ಲಿನಕ್ಸಾಯಣ: ರೂಪಾಯಿ ಚಿನ್ಹೆ ಬರೆಯೋದು ಹೇಗೆ?
ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರೂಪಾಯಿ ಚಿನ್ಹೆ ಟೈಪಿಸಬಹುದು.
ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ,
- Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ.
- ಈಗ 20B9 ಟೈಪಿಸಿ (ಸಣ್ಣ ಅಥವ ಚಿಕ್ಕ ಅಕ್ಷರಗಳ ಬಗ್ಗೆ ಚಿಂತೆ ಬೇಡ)
- ಕೊನೆಗೆ ಸ್ಪೇಸ್ ಬಾರ್ ಪ್ರೆಸ್ ಮಾಡಿ ರೂಪಾಯಿ ಚಿನ್ಹೆ ಬರುವುದನ್ನು ನೋಡಿ.
ನೀವು HTML ಕಡತ ತಯಾರಿಸುತ್ತಿದ್ದಲ್ಲಿ ಈ ಕೋಡ್ ಬಳಸಬಹುದು,
ನೀವು ಹಳೆಯ ಉಬುಂಟು ಆವೃತ್ತಿಗಳನ್ನು ಬಳಸುತ್ತಿದ್ದಲ್ಲಿ, ಉಬುಂಟುವಿನ ಹೊಸ ಫಾಂಟ್ ಅನ್ನು ಇಲ್ಲಿಂದ ಪಡೆದುಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬಹುದು
Rating