ರೋಟಿ ಮೇಕರ್ರೋ ಅಥವ ರೋಟಿ ಬ್ರೇಕರ್ರೋ?

ರೋಟಿ ಮೇಕರ್ರೋ ಅಥವ ರೋಟಿ ಬ್ರೇಕರ್ರೋ?

ನೆನ್ನೆ ಸಮಯಾನೆ ಸರಿ ಇಲ್ಲಾನ್ಸತ್ತೆ
ಬೆಳಗ್ಗೆ ಇಂದಾನೆ ಮನೇಲಿ ಕಿರಿಕಿರಿ. ಅದೆಲ್ಲಾ ಬರೆಯಲ್ಲ ಬಿಡಿ ನಂಗೂ ಬೋರು ನಿಮಗೂ ಬೋರು
ಅಕ್ಕ ಯಾರನ್ನೋ(ಜ್ಯೋತಿಷಿ) ನೋಡಬೇಕು ಅಂತದ್ಳು ಸರಿ ನಾವೆಲ್ಲಾ ನಮ ಸೈನ್ಯದ ಜೊತೆ ಹೊರಟೆವು(ಪತಿಯನು ಹೊರತು ಪಡಿಸಿ) ನಾನೂ ಏನಾದರೂ ಕೇಳೋಣ
ಅನ್ಕೊಂಡು ಜಾತಕದ ಪ್ರಿಂಟ್ ಔಟ್ ತಗೊಂಡು ಹೊರಟಿದ್ದಾಯ್ತು.
ಹೋಗಿದ್ದಷ್ಟೆ ಬಂತು . ಆ ಜ್ಯೋತಿಷಿಯೋ ಆರು ತಿಂಗಳಿಗೆ ಹುಟ್ಟಿದವರ ಥರಾ ಆಯ್ತಾ ಆಯ್ತಾ ಎನ್ನುವುದು ಮತ್ತೊಮ್ಮೆ ಮನೆಒಳಗೆ ನೋಡುವುದು ಮಾಡುತ್ತಿದ್ದರು. ಪಾಪ ಏನು ಕೆಲಸ ಇತ್ತೋ
ನನಗೇನೋ ಆತ ಹೇಳಿದ್ದು ಹಿಡಿಸಲಿಲಿಲ್ಲ
ಜಾತಕ ಪ್ರಿಂಟ್ ಔಟ್ ಬ್ಯಾಗಲ್ಲೇ ಉಳಿಯಿತು.
ಅಕ್ಕನ ಎನ್ಜೌರಿ ಮುಗೀತು.
ಅಲ್ಲಿಂದ ಟೋಟಲ್‍ಗೆ ರೇಶನ್ ತಗೋಳೋದಿಕ್ಕೆ ವಿಸಿಟ್ ಕೊಟ್ಟೆವು ನಮ್ಮ ಜೊತೆ ಎರೆಡು ಚಿಲ್ಟಿ ಪಿಲ್ಟಿಗಳು(ನನ್ನ ಮಗಳು, ಅಕ್ಕನ ಮಗಳು) ನಡೆಯಲು ಆದರೂ ನಡೆಯಲಾರವು.
ನಮಗೋಎತ್ತಿಕೊಳ್ಳಲು ಆಗಲ್ಲ.ಎಂಟ್ರಿ ಆಗುತ್ತಲೇ ಅವರ ಕಣ್ಣಿಗೆ ಬಿತ್ತು ಬಳೆ ಆರ್ಟಿ ಫಿಷಿಯಲ್ ಜ್ಯುವೆಲ್ಲರಿ. ಅವುಗಳ ವ್ಯಾಪಾರ ಮುಗಿಸಿ ಮುಂದೆ ನಡೆಯುತ್ತಿದ್ದಂತೆ
ಕಾಫೀ ಡೇ ಕಣ್ಣಿಗೆ ಬಿತ್ತು. ಸಾಯಂಕಾಲ ವಾಗಿತ್ತಾದ್ದರಿಂದ ಕಾಫೀ ಕುಡಿಯೋಣ ಎಂದುಕೊಂಡು ಅಲ್ಲೇ ಕುಳಿತೆವು
ಅಲ್ಲೂ ಮಕ್ಕಳ ಕಣ್ಣಿಗೆಕಾಣಿಸಿದ್ದು ಅದೆಂಥದೋ ಚಾಕೋ ಪೀಸ್ ಬಿಸ್ಕೆಟ್ . ಇವಳು(ನನ್ನ ಮಗಳು) ಹಟ ಹಿಡಿದಳು
ಸರಿ ಎರೆಡು ಕೊಡಪ್ಪ ಎಂದು ಬೆಲೆ ಕೇಳಿದರೆ ಹತ್ತು +೧ ಬಿಸ್ಕೆಟ್ ಇರುವ ಆ ಡಬ್ಬಕ್ಕೆ ನೂರ ಹತ್ತು ರೂಪಾಯಿಗಳು. ಕಣ್ಣಗಲಿಸಿದರೂ ಪರ್ಸ್ ತೆರೆದುಕೊಡಿಸಿದ್ದಾಯ್ತು.
ಮಕ್ಕಳ ಮುಂದೆ ನಮ್ಮದೇನಿದೆ?
ಕಾಫಿ ಎಸ್ಪ್ರೆಸ್ ಅಂತ ಅದೇನೋ ಕಾಫಿ ಕುಡಿದೆವು . ಒಂಚೂರು ಹಿಡಿಸಲಿಲ್ಲ ಅದಕ್ಕೆ ೪೦ ರೂಪಾಯಿ
ನಮ್ಮ ಕೋತಾಸ್ ಕಾಫಿ ಮುಂದೆ ಇದೇನೂಅಲ್ಲ ಅನ್ನಿಸಿದ್ದು ಸುಳ್ಳಲ್ಲ.
ಅಲ್ಲಿಂದ ಏರಿಳಿಗೆ(http://sampada.net/forum/4453) (ಎಸ್ಕಲೇಟರ್ ) ನೋಡುತ್ತಿದ್ದಂತೆ ನಮ್ಮ ಅಮ್ಮ ಅಕ್ಕ ಬರೋದಿಲ್ಲ ಎಂದು ಹಟ ಹಿಡಿದರು . ಭಾವ ಮಕ್ಕಳ ಕೈ ಹಿಡಿದುಕೊಂಡು ಕರೆದುಕೊಂಡು ಹೋದರೆ ನಾನು ಈ ದೊಡ್ಡ ಮಕ್ಕಳ ಕೈ :) ಹಿಡಿದುಕೊಂಡು ಹೋದೆ.
ಮೊದಲನೇ ಫ್ಲೋರ್ ಗೆ ಹೋಗುತ್ತಿದ್ದಂತೆ ನಮ್ಮ ಅಕ್ಕನ ಮಗಳ ಕಿರುಬೆರೆಳನ್ನು ಎತ್ತಿ ತೋರಲಾರಂಭಿಸಿದಳು. ಟಾಯ್ ಲೆಟ್ ಗ್ರೌಂಡ್ ಫ್ಲೋರ್‌ ನಲ್ಲಿ ಇದೆ ಎಂದಾಗ ಅಕ್ಕನ ಕೋಪ ಹೇಳತೀರದಲ್ಲ
ಅಷ್ಟ್ರಲ್ಲಿ ಅದು ಕಾಣಿಸಿತು ಅದು ರೋಟಿ ಮೇಕರ್.
ಚಪಾತಿ ಮಾಡೋದು ಅಂದ್ರೆ ಲಟ್ಟಿಸೋದು ಬಾಳ ಬೋರಿನ ಕೆಲಸ ನೋಡಿ. ನಮ್ಮನೇಲೋ ಇವರ ಡಯಟ್‌ನಿಂದ ಮೂರು ಹೊತ್ತು ಚಪಾತಿ
ಚಪಾತಿ ಚಪಾತಿ ಲಟ್ಟಿಸಿ ಲಟ್ಟಿಸಿ ಕೈಯೆಲ್ಲಾ ಸವೆದು ಹೋಗಿದೆ . ತುಂಬಾ ದಿನದಿಂದ ಇಂತಾ ಒಂದು ಸಲಕರಣೆಗಾಗಿ ಹುಡುಕುತ್ತಾ ಇದ್ದೆ
ಆ ಸೇಲ್ಸ್ ಮ್ಯಾನ್ ಚಪಾತಿ ಹಿಟ್ಟನ್ನು ರೋಟಿಮೇಕರ್ನಲ್ಲಿ ಇಟ್ಟು ಒತ್ತುತ್ತಿದ್ದಂತೆ ಉಬ್ಬಿದ ಚಪಾತಿ ಸಿದ್ದ.
ನನಗೋ ಆಕಾಶಾನೇ ಕೈಗೆಟುಕಿದಷ್ಟು ಸಂತೋಷ
ನೀವು ಬುಕ್ ಮಾಡಿ ಮೇಡಮ್ ನಾವು ತಂದುಕೊಡ್ತೀವಿ ಅಂದ
ಬೇಡ ಬೇಡ ಈಗಲೆ ದುಡ್ಡು ಕೊಡ್ತೀನಿ . ನಾನೆ ತಗೊಂಡು ಹೋಗ್ತೀನಿ ಅಂದೆ.
ಎಷ್ಟು ಅಂದಾಗ 1975 ರೂ ಎಂದ ಚೌಕಾಸಿ ಮಾಡಿ 1900ಕ್ಕೆ ಮಾತಾಡಿದೆ
ತಕ್ಷಣ ಹಣ ಕೊಟ್ಟು ತೆಗೆದುಕೊಂಡು ಕಾರಿನಲ್ಲಿ ಬರುತ್ತಾ ಮಗಳಿಗೆ ಚಪಾತಿ ಹಾಗೆ ಬರುತ್ತೆ ಹೀಗಿರುತ್ತೆ ಎಂದೆಲ್ಲಾ ಹೇಳಿಕೊಂಡು ಮನೆಗೆ ತಂದೆ
ಇನ್ನೂ ಇವರು ಮನೆಗೆ ಬಂದಿರಲಿಲ್ಲ ಬರುತ್ತಿದ್ದಂತೆ ಬಿಸಿ ಬಿಸಿ ಮೆತ್ತಗಿನ ಚಪಾತಿ ಮಾಡಿಕೂಡುವ ಹುಮ್ಮಸ್ಸಿನಿಂದ ಚಪಾತಿ ಹಿಟ್ಟು ಕಲೆಸಿ ಮೊದಲನೆಯ ಉಂಡೆಯನ್ನು
ಇಟ್ಟು ಮೇಲಿನ ಮುಚ್ಚಳವನ್ನು ಒತ್ತಿದೆ
ಚಪಾತಿ ಅಗಲ ಬರಲಿಲ್ಲ. ಹಾಗೆ ತೆಳ್ಳಗೂ ಆಗಲಿಲ್ಲ
ಹೀಗೆ ಎರೆಡು ಬಾರಿ ಆಯ್ತು
ಕೊನೆಗೆ ಹಾಕುತ್ತಿರುವ ಬಲ ಸಾಲದೇನೋ ಅಂದುಕೊಂಡು ಮತ್ತೊಮ್ಮೆ ಜೋರಾಗಿ ಬಲ ಹಾಕಿದೆ
ಮೇಲಿನ ಮುಚ್ಚಳ ತೆರೆದು ನೊಡುತ್ತಿದ್ದಂತೆ ತಲೆ ಗಿರ್ ಎಂದಿತು ಚಪಾತಿ ಸೀದು ಪುಡಿ ಪುಡಿ ಯಾಗಿತ್ತು
ಅದೇ ಸಮಯಕ್ಕೆ ಯಜಮಾನರು ಬರಬೇಕೆ
ಬಂದವರೇ ಇದನ್ನು ನೋಡಿ ನಂಗೆ ಈ ರೋಟಿ ಮೇಕರ್‌ನಲ್ಲಿ ಮಾಡೋದಾದರೆ ಚಪಾತೀನೆ ಬೇಡ. ಏನಿದ್ದರೂ ಲಟ್ಟಿಸಿ ಮಾಡು ಎಂದರು .
ಕೊನೆಗೆ ರೋಟ್ ಮೇಕರ್ ಮತ್ತೆ ಬಾಕ್ಸ್‌ನಲ್ಲಿ ಪ್ಯಾಕ್ ಆಗಿ ಮೇಲೆ ಕೂತಿದೆ
ಬೆಳಗ್ಗೆ ಲಟ್ಟಿಸೇ ಮಾಡಿದೆ.

Rating
No votes yet

Comments