ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
"ಹ್ಯಾವ್ ಅ ಸಿಮ್ ಆನ್ ಇಟ್?" (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ ಟಿ.ವಿ ಯಲ್ಲಿ ಬರುತ್ತಿರುವ ಜಾಹೀರಾತು. ಬಿ.ಎಸ್.ಎನ್.ಎಲ್ ಕೂಡ ಇದನ್ನ ಅತ್ಯಂತ ಕಡಿಮೆ ಬೆಲೆಗೆ ನೀಡ್ತಿದೆ. Evolution-Data Optimized ಅನ್ನೋ ಈ ವೈರ್ಲೆಸ್ ಟೆಲಿಕಮ್ಯೂನಿಕೇಷನ್ ತಂತ್ರಜ್ಞಾನ Dial-up ಗಿಂತ ಹೆಚ್ಚಿನ ವೇಗದ ಇಂಟರ್ನೆಟ್ ಕನೆಕ್ಷನ್ ಅನ್ನ ನಿಮ್ಮ ಮುಂದೆ ಇಡುತ್ತದೆ. ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ ದೊರಕುತ್ತದೆ.
ಗ್ನು/ಲಿನಕ್ಸ್ ಹಬ್ಬ ಹಾಗು ಇತರೆ ಸಂದರ್ಭಗಳಲ್ಲಿ ನನಗೆ BSNL EvDO ಇಂಟರ್ನೆಟ್ ಸಂಪರ್ಕವನ್ನ ಕೊಟ್ಟು ತುಂಬಾ ಸಹಾಯ ಮಾಡಿದೆ. ತಿಂಗಳಿಗೆ ೫೧೨ ರೂಗೆ ಅನ್ಲಿಮಿಟೆಡ್ ಸಂಪರ್ಕ ಸಾರ್!
EvDO ಕೆಳಗೆ ಕೊಟ್ಟಿರುವ ಚಿತ್ರದಲ್ಲಿರುವಂತೆ ಕಾಣುತ್ತದೆ.
ಚಿತ್ರ ತೆಗೆದವರು : ಹೆಚ್.ಪಿ.ಎನ್
ಬಿ.ಎಸ್.ಎನ್.ಎಲ್ ಕೊಡುವ ಇ.ವಿ.ಡಿ.ಒ ದ ಹೆಸರು ಇಂತಿದೆ : ZTE EV-DO AC8700 800M
ಇದನ್ನ ಅಭಿವೃದ್ದಿ ಪಡಿಸಿದ ಕಂಪೆನಿ : Qualcomm, Inc.
ನೀವು ಉಬುಂಟು ೮.೦೪ ಅನ್ನ ನಿಮ್ಮ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿ ಕೊಂಡಿದ್ದರೆ EvDO ಉಪಯೋಗಿಸಲಿಕ್ಕೆ ಕೆಳಗೆ ಕೊಟ್ಟಿರುವ ಸೂಚನೆಯನ್ನ ಗಮನಿಸಿ.
wvdialconf /etc/wvdial.conf
ಅದರ ಔಟ್ಪುಟ್ ಹೀಗಿರುತ್ತೆ :
[quote] # wvdialconf / etc /wvdial.conf
Writing ` / etc /wvdial.conf’.
Scanning your serial ports for a modem.
Modem Port Scan<*1>: S0 S1 S2 S3
WvModem<*1>: Cannot get information for serial port.
ttyUSB0<*1>: ATQ0 V1 E1 — OK
ttyUSB0<*1>: ATQ0 V1 E1 Z — OK
ttyUSB0<*1>: ATQ0 V1 E1 S0=0 — OK
ttyUSB0<*1>: ATQ0 V1 E1 S0=0 &C1 — OK
ttyUSB0<*1>: ATQ0 V1 E1 S0=0 &C1 &D2 — OK
ttyUSB0<*1>: ATQ0 V1 E1 S0=0 &C1 &D2 +FCLASS=0 — OK
ttyUSB0<*1>: Modem Identifier: ATI — Manufacturer: QUALCOMM INCORPORATED
ttyUSB0<*1>: Speed 4800: AT — OK
ttyUSB0<*1>: Speed 9600: AT — OK
ttyUSB0<*1>: Speed 19200: AT — OK
ttyUSB0<*1>: Speed 38400: AT — OK
ttyUSB0<*1>: Speed 57600: AT — OK
ttyUSB0<*1>: Speed 115200: AT — OK
ttyUSB0<*1>: Speed 230400: AT — OK
ttyUSB0<*1>: Speed 460800: AT — OK
ttyUSB0<*1>: Max speed is 460800; that should be safe.
ttyUSB0<*1>: ATQ0 V1 E1 S0=0 &C1 &D2 +FCLASS=0 — OK
WvModem<*1>: Cannot get information for serial port.
ttyUSB1<*1>: ATQ0 V1 E1 — failed with 2400 baud, next try: 9600 baud
ttyUSB1<*1>: ATQ0 V1 E1 — failed with 9600 baud, next try: 115200 baud
ttyUSB1<*1>: ATQ0 V1 E1 — and failed too at 115200, giving up.
WvModem<*1>: Cannot get information for serial port.
ttyUSB2<*1>: ATQ0 V1 E1 — failed with 2400 baud, next try: 9600 baud
ttyUSB2<*1>: ATQ0 V1 E1 — failed with 9600 baud, next try: 115200 baud
ttyUSB2<*1>: ATQ0 V1 E1 — and failed too at 115200, giving up.
Found a modem on / dev / ttyUSB0.
/ etc / wvdial.conf<Warn>: Can’t open ‘/ etc / wvdial.conf’ for reading: No such file or directory
/ etc / wvdial.conf<Warn>: …starting with blank configuration.
Modem configuration written to /etc/wvdial.conf.
ttyUSB0<Info>: Speed 460800; init “ATQ0 V1 E1 S0=0 &C1 &D2 +FCLASS=0″
[/quote]
ಇದು ನಿಮ್ಮ ಕಂಪ್ಯೂಟರಿನಲ್ಲಿ /etc/wvdial.conf ಎಂಬ ಫೈಲನ್ನ ಸೇರಿಸ್ತದೆ. ಅದರಲ್ಲಿರುವ ಕಾನ್ಫಿಗರೇಷನ್ ನೋಡಲು ಟರ್ಮಿನಲ್ ನಲ್ಲಿ (Applications -> Accessories -> Terminal) cat ಕಮ್ಯಾಂಡನ್ನು ಕೆಳಗಿನಂತೆ ಬಳಸ ಬಹುದು.
[quote] # cat /etc/wvdial.conf
;Dialer Defaults
Init2 = ATQ0 V1 E1 S0=0 &C1 &D2 +FCLASS=0
Modem Type = Analog Modem
; Phone = <Target Phone Number>
ISDN = 0
; Username = <Your Login Name>
Init1 = ATZ
; Password = <Your Password>
Modem = /dev/ttyUSB0
Baud = 460800
[/quote]
ಈ ಫೈಲ್ ಅನ್ನು ನೀವು ಬದಲಿಸಿ ನಿಮ್ಮ EvDO ನ ಲಾಗಿನ್ ಐ.ಡಿ ಮತ್ತು, ಪಾಸ್ವರ್ಡ್ ಹಾಗು ಬಿ.ಎಸ್.ಎನ್.ಎಲ್ ನ ನಂ. #777 ಅನ್ನು ನೀಡಬೇಕು. (ಸೂಚನೆ : Phone, User Name ಮತ್ತು Password ನ ಹಿಂಬದಿಯಲ್ಲಿರುವ ; ಅನ್ನು ಮರೆಯದೆ ತೆಗೆಯಬೇಕು) ಹಾಗು ಕೆಳಗೆ ಕೊಟ್ಟಿರುವ ಸಾಲನ್ನು ಇದೇ ಫೈಲ್ ನಲ್ಲಿ ಕೊನೆಯಲ್ಲಿ ಹಾಕಿ.
Stupid Mode = 1
ಫೈಲ್ ಎಡಿಟ್ ಮಾಡೋದ್ ಹ್ಯಾಗೆ ಅಂತ ಹೇಳಲಿಲ್ಲ ಅಲ್ವಾ? ಅದಕ್ಕೆ ಕೆಳಗೆ ಕೊಟ್ಟ ಕಮ್ಯಾಂಡ್ ಬಳಸಿ. (Terminal ನಲ್ಲಿ)
sudo gedit /etc/wvdial.conf
ಫೈಲ್ ಅದಲಿಸಿದ ನಂತರ ಅದನ್ನ ಸೇವ್ ಮಾಡಿ.
ಈಗ ನೀವು ಇಂಟರ್ನೆಟ್ ಗೆ ಸಂಪರ್ಕ ಏರ್ಪಡಿಸಬಹುದು ಅದಕ್ಕೆ ಟರ್ಮಿನಲ್ ನಲ್ಲಿ ಈ ಕಮ್ಯಾಂಡ್ ಬಳಸಿ.
sudo wvdial
ಅದರ ಔಟ್ಪುಟ್ ಹೀಗಿರುತ್ತೆ :
[quote]
# sudo wvdial
WvDial<*1>: WvDial: Internet dialer version 1.56
WvModem<*1>: Cannot get information for serial port.
WvDial<*1>: Initializing modem.
WvDial<*1>: Sending: ATZ
WvDial Modem<*1>: ATZ
WvDial Modem<*1>: OK
WvDial<*1>: Sending: ATQ0 V1 E1 S0=0 &C1 &D2 +FCLASS=0
WvDial Modem<*1>: ATQ0 V1 E1 S0=0 &C1 &D2 +FCLASS=0
WvDial Modem<*1>: OK
WvDial<*1>: Modem initialized.
WvDial<*1>: Sending: ATDT#777
WvDial<*1>: Waiting for carrier.
WvDial Modem<*1>: ATDT#777
WvDial Modem<*1>: CONNECT
WvDial<*1>: Carrier detected. Starting PPP immediately.
WvDial<Notice>: Starting pppd at Tue Mar 4 16:26:53 2008
WvDial<Notice>: Pid of pppd: 14536
WvDial<*1>: Using interface ppp0
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: pppd: ��[06][08]��[06][08]
WvDial<*1>: local IP address 10.1.0.169
WvDial<*1>: pppd: ��[06][08]��[06][08]
WvDial<*1>: remote IP address 10.64.64.64
WvDial<*1>: pppd: ��[06][08]��[06][08]
WvDial<*1>: primary DNS address 218.248.240.23
WvDial<*1>: pppd: ��[06][08]��[06][08]
WvDial<*1>: secondary DNS address 218.248.240.135
WvDial<*1>: pppd: ��[06][08]��[06][08]
[/quote]
ಈಗ್ ಬ್ರೌಸರ್ ತೆಗೆದು ಇಂಟರ್ನೆಟ್ ಅನ್ನು ಸಂಪರ್ಕಿಸಿ.
ಡಿಸ್ಕನೆಕ್ಟ್ ಮಾಡ್ಲಿಕ್ಕೆ CTRL + c ಪ್ರೆಸ್ ಮಾಡಿದರಾಯಿತು. ನಿಮ್ಮ EvDO USB ಅನ್ನು ನೀವು ಈಗ ತೆಗೆಯ ಬಹುದು.
ನೀವು ಹಳೆಯ ಉಬುಂಟು ಹಾಕಿ ಕೊಂಡಿದ್ದರೆ ನನ್ನ ಇಂಗ್ಲೀಷ್ ಬ್ಲಾಗಿನ ಈ ಕೊಂಡಿಯನ್ನ ನೋಡಿ.