ಲಿನಕ್ಸಾಯಣ - ೫೦ - ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?

ಲಿನಕ್ಸಾಯಣ - ೫೦ - ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?

ಗ್ನು/GNU ಬಗ್ಗೆ ಹಿಂದೆ ಬರೆದಿದ್ದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗ್ನು ತನ್ನ ೨೫ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಆ ಸಮಯದಲ್ಲಿ ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) ಎಲ್ಲರಿಗೆ ಗ್ನು ಹಾಗು ಸ್ವತಂತ್ರ ತಂತ್ರಾಂಶ ಅಂದ್ರೆ ಏನು ಅನ್ನೋದನ್ನು ಮನದಟ್ಟು ಮಾಡ್ಬೇಕು ಅನ್ನೋ ಸಲುವಾಗಿ ಒಂದು ವಿಡಿಯೋ ಬಿಡುಗಡೆ ಮಾಡಿತು. (ಗ್ನು/ಲಿನಕ್ಸ್ ಹಬ್ಬದ ವರದಿಯಲ್ಲಿ ಇದನ್ನು ಪ್ರಸ್ತಾಪಿಸಿದ್ದೆ, ಮೊದಲ ಬಾರಿ ಇದನ್ನು ಸಂಪದದ ಟೆಕ್ ತಂಡ ಮೈಸೂರಿನಲ್ಲೂ ನಂತರ ನಿಟ್ಟೆಯಲ್ಲಿ ನೆಡೆದ ಗ್ನು/ಲಿನಕ್ಸ್ ಹಬ್ಬದಲ್ಲಿ ಪ್ರದರ್ಶಿಸಿತ್ತು.)
ಆ ವಿಡಿಯೋವನ್ನು ಈಗ ಯೂಟೂಬ್ (Youtube) ಗೆ ಅಪ್ಲೋಡ್ ಮಾಡಿದ್ದೇನೆ.

ಈ ವಿಡಿಯೋಗೆ ಕನ್ನಡ ಸಬ್ ಟೈಟಲ್ ಗಳನ್ನು ಕೂಡ ೨೦೦೮ ರಲ್ಲಿ ಬರೆದಿದ್ದೆ. ಅದನ್ನು ಈ ಲೇಖನದ ಜೊತೆ ಅಟ್ಯಾಚ್ ಮಾಡ್ತಿದ್ದೇನೆ. ಒಂದೆರಡು ದಿನದಲ್ಲಿ ಮೇಲೆ ಹಾಕಿರುವ ವಿಡಿಯೋದಲ್ಲೇ ನಿಮಗೆ ಕನ್ನಡದ ಸಬ್ ಟೈಟಲ್ ಗಳು ಕಾಣಿಸುತ್ತವೆ.
ಗ್ನು/ಲಿನಕ್ಸ್ ಇತ್ಯಾದಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಈ ವಿಡಿಯೋ ನಿಮಗೆ ಸಹಾಯ ಮಾಡಲಿದೆ. ಹೊಸ ಪ್ರಶ್ನೆಗಳು ನಿಮ್ಮ ಮುಂದೆ ಬಂದರೆ ಅದನ್ನ ಕಾಮೆಂಟ್ ನಲ್ಲಿ ನಮೂದಿಸಲಿಕ್ಕೆ ಮರೆಯಬೇಡಿ.

Rating
No votes yet