ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು  ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ. ಈಗ ನೀವು ಲಿನಕ್ಸ್ ನ root ಯೂಸರ್ ಆಗಿರುತ್ತೀರಿ (ಅಂದರೆ ಲಿನಕ್ಸ್ ನ ಮುಖ್ಯ ಅಡ್ಮಿನ್ ಬಳಕೆದಾರ ಅಥವಾ ಸೂಪರ್ ಯೂಸರ್). ಇಲ್ಲಿಂದ ನೀವು ಕಮ್ಯಾಂಡ್ ಲೈನ್ ಟೂಲ್ ಗಳನ್ನು ಬಳಸಿ ನಿಮ್ಮಆಪರೇಟಿಂಗ್ ಸಿಸ್ಟಂ ಸರಿ ಪಡಿಸಿಕೊಳ್ಳಬಹುದು. ಮುಖ್ಯವಾಗಿ ಬೂಟಿಂಗ್ ಮತ್ತು ಲಿನಕ್ಸ್ ಫೈಲ್ ಸಿಸ್ಟಂಗೆ ಸಂಬಂದ ಪಟ್ಟ ತೊಂದರೆಗಳನ್ನು.

ರಿಕವರಿ ಮೋಡ್ ಬಳಸಲಿಕ್ಕೆ ಕೆಳ ಕಂಡ ಹಂತಗಳನ್ನ ಬಳಸಿ:

  1. ಕಂಪ್ಯೂಟರ್ ಪ್ರಾರಂಬಿಸಿ
  2. ಬಯೋಸ್ ಲೋಡ್ ಆಗುವವರೆಗೆ ಕಾಯಿರಿ
  3. ಕೆಳಕಂಡ ಸಂದೇಶ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ:

    	Grub loading stage1.5
    	Grub loading, please wait...
    	Press ESC to enter the menu
    	
  4. ತಕ್ಷಣ Escape (Esc) ಕೀ ಪ್ರೆಸ್ ಮಾಡಿ, ಇದು ಬೂಟ್ ಮೆನು ನಿಮ್ಮ ಮುಂದಿಡುತ್ತದೆ
  5.  '(recovery mode)' ಎಂಬುದರೊಂದಿಗೆ ಕೊನೆಗೊಳ್ಳುವ ಲೈನನ್ನು ಸೆಲೆಕ್ಟ್ ಮಾಡಿಕೊಳ್ಳಿ , ಸಾಮಾನ್ಯವಾಗಿ ಇದು ಎರಡನೇ ಸಾಲಿನಲ್ಲಿ ಕೆಳಕಂಡಂತೆ ಕಾಣಿಸಿ ಕೊಳ್ಳುತ್ತದೆ. 

    	Ubuntu, kernel 2.6.17-10-generic (recovery mode)
    	
  6. ಈಗ ಎಂಟರ್ (Enter) ಪ್ರೆಸ್ ಮಾಡಿ ಮತ್ತು ಕೆಳಗಿನ  ಪ್ರಾಂಪ್ಟ್ ಬರುವವರೆಗೆ ಕಾಯಿರಿ

    	root@techfiz:~#
    	
  7. ಮೇಲ್ಕಂಡ ಪ್ರಾಂಪ್ಟ್ ಬರದೆ ಇತರೆ ಎರರ್ ಕಾಣಿಸಿ ಕೊಂಡಲ್ಲಿ LivecdRecovery ಅನ್ನು ನೀವು ಬಳಸ ಬಹುದು.

ನಿಮಗೆ ಬೂಟಿಂಗ್ ಸಮಯದಲ್ಲಿ ಇದುವರೆಗೆ ಕಂಡು ಬಂದಿರುವ ಸಮಸ್ಯೆಗಳನ್ನ ಕಂಮೆಂಟಿ ನಲ್ಲಿ ನೊಂದಾಯಿಸಿ. ಅದಕ್ಕೆ ಉತ್ತರಗಳನ್ನ ನೀಡುವ ಮೂಲಕ ಈ ಲೇಖನ ಪೂರ್ಣವಾಗಿ ನಿಮಗೆ ಕನ್ನಡದಲ್ಲಿ ಸಿಗುತ್ತದೆ.

Rating
No votes yet