ಲಿನಕ್ಸಾಯಣ - ೫೯ - ಮ್ಯಾಟ್ರಿಕ್ಸ್ ಆಡೋಣ್ವಾ?

ಲಿನಕ್ಸಾಯಣ - ೫೯ - ಮ್ಯಾಟ್ರಿಕ್ಸ್ ಆಡೋಣ್ವಾ?

ಮ್ಯಾಟ್ರಿಕ್ಸ್ ಅಂತಂದ್ರೆ ಗೊತ್ತಲ್ಲ ನಿಮ್ಮ ಟಿ.ವಿ ಸ್ಕ್ರೀನ್ ಮೇಲೆಲ್ಲಾ ನಂಬರ್ರು, ಅಕ್ಷರಗಳು ಇತ್ಯಾದಿ.. _ರಾಘವ_ ಮ್ಯಾಟ್ರಿಕ್ಸ ನ ಕನ್ನಡ ವಾಲ್ಪೇಪರ್ ಕೂಡ ಮಾಡಿದ್ದ ಈ ಹಿಂದೆ.

ಈ ಕಪ್ಪು ಮತ್ತು ಹಸಿರು ಕಲರಿನ ಸ್ಕ್ರೀನ್ ಕಂಡು ಮೊದಮೊದಲು ಹೆದರೋರು ತುಂಬಾನೇ ಜ್ಯಾಸ್ತಿ. ಆದ್ರೆ ಇದರ ಹಿಂದೆ ಅಡಗಿರುವ ರಹಸ್ಯಗಳನ್ನು ಹೆಕ್ಕಿ ಹೆಕ್ಕಿ ತಗೀಲಿಕ್ಕೆ ಶುರುಮಾಡಿದ್ರೆ ಮತ್ತೆ ಅದರಿಂದ ಹೊರ ಬರೋದ್ರೊಳಗೆ ನೀವು ಮ್ಯಾಟ್ರಿಕ್ಸ್ ನ ಹೀರೋ ನಿಯೋ ಆಗಿರುತ್ತೀರಿ.

 ಇಲ್ಲಿ ಹಾಕಿರೋ ಚಿತ್ರದಲ್ಲಿ ಏನಿದೆ?

 ಇದರಿಂದ ಏನ್ ಮಾಡಬಹುದು?

 ಡೆಸ್ಕ್ಟಾಪ್ ಕ್ರಾಶ್ ಆದ್ರೆ ಏನಾದ್ರೂ ಮಾಡ್ಬಹುದಾ?

 GUI ಇಲ್ಲದೆ ಬರೀ ಕಮ್ಯಾಂಡುಗಳಿಂದಲೇ ಗ್ನು/ಲಿನಕ್ಸ್ ನಲ್ಲಿ ಕೆಲಸ ಮಾಡಬಹುದಾ?

 ಕಮ್ಯಾಂಡುಗಳನ್ನು ಕಲಿಯೋದು ಅಂದ್ರೆ ಫ್ರೆಂಚು ಲ್ಯಾಟಿನ್ನು ಕಲಿತ ಹಾಗಾ?

 ಟರ್ಮಿನಲ್ ಅಂದ್ರೇನು?

 ಕನ್ಸೋಲ್ ಅಂದ್ರೇನು?

 ಶೆಲ್ ಅಂದ್ರೆ ಲಿನಕ್ಸ್ ನಲ್ಲಿ ಏನರ್ಥ?

 ಶೆಲ್ ಏನ್ಮಾಡುತ್ತೆ?

  ಹೀಗೆ ಹತ್ತು ಹಲವು ಪ್ರಶ್ನೆಗಳಿವೆ. ಇವಕ್ಕೆಲ್ಲಾ ಉತ್ತರ?

 ------------

  ನಿಮಗೆ ಗೊತ್ತಿರೋ ಅಷ್ಟನ್ನು ಕಾಮೆಂಟ್ ಹಾಕ್ತಾ ಹೋಗಿ. ತಪ್ಪಿದ್ದಲ್ಲಿ ತಿದ್ದುವ. ನಿಮ್ಮಲ್ಲಿ ಇವುಗಳ ಬಗ್ಗೆ ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ ಅದನ್ನೂ ಜೊತೆ ಸೇರಿಸಿ. 

ಉತ್ತರ ಸಿಕ್ಕಂತೆಲ್ಲಾ ಈ ಲೇಖನ ಬದಲಿಸುತ್ತೇನೆ. 

 

Rating
No votes yet

Comments