10-15 ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು ಬರಿಯ ಟ್ರಾಫಿಕ್ ಜಾಮ್ ನಲ್ಲೇ ದಿನ ದೂಡಿದ್ದಾಗ್ಗಿತ್ತು. ಶನಿವಾರದಂದು ಸಂಜೆ ಸುರಿದ ಮಳೆಗೆ ಜಹಳಜನರು ರೈಲು, ಬಸ್ಸು ಹಾಗೂ ವಿಮಾನ ನಿಲ್ದಾಣಗಳನ್ನು ನಿಗದಿತ ಸಮಯಕ್ಕೆ ತಲುಪದೇ ತಮ್ಮ ಪ್ರಯಾಣವನ್ನು ಬೇರೇಯೇ ರೀತಿ ಮುಂದುವರಿಸಬೇಕಾಯಿತು.
ಭಾನುವಾರ ಮನೆಯಲ್ಲಿ ಸುಮ್ಮನೇ ಕುಳಿತಿರುವಾಗ ರೈಲ್ವೆ ವೆಬ್ ಸೈಟ್ನಲ್ಲಿ ನೋಡಿ ನನ್ನ ಕಣ್ಣನ್ನೇ ನಾನು ನಂಬಲಿಲ್ಲ. ಭಾನುವಾರ ರಾತ್ರಿ ಚೆನ್ನೈನಿಂದ ಮೈಸೂರಿಗೆ ಹೋಗುವ ರೈಲಿಗೆ ಹಾಗೂ ಮಂಗಳವಾರ ರಾತ್ರಿ ವಾಪಸ್ಸು ಬರುವ ರೈಲಿನಲ್ಲಿ ಸ್ಲೀಪರ್ ಕೋಚಿನಲ್ಲಿ ಅವಕಾಶಗಳಿದ್ದವು.
ಬನ್ನಿ ಮೈಸೂರಿಗೆ, ಅಲ್ಲೇ ದೀಪಾವಳಿ ಆಚರಿಸೋಣ! ನಾನು IRCTCಯಲ್ಲಿ ಬುಕ್ ಮಾಡಿಕೊಂಡು ಹೊರಟೆ. ಇದು ರೈಲ್ವೆ ಇಲಾಖೆಯಿಂದ ನನಗೆ ಸಂದ ದೀಪಾವಳಿ ಅಚ್ಚರಿ ಕೊಡುಗೆ
Comments
ಉ: ರೈಲ್ವೇ ಅಚ್ಚರಿ