ಲಹರಿ
ಚೈತ್ರ ರಥವನೇರಿ
ಶುಭ ಯೋಗವ ತರುವ
ಹೊಸ ಯುಗ ಗೀತೆಗೆ
ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦
ರಂಗೇರಿದ ವಸುಂಧರೆಯ ಸೊಬಗ ನೋಡುತ
ಭ್ರಮರದ ತಂಬೂರಕೆ
ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು
ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦
ಪಂಚಮದಲ್ಲಿ ಕೊಗಿಲೆಯು
ಸಂಗೀತ ಸುಧೆ ಹರಿಸಲು
ಹೃದಯ ವೀಣೆ ಮಿಡಿದಿದೆ ಮೋಹನ ರಾಗ
ಹಾಡಬೇಕೆನಿಸಿದೆ ಪ್ರೇಮ ರಾಗ ¦¦ ೩ ¦¦
ವಸಂತ ತರುವ ಹೊಸ
ಜೀವನದ ಲಹರಿಗೆ
ಗೆಜ್ಜೆ ಕಟ್ಟಿ ಕುಣಿಯಲು ಮನಸು
ನಾ ಹಾಡುವೆ ಹೊಸ ಬದುಕಿನ ಗೀತೆ ¦¦ ೪ ¦¦
- ಪ್ರಮಿತ
Rating