ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ.

ಎಫ್ ಎಸ್ ಎಫ್ ಅಸೋಸಿಯೇಟ್ ಸದಸ್ಯತ್ವ ಪಡೆದು, ಕೈಪಿಡಿಗಳನ್ನು ಕೊಳ್ಳುವುದರಿಂದ ಅಥವ ದೇಣಿಗೆಯನ್ನು ನೀಡುವ ಮೂಲಕ ನಿಮ್ಮ ಸಹಾಯ ಹಸ್ತ ನೀಡಿ. ನೀವು ನಿಮ್ಮ ಉದ್ಯಮದಲ್ಲಿ ಸ್ವತಂತ್ರ ತಂತ್ರಾಂಶವನ್ನು ಬಳಸುತ್ತಿದ್ದಲ್ಲಿ, ಕಾರ್ಪೊರೇಟ್ ಪ್ರಾಯೋಜಕತ್ವ ಅಥವ ಗ್ನೂ ತಂತ್ರಾಂಶದ ಡಿಲಕ್ಸ್ ಹಂಚಿಕೆಯನ್ನು ಎಫ್ ಎಸ್ ಎಫ್ ಅನ್ನು ಸಂರಕ್ಷಣೆ ಮಾಡಲು ಪಡೆಯಬಹುದಾಗಿದೆ.

ಗ್ನೂ ಯೋಜನೆ ಎಫ್ ಎಸ್ ಎಫ್ ನ ಕಾರ್ಯಚಟುವಟಿಕೆಗಳನ್ನು ಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೋಗ, ಅಧ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಚಾರಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೋರಾಡುತ್ತದೆ. ಇದಲ್ಲದೆ ಅಂತರ್ಜಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನು, ಖಾಸಗಿ ಸಂಪರ್ಕ ಮಾಧ್ಯಮಕ್ಕೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಏಕಸ್ವಾಮ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಾಂಶ ಬರೆಯುವ ಹಕ್ಕನ್ನು ಬೆಂಬಲಿಸುತ್ತದೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ.

Rating
No votes yet