ಲತಾಮಂಗೇಶ್ಕರ್, ಒಬ್ಬ ಮಹತ್ವದ ಸಾಂಸ್ಕೃತಿಕ ರಾಯಭಾರಿ  !

ಲತಾಮಂಗೇಶ್ಕರ್, ಒಬ್ಬ ಮಹತ್ವದ ಸಾಂಸ್ಕೃತಿಕ ರಾಯಭಾರಿ  !

ಚಿತ್ರ

ಲೇಖಕರು : ಎಚ್ಚಾರೆಲ್, (ಸಂಪದ ತಾಣದಲ್ಲಿ ಶುರುವಿನಿಂದ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ)

'ಕನ್ನಡ ವಿಕಿಪೀಡಿಯದ ಸಂಪಾದಕರು', ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ. 

ಬ್ಲಾಗ್ ಲೇಖಕರು, ಫೇಸ್ಬುಕ್, ನಲ್ಲಿ ಸಕ್ರಿಯರಾಗಿದ್ದಾರೆ.  ಹಲವು ಅಂತರ್ಜಾಲ ತಾಣಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ. 

ಲತಾ ಮಂಗೇಶ್ಕರ್, ತಮ್ಮ ಟೆಲಿವಿಷನ್ ಸಂವಾದಗಳಲ್ಲಿ  ಬಡೇಗುಲಾಂ ಖಾನ್  ಹಾಗೂ ನೂರ್ ಜೆಹಾನ್ ಬೇಗಂ ತಮ್ಮ ಪರಮಾಪ್ತ ಮಾರ್ಗದರ್ಶಕರೆಂದು ಪ್ರಶಂಸಿದ್ದಾರೆ.  ಶಂಶಾದ್ ಬೇಗಂ, ಮೊದಲಾದ  ಇನ್ನೂ ಹಲವು  ಕಲಾಕಾರರ ಬಗ್ಗೆ ಅಪಾರ ಗೌರವನ್ನು ವ್ಯಕ್ತಪಡಿಸುತ್ತಾರೆ. ಬಾಲ್ಯದ  ದಿನಗಳಲ್ಲಿ ಕುಂದನ್ ಲಾಲ್ ಸೈಗಾಲ್ ಅವರ ಪರಿವಾರದ ಹಾಗೂ ವೈಯಕ್ತಿವಾಗಿ ಲತಾರವರ ಆರಾಧ್ಯ ದೈವವೆಂದು ಪೂಜಿಸುತ್ತಿದ್ದರು. ಜೀವನದಲ್ಲಿ ಮುಂದುವರೆದು  ಪ್ರಗತಿಯ ಮೆಟ್ಟಿಲುಗಳನ್ನು ಏರಿದ ನಂತರ, ನೂರ್ ಜಹಾನ್ ಬೇಗಂ ಹಾಗೂ ಬಡೇ ಗುಲಾಮ್ ಖಾನ್ ಅವರ ಮನದಾಳದಲ್ಲಿ ಸೆರೆಯಾದರು. ಮುಂದೆ ಅವರ ಸಾನ್ನಿಧ್ಯಕ್ಕೆ  ಬಂದ ಎಲ್ಲ  ಹೊಸ ಕಲಾಕಾರರೂ 'ಲತಾ ದೀದಿ'ಯವರಿಗೆ ಪ್ರಿಯವಾಗುತ್ತಾರೆ. ಯಾವುದೇ ಉತ್ಕೃಷ್ಟ ಸಂಗೀತ ಪದ್ಧತಿ ಅವರಿಗೆ ನೆಮ್ಮದಿ ಕೊಡುತ್ತದೆ. ಬಡೇ ಗುಲಾಂ ಅಲಿ ಖಾನ್ ರವರ ಬಗ್ಗೆ ಹೇಳುವುದಾದರೆ, 'ರಾಷ್ಟ್ರದ ಪ್ರತಿ ಮಗುವಿಗೂ ಹಿಂದೂಸ್ತಾನಿ ಸಂಗೀತದ 'ರಿಯಾಜ್' ಕೊಡಿಸುವಂತಾದರೆ, ದೇಶದ  ವಿಭಾಜನೆ ಖಂಡಿತ ಆಗುತ್ತಿರಲಿಲ್ಲ'ವೆಂದು  ಹೋದೆಡೆಯಲ್ಲೆಲ್ಲಾ ಅವರು  ಹೇಳುತ್ತಿದ್ದರು. ಹೀಗೆ ಈ ಸಂಗೀತ ದಿಗ್ಗಜರು, ರಾಷ್ಟ್ರ ರಾಷ್ಟ್ರಗಳ ಮಧ್ಯೆ ಇದ್ದ ಸಂಶಯ ಮತ್ತು ವಿವಾದಗಳನ್ನು ಹೊಡೆದೋಡಿಸುವ ದಿಕ್ಕಿನಲ್ಲಿ ಅದ್ಭುತ ಕೊಡುಗೆಯನ್ನು ಕೊಟ್ಟಿದ್ದಾರೆ. ಲತಾಮಂಗೇಶ್ಕರ್ ನಿಧನದ ಬಳಿಕ, ಹತ್ತು ಹಲವು ಪಾಕಿಸ್ತಾನಿ ಸಂಗೀತ ಕಾರರು ಲತಾ ದೀದಿಯವರ ಬಗ್ಗೆ ಮುಕ್ತ ಕಂಠದಿಂದ ಹೊಗಳಿದ್ದಾರೆ, ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ, ಸಹಿತ.  ಒಟ್ಟಾರೆ ವಿಶ್ವದಲ್ಲಿ, ಹಾಗೂ ಪಾಕಿಸ್ತಾನದಲ್ಲಿ ಲತಾಮಂಗೇಶ್ಕರ್ ಗೀತೆಗಳನ್ನು ಕೇಳುವ ಆಸಕ್ತರು ಸಹಸ್ರಾರುಮಂದಿ.  

ಒಳ್ಳೆಯ ಕಟ್ಟುಮಸ್ತಾದ ಪೈಲ್ವಾನ್ ತರಹದ ಹಟ್ಟಾ ಕಟ್ಟಾ ಶರೀರ,ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಅವರು, 1902 ರಲ್ಲಿ ಬ್ರಿಟಿಷ್ ಇಂಡಿಯಾದ ಹಿಂದಿನ ಪಂಜಾಬ್ ಪ್ರಾಂತ್ಯದ 'ಕಸೂರ್'‌ನಲ್ಲಿ ಜನಿಸಿದರು. 1947 ರಲ್ಲಿ ಭಾರತದ ವಿಭಜನೆಯ ನಂತರ, ಕಸೂರ್ ಜಿಲ್ಲೆ ಪಾಕಿಸ್ತಾನದ ಸುಪರ್ದಿಗೆ ಹೋಯಿತು. '೨೦ನೆಯ ಶತಮಾನಂದದ ತಾನ್ಸೇನ್' ಎಂದೇ  ಸಂಗೀತಪ್ರಿಯರು ಅವರನ್ನು ಸಂಬೋಧಿಸುತ್ತಿದ್ದರು. ಪಾಟಿಯಾಲ ಘರಾನಾವನ್ನು ಅತ್ಯುನ್ನತ ಶಿಖರಕ್ಕೆ ಕೊಂಡೊಯ್ದ ಸುರಿಲೇ  ದಿಗ್ಗಜ ಸಂಗೀತಕಾರ, ಉಸ್ತಾದ್ ಬಡೇ ಗುಲಾಂ ಆಲಿ ಖಾನ್ ರವರು.  ಸಂಗೀತವಲ್ಲದೆ ಅವರು ಅನೇಕ  ಮಿಮಿಕ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. (ಅಣಕ)  ಮತ್ತು ಅಡುಗೆ ಅವರ ಆಸಕ್ತಿಯ ವಿಷಯಗಳಲ್ಲೊಂದಾಗಿತ್ತು. ಠುಮ್ರಿಯಲ್ಲಿ ಎತ್ತಿದ ಕೈ. "ಕಾ ಕರೂ ಸಜನಿ ಆಯೇ ನ ಬಾಲಮ" ಅವರ ಅತ್ಯಂತ ಜನಪ್ರಿಯ  ಹಾಡು. ಏಸುದಾಸ್ ಅವರು  ಇದೇ  ಹಾಡನ್ನು ಸ್ವಾಮಿ ಚಲನ ಚಿತ್ರದಲ್ಲಿ ಅಳವಡಿಸಿದ್ದಾರೆ.  ಸಂಗೀತದಲ್ಲಿ ತಾಲೀಮ್ ಸಿಕ್ಕಿತು ೨೧ ವರ್ಷ ಬೆನಾರೆಸ್ ಗೆ ಹೋದರು. ಸಾರಂಗಿ ಬಾರಿಸುವುದಲ್ಲದೆ ಹಾಡುಗಾರಿಕೆ ಕಲ್ಕತ್ತದಲ್ಲಿ ನಡೆದ ಸಂಗೀತ ಕಚೇರಿಯ ನಂತರ ಅವರ ಜನಪ್ರಿಯತೆ ಬಹಳವಾಗಿ  ಹೆಚ್ಚಿತು. 'ರಾಷ್ಟ್ರದ ಪ್ರತಿ ಮಗುವಿಗೂ ಹಿಂದೂಸ್ತಾನಿ ಸಂಗೀತದ 'ರಿಯಾಜ್' ಕೊಡಿಸುವಂತಾದರೆ,  ದೇಶದ ವಿಭಾಜನೆ ಖಂಡಿತ ಆಗುತ್ತಿರಲಿಲ್ಲ'ವೆಂದು ಬಡೇ ಗುಲಾಂ ಅಲಿ ಖಾನ್ ರವರು  ಹೋದೆಡೆಯಲ್ಲೆಲ್ಲಾ ಹೇಳುತ್ತಿದ್ದರು. 

ಲತಾಮಂಗೇಶ್ಕರ್ ಧ್ವನಿಯನ್ನು ಮೊಟ್ಟಮೊದಲ ಬಾರಿಗೆ ಕೇಳಿದ ಬಡೇ ಗುಲಾಮ್ ಆಲಿ ಖಾನ್, ಪ್ರತಿಕ್ರಿಯಿಸಿದ್ದು ಹೀಗೆ  :

ಸುರಮಂಡಲ ವಾದ್ಯದಲ್ಲಿ ತಲ್ಲೀನರಾಗಿ ಹಾಡುತ್ತಿದ್ದ ಬಡೇ ಗುಲಾಮ್  ಆಲಿ ಖಾನ್  ರವರು,  ಒಮ್ಮೆಲೇ ಒಂದು ಕೋಕಿಲ ಕಂಠದ ಸ್ವರವನ್ನು ಆಲಿಸಿ ಪ್ರಫುಲ್ಲಿತರಾದರು. ಅದು  ಅನಾರ್ಕಲಿ ಚಿತ್ರದ ಲತಾಮಂಗೇಶ್ಕರ್ ಹಾಡಿದ ಅದ್ಭುತ ಗೀತೆ. ಇದನ್ನು ಆಲಿಸಿದ ಅವರ ಮನಸ್ಸಿನಲ್ಲಿ ಒಂದು ಸವಾಲು ಉತ್ಪನ್ನವಾಯಿತು.  ತಮ್ಮ ಸುರಮಂಡಲ್ ವಾದ್ಯವನ್ನು ತೆಗೆದು ಪಕ್ಕಕ್ಕಿಟ್ಟು, ಮೇಲೆದ್ದರು.  ವಿಚಲಿತರಾದ ಅವರು ಒಮ್ಮೆಲೇ ಗುಡುಗಿದರು.  'ಕಂಬಹ್ ಕಭಿ ಬೇಸುರಿ ಸ್ವರ್ ಮೇ ಗಾತೀಹಿ  ನಹಿ ; ಔರ್  ಗಲತ್ ಗಾತಿಹಿ ನಹಿಕಭಿತೋ ಸುರ್ಸೆ ಭಟಕ್ಜಾಯೆ, ಯೆ ಕಭೀಭೀ ಭಟಕ್ತೀ ಹಿನಹಿ. ಇತ್ನಾಪ್ಯಾರಾ, ಅಚ್ಛಿಗಾತೀ ಹೈ; ಕಭೀತೊ ಗಲತ್ಗಾದೆ'' ಎಂದು  ಅವರು ಉದ್ಗರಿಸಿದರು.  ಈ ವಿಷಯ ಸಂಗೀತ ಪ್ರೇಮಿಗಳಿಗೆ ತಿಳಿದದ್ದು, ಸೋನು ನಿಗಮ್ ಆಯೋಜಿಸಿದ ಷೋ ಒಂದರಲ್ಲಿ ಗಾನ ಮಾರ್ತಾಂಡ ಪಂಡಿತ್ ಜಸ್ ರಾಜ್, ವೇದಿಕೆಯಮೇಲೆ ಬಡೇ ಗುಲಾಮ್ ಆಲಿ ಖಾನ್ ರವರ ಸಂಗೀತವನ್ನು ಪ್ರಶಂಸಿಸುತ್ತಾ ಈ ವಿಷಯವನ್ನು ಸಾದರಪಡಿಸಿದರು.

ಕಲ್ಕತ್ತನಗರದಲ್ಲಿ ಹೇಮಂತಕುಮಾರ್ ಮುಖರ್ಜಿಯವರು ಆಯೋಜಿಸಿದ ಸಂಗೀತ ಕಾರ್ಯಕ್ರಮವೊಂದರಲ್ಲಿ  ಠುಮ್ರಿ ಶೈಲಿಯಲ್ಲಿ ಅದ್ವಿತೀಯ ಗಾಯಕರಾದ ಬಡೇ ಗುಲಾಂ ಅಲಿ ಖಾನ್ ರವರು   ಸುರಸಾಮ್ರಾಜ್ಞಿ ಲತಾಮಂಗೇಶ್ಕರ್ ಜತೆಯಲ್ಲಿ ಒಟ್ಟಾಗಿ ಹಾಡಿದರು. ಈ ಕಾರ್ಯಕ್ರಮದ ನಂತರ, ಬಡೇ ಗುಲಾಂ ಅಲಿ ಖಾನ್ ರಾಷ್ಟ್ರದಾದ್ಯಂತ ಅಪಾರ  ಜನಮನ್ನಣೆಯನ್ನು ಗಳಿಸಿದರು. 

ಪಹಾಡಿ ರಾಗದಲ್ಲಿ ಒಂದು ಅಮರ ರಚನೆ ಹಾಡಿದರು. 'ಹರಿ ಓಂ ತತ್ಸತ್' ಹಾಡುವಾಗ 'ಪ್ಯಾರ್ ಮೇ ಖೋ ಜಾತಾ ಹೂ' ಎಂದು ಹೇಳುವಾಗ ಅವರ ಮುಖದಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತದೆ. 

ಪ್ರಶಸ್ತಿಗಳು : 

೧. ೧೯೬೨, ಪದ್ಮಭೂಷಣ್  ಪ್ರಶಸ್ತಿ,

೨. ೧೯೬೨,  ಸಂಗೀತ್ ನಾಟಕ್ ಅಕ್ಯಾಡೆಮಿ, 

೩. ಫೆಲೋ ಆಫ್ ಸಂಗೀತ್ ನಾಟಕ್ ಅಕ್ಯಾಡೆಮಿ, 

೩. ೧೯೬೮ ರಲ್ಲಿ  ಫಿಲಮ್ಸ್ ಡಿವಿಷನ್ ಡೈರೆಕ್ಟರ್, ಎಚ್ ದಾಸಗುಪ್ತ,  'ಉಸ್ತಾದ್ ಬಡೇ ಗುಲಾಮ್ ಆಲಿ ಖಾನ್ ಸಾಹಿಬ್',  ಒಂದು ವೃತ್ತಚಿತ್ರವನ್ನು ನಿರ್ಮಿಸಿದ್ದಾರೆ. 

೫. ೨೦೧೭ ರಲ್ಲಿ ' ಬಡೇ ಗುಲಾಂ ಆಲಿ ಖಾನ್ ಯಾದ್ಗಾರ್ ಸಭಾ'  ಎಂಬ ಸಂಸ್ಥೆಯನ್ನು ಅವರ  ಶಿಷ್ಯೆ, ಮಾಲತಿ ಗಿಲಾನಿ ಸ್ಥಾಪಿಸಿದರು. 

'ಬಡೇ ಗುಲಾಮ್  ಆಲಿ', ತನ್ನ ಐದನೇ ವಯಸ್ಸಿನಲ್ಲೇ, ತನ್ನ ಚಾಚಾ, ಕಾಲೇ ಖಾನ್‌ನಿಂದ ಮತ್ತು ನಂತರ ಅವರ ತಂದೆಯಿಂದ ಗಾಯನ ಸಂಗೀತದಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರಿಗೆ ಬರ್ಕತ್ ಅಲಿ ಖಾನ್, ಮುಬಾರಕ್ ಅಲಿ ಖಾನ್ ಮತ್ತು ಅಮಾನತ್ ಅಲಿ ಖಾನ್ ಎಂಬ ಮೂವರು ಕಿರಿಯ ಸಹೋದರರಿದ್ದರು. ಬಡೇ ಗುಲಾಮ್ ರವರು, ತಮ್ಮ ದಿವಂಗತ ತಂದೆ ಅಲಿ ಬಕ್ಷ್ ಖಾನ್ ಮತ್ತು ಚಿಕ್ಕಪ್ಪ ಕಾಲೇ ಖಾನ್ ಅವರ ಕೆಲವು ಸಂಯೋಜನೆಗಳನ್ನು ಹಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.  ಬಡೇ ಗುಲಾಮ್ ಅವರು ಮೂರು ಸಂಪ್ರದಾಯಗಳಲ್ಲಿ ಅತ್ಯುತ್ತಮವಾದದ್ದನ್ನು ತಮ್ಮದೇ ಆದ ಪಟಿಯಾಲ-ಕಸೂರ್ ಶೈಲಿಯಲ್ಲಿ ಸಂಯೋಜಿಸಿದರು. ಖಯಾಲ್ ದ್ರುಪದ್, ಠುಮ್ರಿ,ಬೆಹ್ರಾಮ್ ಖಾನಿ ಅಂಶಗಳು, ಜೈಪುರದ ಗೈರೇಶನ್ಸ್, ಮತ್ತು ಗ್ವಾಲಿಯರ್‌ನ ಬೆಹ್ಲಾವಾಗಳು (ಅಲಂಕಾರಗಳು). ಅವರ ಅನೇಕ ರಾಗ ನಿರೂಪಣೆಗಳು ಸಂಕ್ಷಿಪ್ತವಾಗಿದ್ದವು, ಅವು ಸಂಪ್ರದಾಯಕ್ಕೆ ವಿರುದ್ಧವಾಗಿವೆ. ಮತ್ತು ಶಾಸ್ತ್ರೀಯ ಸಂಗೀತದ ಸೌಂದರ್ಯವು ಇನ್ನೂ  ಸುಧಾರಣೆಯ ಹಂತದಲ್ಲಿದೆ  ಎಂದು ಅವರು ಒಪ್ಪಿಕೊಂಡರು, ಸಂಗೀತ  ಕಚೇರಿಗಳಲ್ಲಿ  ಪ್ರೇಕ್ಷಕರು ದೀರ್ಘವಾದ ಆಲಾಪಗಳನ್ನು ಹೆಚ್ಚು ಬಯಸುವುದಿಲ್ಲವೆನ್ನುವ ವಿಷಯವನ್ನು  ಅವರು ಗಮನಿಸಿದ್ದರು.  ವಿಶೇಷವಾಗಿ ಜನಸಾಮಾನ್ಯರಿಗೆ ಇಷ್ಟವಾಗುವ ಬಂದಿಶ್ ಗಳನ್ನೂ  ಪರಿಗಣಿಸಿ ತಮ್ಮ ಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಅಳವಡಿಸಿಕೊಂಡರು. ಪ್ರೇಕ್ಷಕರು ಬಯಸಿದ್ದ ರಾಗಗಳನ್ನಾಧರಿಸಿ  ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅದಾನ, ಭೂಪಾಲಿ, ಹಮೀರ್, ಜೈಜೈವಂತಿ ಮತ್ತು ಜೌನ್‌ಪುರಿಯಂತಹ ಹೆಚ್ಚು ಲಘುವಾದ ರಾಗಗಳನ್ನು ತಮ್ಮಆಯ್ಕೆ ಮಾಡಿಕೊಂಡರು. 'ಸಬ್ರಂಗ್' ಎಂಬ  ಕಾವ್ಯನಾಮದಲ್ಲಿ ಅವರು ಅನೇಕ ಹೊಸ ಸಂಯೋಜನೆಗಳನ್ನು ರಚಿಸಿದರು. ಅವರ ಕಿರಿಯ ಮಗ ಮುನಾವರ್ ಅಲಿ ಖಾನ್‌ಗಿಂತ ಭಿನ್ನವಾಗಿ, ಅವರು ವಿಶೇಷ  ಕಂಠಸಿರಿಯನ್ನು  ಹೊಂದಿದ್ದರು, ಖಾನ್ ಸಾಹೇಬರ  ಧ್ವನಿ ಸ್ಪಷ್ಟವಾಗಿತ್ತು.  ಮಗನ ಸಹಾಯದೊಂದಿಗೆ ಅವನ  ಜತೆಯಲ್ಲಿ ತಮ್ಮ ಅಂತ್ಯ ಕಾಲದವರೆಗೂ ಕಚೇರಿಗಳಲ್ಲಿ ಹಾಡುತ್ತಿದ್ದರು. 

1947 ರಲ್ಲಿ ಭಾರತದ ವಿಭಜನೆಯ ನಂತರ, ಬಡೇ ಗುಲಾಂ ಅಲಿ ಖಾನ್ ಪಾಕಿಸ್ತಾನದ ತನ್ನ ತವರೂರು 'ಕಸೂರ್'‌ಗೆ ಹೋದರು, ಆದರೆ ನಂತರ 1957 ರಲ್ಲಿ ಅಲ್ಲಿ ಅವರಿಗೆ ಸರಿಹೊಂದದೆ, ಶಾಶ್ವತವಾಗಿ ನೆಲೆಸಲು ಭಾರತಕ್ಕೆ ಮರಳಿ ಬೊಂಬಾಯಿನಗರಕ್ಕೆ ಬಂದರು. ಆಗಿನ ಬಾಂಬೆ ರಾಜ್ಯದ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಅವರು,  ಖಾನ್ ಸಾಹೇಬರಿಗೆ  ಭಾರತೀಯ ಪೌರತ್ವವನ್ನು ಕೊಡಿಸುವಲ್ಲಿ ನೆರವಾದರು.  ದಕ್ಷಿಣ  ಮುಂಬೈನ ಮಲಬಾರ್ ಹಿಲ್‌ನಲ್ಲಿ ಕಡಲ ಸಮೀಪದ ಬಂಗಲೆ, ಅವರಿಗೆ ಸರ್ಕಾರದ ವತಿಯಿಂದ ಕೊಡಲಾಯಿತು. ಸಂಗೀತ ಕಛೇರಿಮಾಡುವ ಸಲುವಾಗಿ  ಅವರು ಲಾಹೋರ್, ಬಾಂಬೆ, ಕಲ್ಕತ್ತಾ ಮತ್ತು ಅಂತಿಮವಾಗಿ ಹೈದರಾಬಾದ್‌ನಲ್ಲಿ ವಿವಿಧ ಸಮಯಗಳಲ್ಲಿ ವಾಸಮಾಡಬೇಕಾಯಿತು. 

ಆಗಿನ ಕಾಲದ ಪ್ರಸಿದ್ಧ ಸಿನಿಮಾ  ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರ ಆಹ್ವಾನ, ಮತ್ತು ಅವರ  ಮನವೊಲಿಕೆಯ ಹೊರತಾಗಿಯೂ ಅವರು ಹೆಚ್ಚುಸಮಯದವರೆಗೆ  ಚಲನಚಿತ್ರಗಳಲ್ಲಿ ಹಾಡುವುದರಿಂದ ದೂರವಿದ್ದರು. ಖಾನ್ ಸಾಹೇಬರ  ಗಾಯನ  ಚಮತ್ಕಾರ, ಮಾಧುರ್ಯವನ್ನು ಮೊಟ್ಟಮೊದಲು  ಚಲನಚಿತ್ರ ನಿರ್ಮಾಪಕ ಕೆ. ಎ. ಆಸಿಫ್ ಚೆನ್ನಾಗಿ  ಗುರುತಿಸಿದರು. 1960 ರ ತಮ್ಮ ಚಲನಚಿತ್ರ, 'ಮುಘಲ್-ಎ-ಆಜಮ್'  ನೌಶಾದ್ ಅವರ ಸಂಗೀತದೊಂದಿಗೆ ರಾಗಗಳ 'ಸುಹ್ನಿ' ಮತ್ತು 'ರಾಗೇಶ್ರಿ'ಯನ್ನು ಆಧರಿಸಿ ಎರಡು ಹಾಡುಗಳನ್ನು ಹಾಡಲು ಒಪ್ಪಿಸಿದರು.  ಜನಪ್ರಿಯ  ಹಿನ್ನೆಲೆ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ್ ರಫಿಯವರ ಶುಲ್ಕದರಗಳು ಆ ಸಮಯದಲ್ಲಿ ಪ್ರತಿ ಹಾಡಿಗೆ ₹ 500 ಕ್ಕಿಂತ ಕಡಿಮೆ ಹಣಗಳಿಸುತ್ತಿದ್ದಾಗ, ಬಡೇ ಗುಲಾಂ ಅಲಿ ಖಾನ್,  ಪ್ರತಿ ಹಾಡಿಗೆ ₹ 25,000 ಶುಲ್ಕವನ್ನು ವಿಧಿಸುತ್ತಿದ್ದರು. ಕೆ. ಎ. ಆಸಿಫ್ ಅಷ್ಟು  ಹಣವನ್ನು ಪಾವತಿಮಾಡಿ, ಎರಡು ಹಾಡುಗಳನ್ನು ಅವರಿಂದ ಹಾಡಿಸಿದರು 

ನಿಧನ :

ಬಡೇ ಗುಲಾಂ ಆಲಿ ಖಾನ್   ಬಹಳ ಸಮಯ ಅನಾರೋಗ್ಯದಿಂದ ನರಳಿ, ಹೈದರಾಬಾದಿನ ಬಶೀರ್ ಗಢ್ ಅರಮನೆಯಲ್ಲಿ ೩೦, ಅಕ್ಟೊಬರ್, ೧೯೬೮ ರಂದು ನಿಧನರಾದರು.  ಆ ಪ್ಯಾಲೇಸ್ ಹತ್ತಿರದ  ಪ್ರಮುಖ ರಸ್ತೆಯೊಂದರ ಹೆಸರನ್ನು, 'ಬಡೇ ಗುಲಾಂ ಅಲಿ ಖಾನ್ ರಸ್ತೆ' ಎಂದು  ಇಡಲಾಗಿದೆ. 

 

ಸೌಜನ್ಯತೆ : ಮೇಲಿನ ಚಿತ್ರ : ಟೈಮ್ಸ್ ಆಫ್ ಇಂಡಿಯಾ. 

 

 

Rating
Average: 4 (1 vote)