ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲೆ ಪ್ರಮಾಣ ವಚನ ತೆಗೆದುಕೊಳ್ಳಬೇಕು - ಕ.ರ.ವೇ. ಆಗ್ರಹ

ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲೆ ಪ್ರಮಾಣ ವಚನ ತೆಗೆದುಕೊಳ್ಳಬೇಕು - ಕ.ರ.ವೇ. ಆಗ್ರಹ

ನಮಸ್ತೆ ಗೆಳೆಯರೇ,

ಎಲ್ಲೆಡೆ ಇದ್ದ ಚುನಾವಣೆಯ ಕಾವು, ಹೆಂಚಿನ ಮೇಲೆ ನೀರು ಹಾಕಿದಂತೆ, ಬೀಡು ಬೀಸಾಗಿ ಬಂದು ಗಕ್ಕನೆ ನಿಂತ ಮಳೆಯಂತೆ ಎಲ್ಲಾ ತಣ್ಣಗಾಗಿದೆ. ಬಿಜೆಪಿ ೧೯ ಸ್ಥಾನಗಳನ್ನ ಪಡೆದುಕೊಂಡಿದೆ, ಹಾಗೆಯೇ ಕಾಂಗ್ರೆಸ್ಸ್ ೬ ಮತ್ತು ಜೆಡಿಎಸ್ ೩ ಸ್ಥಾನ್ಗಳನ್ನ ಪಡೆದುಕೊಂಡಿದೆ. ಪಕ್ಷ ಯಾವುದೇ ಇರಲಿ ಇಲ್ಲಿಂದ ಆಯ್ಕೆ ಆದ ಎಲ್ಲ ಸಂಸದರು ಕನ್ನಡಿಗರು ಅನ್ನುವುದನ್ನ ಮರೆಯಬಾರದು.

ನಮ್ಮ ಕರ್ನಾಟಕಕ್ಕೆ ಆಗಬೇಕಾದ ಮುಖ್ಯವಾದಂತಹ ಕೆಲಸಗಳು ಬಹಳಷ್ಟಿವೆ, ಈ ಸರ್ತಿ ನಮ್ಮ ಕರ್ನಾಟಕಕ್ಕೇ ೩ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಗಳು ಸಿಕ್ಕಬಹುದಾದ ಲಕ್ಷಣಗಳಿವೆ. ಇಂತಹ ಸಮಯವನ್ನ ಸದುಪಯೋಗ ಪಡೆಸಿಕೊಂಡು ನಮ್ಮ ಸಂಸದರು ಈ ನಾಡಿನ ಜನತೆಗೆ ಒಳ್ಳೆಯದನ್ನ ಮಾಡಬೇಕು ಅನ್ನೋದು ನಮ್ಮ ಆಶಯ.

ಇನ್ನು ನಮ್ಮ ರಾಜ್ಯದಿಂದ ಆರಿಸಿ ಹೋದ ಯಾವ ಸಂಸದರು ಅಲ್ಲಿ ಮಾತನಾಡೋಲ್ಲ ಅನ್ನೋ ಆಪಾದನೆ ಇದೆ ( ಇದು ನಿಜ ಕೂಡ :)) ಈ ಸರ್ತಿ ನಮ್ಮ ಸಂಸದರು ನಮ್ಮ ರಾಜ್ಯದ ಬಗ್ಗೆ ಇರುವ ಸಮಸ್ಯಗಲೇ ಬಗ್ಗೆ ಒಕ್ಕೊರಲ ಧ್ವನಿ ಎತ್ತಲಿ ಅಂತ ಹಾರೈಸೋಣ.

ಇದರ ಮೊದಲ ಹೆಜ್ಜೆಯಾಗಿ ನಾರಾಯಣ ಗೌಡರು ಹೇಳಿರುವಂತೆ ಎಲ್ಲ ಸಂಸದರು ಈ ಸರ್ತಿ ತಮ್ಮ ಪ್ರಮಾಣ ವಚನವನ್ನ ಕನ್ನಡದಲ್ಲೇ ತಗೆದುಕೊಂಡು ಮಾದರಿಯಾಗಲಿ.

ಇದರ ಪೂರ್ತಿ ವರದಿ ಕೆಳಗೆ ನೀಡಲಾಗಿದೆ.

=====================================================================
ಆತ್ಮೀಯ ಕನ್ನಡಿಗರೇ,

2009 ನೇ ಸಾಲಿನಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಲೋಕಸಭೆಯಲ್ಲಿ "ಕನ್ನಡದ ಕಹಳೆ" ಮೊಳಗಿಸಬೇಕೆಂದು ಟಿ.ಏ.ನಾರಾಯಣ ಗೌಡರು ಆಗ್ರಹಿಸಿದ್ದಾರೆ.

ಅದರ ವರದಿಯನ್ನು ಇಲ್ಲಿ ನೋಡಿ.

http://karave.blogspot.com/2009/05/kannadadalle-pramaana-vachana-karave.html

- ಕರ್ನಾಟಕ ರಕ್ಷಣಾ ವೇದಿಕೆ

Rating
No votes yet