ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ

ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ

ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ?

ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ "Gnome Subtitles" ಅನ್ನೋ ತಂತ್ರಾಂಶ. ಇದರೊಡನೆ ನಿಮಗೆ ಬೇಕಾಗೋದು ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲಿಕ್ಕೆ ಉಪಯೋಗಿಸುವ SCIM . 

ಗ್ನೋಮ್ ಸಬ್ ಟೈಟಲ್ - ಗ್ನು ಹುಟ್ಟು ಹಬ್ಬಕ್ಕೆ ತಯಾರಿಸಿದ ಸ್ಟೀಫನ್ ಫ್ರೈ ಅವರೊಂದಿಗಿನ ಸಂದರ್ಶನ "ಫ್ರೀಡಂ ಫೈ" ಅನ್ನ ಮೇಲಿನ ಚಿತ್ರದಲ್ಲಿ ಎಡಿಟ್ ಮಾಡಲಾಗುತ್ತಿದೆ. 

ಇದನ್ನ ನಿಮ್ಮ ಲಿನಕ್ಸ್ ನಲ್ಲೂ ಇನ್ಸ್ಟಾಲ್ ಮಾಡ್ಕೋಬೇಕೆ? ಕೆಳಗಿನ ಕಮ್ಯಾಂಡನ್ನ ಟರ್ಮಿನಲ್ ನಲ್ಲಿ ರನ್ ಮಾಡಿ. 

sudo aptitude install gnome-subtitles

ಕನ್ನಡಕ್ಕೆ ಅನೇಕ ವಿಷಯಗಳನ್ನ ಚಿತ್ರದ/ಡಾಕ್ಯುಮೆಂಟರಿ ವಿಡಿಯೋಗಳ ಮೂಲಕ ತರಲಿಕ್ಕೆ ಈ ತಂತ್ರಾಂಶ ಉಪಯೋಗಕ್ಕೆ ಬರಲಿ ಎಂದು ಆಶಿಸುತ್ತಾ.

 

Rating
No votes yet

Comments