ವಸಂತ

ವಸಂತ

ಕೆಂಬಣ್ಣದಾ ಚಿಗುರ ಹೊತ್ತು ತಲೆಬಾಗಿರುವ
ಕೊಂಬೆಕೊಂಬೆಗೆ ಹೂತ ಮಾಮರಗಳೀಗ
ತಂಬೆಲರಿನಲಿ ತೂಗಿ ಹುಟ್ಟಿಸಿದ್ದಾವು ಮಿಗೆ
ಹಂಬಲವ ಹೆಣ್ಣುಗಳ ಮನದಿ ತವಕದಲಿ

ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 15) :

ತಾಮ್ರ ಪ್ರವಾಲ ಸ್ತಬಕಾವನಮ್ರಾಃ
ಚೂತದ್ರುಮಾಃ ಪುಷ್ಪಿತಚಾರುಶಾಖಾಃ
ಕುರ್ವಂತಿ ಕಾಮಂ ಪವನಾವಧೂತಾಃ
ಪರ್ಯುತ್ಸುಕಂ ಮಾನಸಮಂಗನಾನಾಮ್

ताम्रप्रवालस्तवकावनम्राश्-
चूतद्रुमाः पुष्पितचारुशाखाः।
कुर्वन्ति कामम् पवनावधूताः
पर्युत्सुकम् मानसम् अङ्गनानाम्॥

ಎಲ್ಲರಿಗೂ ಬರಲಿರುವ 'ವಿಜಯ' ಸಂವತ್ಸರವು ನೆಮ್ಮದಿಯಿಂದ ಕೂಡಿರಲೆಂದ ಹಾರೈಕೆಗಳು.

-ಹಂಸಾನಂದಿ

ಕೊ: ತಂಬೆಲರು = ತಂಪಾದ ಗಾಳಿ

ಕೊ.ಕೊ: ಏಪ್ರಿಲ್ 10, 2013, ಯುಗಾದಿ ಹಬ್ಬ. ವಸಂತದ ಮೊದಲ ದಿನ. ಅದಕ್ಕೇ ಆ ವಸಂತನ ಬಗ್ಗೆ ಇರುವ ಒಂದು ಪದ್ಯವನ್ನು ಅನುವಾದಿಸಬೇಕೆಂದು ಇದನ್ನು ಹುಡುಕಿ ಬರೆದೆ. ಕಾಳಿದಾಸ ಇದನ್ನು ಬರೆದಾಗ, ಯುಗಾದಿಯ ಸಮಯದಲ್ಲಿ ವಸಂತ ನಿಜವಾಗಿಯೂ ಮೊದಲಾಗುತ್ತಿತ್ತು ಈಗ ಪ್ರಿಸಿಶನ್ ನಿಂದ ಕಾಲಗಳು ಸ್ವಲ್ಪ ಹಿಂದೆ ಹೋಗಿದ್ದರೂ ಸಹ!

ಕೊ.ಕೊ.ಕೊ: ಹಿಂದೊಮ್ಮೆ ಮಾಡಿದ್ದ ಋತುಸಂಹಾರದ ಇನ್ನೊಂದು ಪದ್ಯದ ಅನುವಾದ ಇಲ್ಲಿದೆ.

Rating
No votes yet