ಲಾ ಪರಿಣಿತರು ಕೋರ್ಟಿಗೂ, ಜನತೆಗೂ ಪಾಠ ಹೇಳಲಿ
ಕಾವೇರಿಯನ್ನು ಹರಿಯಬಿಡಿರೆಂದು ಕರ್ನಾಟಕಕ್ಕೆ ಸುಪ್ರೀಂ ಕಟ್ಟಪ್ಪಣೆ. ಯಾರೇ ಬೊಬ್ಬೆ ಹೊಡೆದರೂ, ರಾಜಕೀಯ, ಲಾಗ ಹಾಕಿದರೂ, ಜನತೆಗೆ ನಿಜವಾಗಿ ಅನ್ಯಾಯವಾದರೂ, ಕರ್ನಾಟಕ ತಮಿಳ್ನಾಡಿಗೆ ನೀರು ಬಿಡದೆ ಗತ್ಯಂತರವಿಲ್ಲ. ನಮ್ಮ ಪ್ರಜಾಸತ್ತಾ ವ್ಯವಸ್ಥೆಯಲ್ಲಿ, ಸುಪ್ರೀಂ ಕೋರ್ಟು ಪ್ರಶ್ನಾತೀತ. ಅದು ವಸ್ತುಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳದೇ ಕಟ್ಟಪ್ಪಣೆ ಕೊಡಲಾರದೆಂದು ನಮ್ಮ ವಿಶ್ವಾಸ. ಈಗ ಹಾಗಾಗಿದೆಯಲ್ಲಾ ಎಂಬ ವಿಹ್ವಲ ಹುಟ್ಟಿಸುತ್ತದೆ, ಫೆ. 8ರ ವಿಜಯ ಕರ್ನಾಟಕ ಚಿತ್ರ ಆದರೂ ನ್ಯಾಯಾಲಯ ಇಂತಹ ಘೋರ ತೀರ್ಪು ನೀಡಿತೇ? ನಮ್ಮ ಪ್ರಸ್ತುತದ ತಿಪ್ಪೆಗುಂಡಿ ರಾಜಕಿಯದಲ್ಲಿ, ನ್ಯಾಯಾಂಗವೊಂದೇ ಸಂತ್ರಸ್ತರ ಆಶಾಕಿರಣ. ಇಂಥಾ ಸಂಕ್ಲಿಷ್ಟ ಸನ್ನಿವೇಶ, ನ್ಯಾಯವಾದಿಗಳೆಂಬ ಸಮುದಾಯದ ವಿದ್ಯೆ, ವಿವೇಕ, ಪ್ರಾಮಾಣಿಕತೆಗಳನ್ನು ಬಹುವಾಗಿ ಅಪೇಕ್ಷಿಸುತ್ತದೆ. ಅವರು, ನ್ಯಾಯಪೀಠಗಳಿಗೆ, ಸನ್ನಿವೇಶದ ವಸ್ತುನಿಷ್ಠ ಬೋಧೆ ಉಂಟುಮಾಡಬೇಕು; ಹಾಗೆಯೇ, ನ್ಯಾಯಾಲಯ ನೀಡುವ ತಿರ್ಪಿನ ತಥ್ಯಾಂಶಗಳನ್ನು ಮಹಾಜನತೆಗೆ, ಅರ್ಥವಾಗುವಂತೆ ಮನವರಿಕೆ ಮಾಡಿಕೊಡಬೇಕು. ನಿರೀಕ್ಷಿಸಬಹುದೇ?
Comments
ನ್ಯಾಯಾಧೀಶರಾದವರು ವಿವೇಕ ಹಾಗೂ
ನ್ಯಾಯಾಧೀಶರಾದವರು ವಿವೇಕ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು. ಬರಿಯ ಬರಡು ಕಾನೂನನ್ನು ಮಾತ್ರ ನೋಡಿದರೆ ಕುರುಡಾದ ತೀರ್ಪುಗಳನ್ನು ಕೊಡಲಷ್ಟೇ ಸಾಧ್ಯ. ನೀರಿನ ತೀವ್ರ ಕೊರತೆ ಇರುವಾಗ ಬಾಯಾರಿದವರಿಗೆ ನೀರು ಕೊಡುವುದು ಮುಖ್ಯವೋ ಅಥವಾ ಬೆಳೆಗಳಿಗೆ ನೀರು ಕೊಡುವುದು ಮುಖ್ಯವೋ ಎಂಬ ವಿವೇಚನೆ ಹಾಗೂ ಮಾನವೀಯ ಕಾಳಜಿ ನ್ಯಾಯಾಧೀಶರಾದವರಿಗೆ ಇರಬೇಕು. ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತೀವ್ರ ಕೊರತೆ ಉಂಟಾಗುವ ಸಂಭವ ಇರುವಾಗ ಜಲಾಶಯಗಳಲ್ಲಿ ಇರುವ ಅಲ್ಪ ನೀರನ್ನೂ ತಮಿಳುನಾಡಿನ ಬೆಳೆಗಳಿಗೆ ನೀಡಬೇಕೆಂದು ತೀರ್ಪು ನೀಡುವುದು ಅಮಾನವೀಯ ಕ್ರೌರ್ಯ ಆಗುತ್ತದೆ ಏಕೆಂದರೆ ಒಮ್ಮೆ ಹರಿಸಿದ ನೀರನ್ನು ಮರಳಿ ತರಲು ಸಾಧ್ಯವಿಲ್ಲ. ಇರುವ ನೀರನ್ನು ಉಳಿಸಿಕೊಳ್ಳದೆ ನಂತರ ಟ್ಯಾಂಕರ್ಗಳಲ್ಲಿ ತುಂಬಾ ದೂರದಿಂದ ತರುವ ಪರಿಸ್ಥಿತಿ ನಿರ್ಮಿಸುವ ತೀರ್ಪು ನೀಡುವುದು ನ್ಯಾಯಾಲಯದ ಘನತೆಗೆ ಮಾರಕ. ಇದು ಇನ್ನಷ್ಟು ಇಂಧನ ಅಪವ್ಯಯ ಹಾಗೂ ವಾತಾವರಣಕ್ಕೆ ಇಂಗಾಲಾಮ್ಲ ಸೇರಿಸಲು ಕಾರಣವಾಗುತ್ತದೆ. ಹೀಗಾಗಿ ಪ್ರಖ್ಯಾತ ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ನ್ಯಾಯಾಧೀಶರಾದವರಿಗೆ ಪಾಠ ಹೇಳಬೇಕಾದ ಅಗತ್ಯ ಇದೆ.
In reply to ನ್ಯಾಯಾಧೀಶರಾದವರು ವಿವೇಕ ಹಾಗೂ by anand33
>>ಬರಿಯ ಬರಡು ಕಾನೂನನ್ನು ಮಾತ್ರ
>>ಬರಿಯ ಬರಡು ಕಾನೂನನ್ನು ಮಾತ್ರ ನೋಡಿದರೆ ಕುರುಡಾದ ತೀರ್ಪುಗಳನ್ನು ಕೊಡಲಷ್ಟೇ ಸಾಧ್ಯ. +೧. >>>ನೀರಿನ ತೀವ್ರ ಕೊರತೆ ಇರುವಾಗ ಬಾಯಾರಿದವರಿಗೆ ನೀರು ಕೊಡುವುದು ಮುಖ್ಯವೋ ಅಥವಾ ಬೆಳೆಗಳಿಗೆ ನೀರು ಕೊಡುವುದು ಮುಖ್ಯವೋ ಎಂಬ ವಿವೇಚನೆ ಹಾಗೂ ಮಾನವೀಯ ಕಾಳಜಿ ನ್ಯಾಯಾಧೀಶರಾದವರಿಗೆ ಇರಬೇಕು. +೧. ನಮ್ಮ ಕಡೆಯ ವಕೀಲರು ಏನು ಮಾಡುತ್ತಿದ್ದಾರೆ? ಪ್ರತೀ ಸಲ ನ್ಯಾಯಾಲಯ ಆದೇಶ ಕೊಟ್ಟಾಗ "ಈವಾಗ ನೀರು ಬಿಡಿ" ಎಂದು ಕರ್ನಾಟಕ ಸರ್ಕಾರಕ್ಕೆ ಸಲಹೆ ಕೊಡಲು ಇರುವುದೋ!? ನಮ್ಮ ಸರ್ಕಾರವೂ ಹಾಗೇ ಇದೆ..ಬಿಡಲಾರೆ ಬಿಡಲಾರೆ ಎಂದು ಕತ್ತಲಲ್ಲಿ ನೀರು ಬಿಟ್ಟು ಕೈಚೆಲ್ಲಿ ಕುಳಿತುಕೊಳ್ಳುತ್ತದೆ. ಥತ್..
In reply to >>ಬರಿಯ ಬರಡು ಕಾನೂನನ್ನು ಮಾತ್ರ by ಗಣೇಶ
ಈಗ ಸರ್ಕಾರ ನೀರು ಬಿಟ್ಟಿದೆ!
ಈಗ ಸರ್ಕಾರ ನೀರು ಬಿಟ್ಟಿದೆ!
In reply to ಈಗ ಸರ್ಕಾರ ನೀರು ಬಿಟ್ಟಿದೆ! by kavinagaraj
ಸರ್ಕಾರ ಅವರಿಗೆ ನೀರನ್ನು
ಸರ್ಕಾರ ಅವರಿಗೆ ನೀರನ್ನು ಬಿಟ್ಟಿದೆ ... ಅದರಂತೆ ನಮ್ಮ ರೈತರ ಬಾಯಿಗೆ ನೀರು ಬಿಟ್ಟಿದೆ ::(