ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಫೆಡೋರಾ ಗ್ನು/ಲಿನಕ್ಸ್ ನ ೧೧ ನೇ ಆವೃತ್ತಿ ಹೊರ ಬಂದಿದೆ. ಉಪಯೋಗಿಸಿ ನೋಡಬೇಕೆನ್ನುವವರಿಗೆ ಇಲ್ಲಿದೆ ಒಂದು ಕಿರು ನೋಟ.

ಹೊಸತು ಏನೇನಿದೆ ಅಂತ ಓದಿ ನೋಡ್ಬೇಕು ಅನ್ನೋರಿಗೆ ಇಲ್ಲಿದೆ ನೋಡಿ ಕೊಂಡಿ:

ಸಕತ್ ಚಿತ್ರ ಈಗ ಫೆಡೋರಾದ ವಾಲ್ಪೇಪರ್ ಕೂಡ.

first_look_fedora11

ಫೆಡೋರಾ ಲೈವ್ ಸಿ.ಡಿ ಯ ಒಳ ಹೊಕ್ಕಾಗ

firefox_bera

 

ಫೈರ್ ಫಾಕ್ಸ್ ನ ಬಿಟಾ ಆವೃತ್ತಿ ೩.೫ ಬಿ೪ - ಉತ್ತಮ ಬ್ರೌಸಿಂಗ್ ಅನುಭವಕ್ಕಾಗಿ

kannada_outof_box_fedora11

ಕನ್ನಡ ಓದ್ಲಿಕ್ಕಂತೂ ಏನೂ ಮಾಡ್ಲೇ ಬೇಕಿಲ್ಲ - ಲೋಹಿತ್ ಕನ್ನಡ ಫಾಂಟ್ ಈಗ ಚೆನ್ನಾಗಿ ಕಾಣ್ತಿದೆ!

firewall_config_fedora11

ಫೈರ್ವಾಲ್ (Firewall) - ನಿಮ್ಮ ಕಂಪ್ಯೂಟರಿನ ಸೆಕ್ಯೂರಿಟಿಗೆ.. 

imchooser_fedora11

ಕನ್ನಡ ಟೈಪ್ ಮಾಡೋದು ಅಂದ್ರಾ? ಅದಕ್ಕೆ ಹೊಸ ಸಾಪ್ಟೇರ್ ಏನೂ ಇನ್ಸ್ಟಾಲ್ ಮಾಡ್ಬೇಕಿಲ್ಲ.. ಅದೂ ಆಗ್ಲೇ ಇದರಲ್ಲಿದೆ. 

IBus input method system - ಇದಕ್ಕಂತಲೇ ಫೆಡೋರಾದಲ್ಲಿ ಈಗಾಗಲೇ ಇನ್ಸ್ಟಾಲ್ ಆಗಿದೆ.

imchooser
ಇದನ್ನ ಉಪಯೋಗಕ್ಕೆ ಸಿದ್ದ ಪಡಿಸಿಕೊಂಡ್ರಾಯ್ತು.
choose_langauge_to_input

KGP
and KN_ITRANS ಕೀಬೋರ್ಡ್ ಲೇಔಟುಗಳನ್ನು ಸೇರಿಸಿಕೊಂಡ ನಂತರ Ctrl+Space ಪ್ರೆಸ್ ಮಾಡಿ ನಿಮಗೆ ಬೇಕಾದ ಕನ್ನಡ ಲೇಔಟ್ ಆಯ್ದುಕೊಳ್ಳಿ.

type_kannnada 

ಮತ್ತೇನು ಯೋಚಿಸ್ತಿದೀರಾ? ಟೈಪ್ ಮಾಡಿಯಲ್ಲ ಮತ್ತೆ.

ಇವುಗಳ ಜೊತೆ ಇನ್ನೂ ಕೆಲವು ವಿಷೇಶಗಳು ಫೆಡೋರಾ ೧೧ ರಲ್ಲಿವೆ:

ಆಟೋಮ್ಯಾಟಿಕ್ font ಮತ್ತು  mime-type ಇನ್ಸ್ಟಾಲೇಷನ್ನು,
ಫಲ್ಸ್ ಆಡಿಯೋದ ಇಂಟಿಗ್ರೇಟೆಡ್ Volume Control (ಮೊದಲಿನ ತರ ಧ್ವನಿ ಕುರಿತ ತೊಂದರೆಗಳನ್ನು ನಿವಾರಿಸಲಿಕ್ಕೆ),
Intel, ATI and Nvidia kernel modsetting ಬೇಗ ನಿಮ್ಮ ಕಂಪ್ಯೂಟರ್ ಅನ್ನು ಗ್ರಾಫಿಕಲ್ ಮೋಡ್ ನಲ್ಲಿ ಶುರು ಮಾಡಲಿಕ್ಕೆ, Fingerprint ಡಿವೈಸುಗಳನ್ನು ಸುಲಭವಾಗಿ ಕೆಲಸ ಮಾಡುವಂತೆ ಮಾಡಲಾಗಿದೆ, Presto
ಅನ್ನೋ ತಂತ್ರಾಂಶವನ್ನು ನಿಮ್ಮ ಆಪರೇಟಿಂಗ್ ಸಿಸ್ಟಂ ಮತ್ತು ಇತರೆ ತಂತ್ರಾಂಶಗಳನ್ನು ಅತಿ ಕಡಿಮೆ ಸಮಯದಲ್ಲಿ ಅಪ್ಗ್ರೇಡ್ ಮಾಡಲಿಕ್ಕೆ, ext4 ಎಂಬ ಹೊಸ filesystem, Virt Improved
Console, MinGW (Windows cross compiler) - ಲಿನಕ್ಸ್ ನಲ್ಲಿ ವಿಂಡೋಸ್ ತಂತ್ರಾಂಶಗಳನ್ನು ವಿಂಡೋಸ್ ಇಲ್ಲದೇ ಅಭಿವೃದ್ದಿ ಪಡಿಸಲು ಅನುಕೂಲ ಮಾಡಿಕೊಡಲಿಕ್ಕೆ.. ಹೀಗೆ ಹತ್ತು ಹಲವಾರು ಹೊಸತುಗಳನ್ನು ಹೊತ್ತು ಫೆಡೋರಾ-೧೧ ನಿಮ್ಮ ಮುಂದಿದೆ. 

 

Rating
No votes yet

Comments