ವರ್ಷವನ್ನು ಬೀಳ್ಕೊಡುತ್ತಾ ಒಂದು ಗ್ರಹಕೂಟ
೨೦೦೮ ವರ್ಷದ ಕಡೆಯ ದಿನ ಆಕಾಶದಲ್ಲೊಂದು ಗ್ರಹಕೂಟ ಕಾಣುತ್ತಿದೆ.
ಸಾಮಾನ್ಯವಾಗಿ ಬರಿಗಣ್ಣಿಂದ ನೋಡಲು ಕಷ್ಟವಾದ ಬುಧ ಮತ್ತು ಗುರು ಸಂಜೆಯ ಆಕಾಶದಲ್ಲಿ ಬಹಳ ಹತ್ತಿರ ಬಂದಿದ್ದಾರೆ. ಮಳೆಗಾಲದ ನಡುವೆಯೂ, ನೆನ್ನೆ ಸಂಜೆ ಮೋಡಗಳು ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ನನಗೆ ಈ ಗ್ರಹಗಳನ್ನು ನೋಡಲು ಸಾಧ್ಯವಾಯಿತು. ಇನ್ನು ಮುಂದಿನ ಮೂರು ದಿನ ಆಕಾಶ ಹೇಗಿರುವುದೆಂಬುದನ್ನು ಆ ವರುಣನೇ ಬಲ್ಲ :). ನಾನಂತೂ ಪಡುವಲದಾಗಸದಲ್ಲಿ ಮೋಡ ಮೊರೆಯುವುದಿಲ್ಲವೆಂಬ ಆಸೆ ಇಟ್ಟುಕೊಂಡಿದ್ದೇನೆ! ನೋಡಬೇಕು ಏನಾಗುತ್ತೆ ಅಂತ.
ಸಂಜೆ ಸೂರ್ಯ ಮುಳುಗಿದ ಕೂಡಲೆ, ಪಶ್ಚಿಮ ದಿಗಂತ ಕಾಣುವಂತಹ ಎಡೆಯಲ್ಲಿ ನಿಂತು ನೀವಿದನ್ನು ನೋಡಬಹುದು. ಆಕಾಶ ನೋಡಲು ನೂಕುನುಗ್ಗಲೇ? ಇಲ್ಲ. ಆದರೆ, ಸೂರ್ಯ ಮುಳುಗಿ ಸುಮಾರು ಒಂದು ಗಂಟೆಯೊಳಗೆ ಈ ಗ್ರಹಗಳೂ ಮುಳುಗಿಬಿಡುವುದರಿಂದ ನೀವು ಓಡಬೇಕಾಗಬಹುದು, ದಿಗಂತ ಕಾಣುವ ಕಡೆಗೆ!
ಹೆಚ್ಚಿನ ಮಾಹಿತಿಗೆ ಇಲ್ಲಿ ಚಿಟಕಿಸಿ.
-ಹಂಸಾನಂದಿ
Rating
Comments
ಉ: ವರ್ಷವನ್ನು ಬೀಳ್ಕೊಡುತ್ತಾ ಒಂದು ಗ್ರಹಕೂಟ