ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಲಿನಕ್ಸಾಯಣ - ೫೨ - ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

 ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ ಹೆಣಗಾಡಿದ್ದಿದೆ.

 ಈಗ ಪ್ರಿಂಟರ್ಗಳನ್ನು ಉಪಯೋಗಿಸೋದು ತುಂಬಾ ಸುಲಭ. ಪ್ರಿಂಟರ್ ತಂದು, ಅದರ ಕೇಬಲ್ ಅನ್ನು ನಿಮ್ಮ ಕಂಪ್ಯೂಟರ್ ಗೆ ಜೋಡಿಸಿ, ಸ್ವಿಚ್ ಆನ್ ಮಾಡಿದರಾಯಿತು (ಗ್ನು/ಲಿನಕ್ಸ್ ನಲ್ಲಿ ;) ). ನಿಮಗೇ ತಿಳಿಯದಂತೆ, ನಿಮ್ಮ ಪ್ರಿಂಟರ್ ಕೆಲಸ ಮಾಡ್ಲಿಕ್ಕೆ ತಯಾರಾಗಿಬಿಟ್ಟಿರುತ್ತೆ. 

 ಕಳೆದ ವಾರ ಸಂಪದದ ತಿ-ಇನ್-ಒನ್ ಪ್ರಿಂಟರ್ ಬಂತು, ಕನೆಕ್ಟ್ ಮಾಡಿದ್ದಷ್ಟೇ, ಕ್ಷಣ ಮಾತ್ರದಲ್ಲಿ ಪ್ರಿಂಟರ್ ಪತ್ರಗಳನ್ನು ಪ್ರಿಂಟ್ ಮಾಡ್ಲಿಕ್ಕೆ ತಯಾರು. ಅದರಲ್ಲಿ ಸ್ಕ್ಯಾನ್ ಮಾಡ್ಲಿಕ್ಕೆxsane ತಂತ್ರಾಂಶ ಉಪಯೋಗಿಸ್ಬೇಕು. ಈಗಾಗ್ಲೇ ಇನ್ಸ್ಟಾಲ್ ಆಗಿದ್ದ ತಂತ್ರಾಂಶವನ್ನ ಓಪನ್ ಮಾಡಿ, ಪುಸ್ತಕವೊಂದರ ಮುಖಪುಟ ಕೂಡ ಸ್ಕ್ಯಾನ್ ಮಾಡಿದ್ದಾಯ್ತು. HP ಮತ್ತು Canon ಪ್ರಿಂಟರ್ಗಳು ತುಂಬಾ ಸುಲಭವಾಗಿ ಲಿನಕ್ಸ್ ನಲ್ಲಿ ಕೆಲಸ ಮಾಡ್ತವೆ. ಹಳೆಯ ಪ್ರಿಂಟರ್ಗಳನ್ನ ಎತ್ತಿಟ್ಟಿದ್ದರೆ, ಒಮ್ಮೆ ಲಿನಕ್ಸ್ ನಲ್ಲಿ ಉಪಯೋಗಿಸಿ ನೋಡಿ. ಕೆಲವೊಂದು ಕೆಲಸಗಳಿಗೆ ಅವು ಉಪಯೋಗಕ್ಕೆ ಬಂದಾವು. 

 

Rating
No votes yet

Comments