ಲಕ್ಕು
ಆಂಗ್ಲರೂ ಸಹ ’ಲಕ್ಕನ್ನು’ ಕೆಲವೊಮ್ಮೆ ನಂಬುವುದುಂಟು !
ಅದರ ಕನ್ನಡ ಪದ ’ಅದೃಷ್ಟ’.
ದೃಷ್ಟ ಎಂದರೆ ಕಣ್ನಿಗೆ ಕಾಣುವಂಥದ್ದು.
ಅದೃಷ್ಟ ಎಂದರೆ ಕಣ್ಣಿಗೆ ಕಾಣದಿರುವಂಥದ್ದು ಎಂದರ್ಥ ವಲ್ಲವೇ?
ನಾವೆಣಿಸಿದಂತೆ ನಡೆಯದ ಕೆಲವು ಘಟನೆಗಳಿಗೆ ’ಅದೃಷ್ಟ’ ಎನ್ನುತ್ತೇವಲ್ಲವೇ?. ಈ ಅದೃಷ್ಟ ಎಂಬುವುದು ನಮ್ಮ ತರ್ಕಕ್ಕೆ ನಿಲುಕುವುದಂಥದ್ದಲ್ಲ. ಒಂದೇ ಮನೆಯಲ್ಲಿ ಹುಟ್ಟಿದ ಸಹೋದರರಲ್ಲಿ ಒಬ್ಬ ಆಗಸದಷ್ಟು ಪ್ರಸಿದ್ಧಿ ಪಡೆದರೆ ಇನ್ನೊಬ್ಬ ಮನೆಗೇ ಸೀಮಿತ ! ಇವನೇಕೆ ಹೀಗೆ? ಅವನೇಕೆ ಹಾಗೆ?
ಇದಕ್ಕೆ ಕೆಲವರು ಹೀಗೆ ವ್ಯಾಖ್ಯಾನಿಸುತ್ತಾರೆ. ಬುಧ್ಧಿಗೂ ಮಿಗಿಲಾಗಿ ಸ್ವಭಾವ ಎಂಬುದೊಂದಿರುತ್ತದೆ. ಹೇಗೆ ಹಲಸಿಗೆ ಸಿಹಿಸ್ವಭಾವವೋ, ನಿಂಬೆಗೆ ಕಹಿ ಸ್ವಭಾವವೋ ಹಾಗೆ. ಸ್ವಭಾವಕ್ಕನುಗುಣವಾಗಿ ಪ್ರಚೋದನೆಗಳು.
ಅರಳೀಮರದ ಹಣ್ಣುಗಳನ್ನು ನೋಡಿ ಅಷ್ಟು ದೊಡ್ಡಮರವೆಂದುಕೊಂಡು ಕುಂಬಳಕಾಯಿಗೆ ಇನ್ನೆಷ್ಟು ದೊಡ್ಡ ಮರವಿರಬೇಕು ಎಂದುಕೊಳ್ಳುವಷ್ಟರಲ್ಲೇ ನಮ್ಮ ತರ್ಕ ಸೋಲುತ್ತದೆ! ಎಷ್ಟು ವಿಚಿತ್ರವಲ್ಲವೇ ಈ ಕಾಣದ ಕೈಗಳ ಆಟ !
Rating