ವಾಕ್ಪಥ ತಂಡದಿಂದ ಸಂಪದಿಗರೆ ಅಭಿನಯಸಲಿರುವ ನಾಟಕ : ಸುಳಿ

ವಾಕ್ಪಥ ತಂಡದಿಂದ ಸಂಪದಿಗರೆ ಅಭಿನಯಸಲಿರುವ ನಾಟಕ : ಸುಳಿ

ಚಿತ್ರ

 

”ರಂಗುತಂತು’’  ನಾಟಕ ತಂಡದ ಪ್ರಥಮ ಪ್ರಯೋಗ ನಾಟಕ   ’ಸುಳಿ’ 
 
 ’ಗುರಿಯೊಂದನ್ನು ಸೇರುವಾಗ ನಮ್ಮ ಪ್ರಯತ್ನವೆ ಗುರಿಗೆ ಅಡ್ಡಲಾಗಿಬರುವುದು’ ಸೃಷ್ಟಿಯ ಒಂದು ನಿಗೂಡ ನಿಯಮ.
 
ಈ ನಿಯಮದ ಹಿನ್ನಲೆಯ  ಅಲ್ಬರ್ಟ್ ಕಾಮು ರವರ ಕತೆಯ ಸ್ಪೂರ್ತಿಯಿಂದ ರಚಿಸಲಾದ ಈ ನಾಟಕ ಎರಡು ವಿಬಿನ್ನ ಪರಿಸಿಸರದ ಕತೆಯನ್ನು ಒಟ್ಟಿಗೆ ಸೇರಿಸಿ ಪ್ರಯೋಗಿಸಲಾಗಿದೆ. 
 
ರಘು ಎಸ್ ಪಿ ರವರ ಕಲ್ಪನೆಯ ಪ್ರಯೋಗವಾದ ಈ ನಾಟಕದ   
ಪಾತ್ರಗಳ ಪರಿಚಯ ಹೀಗಿದೆ
ಮಹಾರಾಜನಾಗಿ - ಬಿ ಜಿ ರಾಯ್ (ಬೆಳ್ಳಾಲ ಗೋಪಿನಾಥ ರಾಯರು)
ಕ್ಷೌರಿಕನಾಗಿ - ಜಯಂತ್ ರಾಮಾಚಾರ್
 
ಪ್ರಕೃತಿ ಪರಿಸರದ ಪ್ರತೀಕವಾಗಿ ರಾಜನ ಎರಡುಮನಸುಗಳ ರೂಪದಾರಿಗಳು :  ಹರೀಶ್ ಆತ್ರೇಯ ಹಾಗು ಸಚೇತನ್ ಭಟ್
 
ತಾಯಿ ಪಾತ್ರದಾರಿ : ಲತಾ
ಮಗಳು : ವಿಭ
ಮಗನಾಗಿ: ಪ್ರಭು
ಶಾಸ್ತ್ರಿಪಾತ್ರದಾರಿ : ಹರೀಶ್ ಆತ್ರೇಯ
 
ನಾಟಕದ ಸಂಭಾಷಣೆ : ಪಾರ್ಥಸಾರಥಿ ಹಾಗು ಹರೀಶ್ ಆತ್ರೇಯ
ಸಂಗೀತ : ರಾಮಮೋಹನ್ ಹಾಗು ತಂಡ
ಬೆಳಕಿನ ಸಂಯೋಜನೆ : ಪಾರ್ಥಸಾರಥಿ
ನಾಟಕದ ನಿರ್ದೇಶನ , ರಂಗ ಪರಿಕರ : ರಘು ಎಸ್ ಪಿ  ಹಾಗು ಸಚೇತನ್ ಭಟ್
 
ನಾಟಕ ನಡೆಯುವ ದಿನಾಂಕ : 9-FEB-2013 ಮತ್ತು 10-FEB-2013 
ಸ್ಥಳ : ಕೆ.ವಿ. ಸುಬ್ಬಣ ಆತ್ಮೀಯ ರಂಗಮಂದಿರ
 7 ನೆ ಅಡ್ಡರಸ್ತೆ , ಟೀಚರ್ಸ್ ಕಾಲೋನಿ
ಜೆ.ಪಿ.ನಗರ ಮೊದಲ ಹಂತ , ದಯಾನಂದ ಕಾಲೇಜಿನ ಮುಖ್ಯದ್ವಾರದ ಎದುರಿನ ಅಡ್ಡ ರಸ್ತೆ 
ಪ್ರವೇಶ : ಉಚಿತ 
Rating
No votes yet

Comments

Submitted by venkatb83 Mon, 02/04/2013 - 17:19

'ಸುಳಿ'ಯಲಿ ಸಿಕ್ಕು-ನಮ್ಮನ್ನೂ ಸಿಕ್ಕಿಸುವ ನಿಮ್ಮ ಯತ್ನ ಪ್ರಯತ್ನ ಯಶಸ್ವಿಯಾಗಲಿ...!!
ನಾ ನಾಟಕಗಳನ್ನು ನೋಡಿ ತುಂಬಾ ವರ್ಷಗಳೇ ಕಳೆದು ಹೋದವು...
ಈ ಸಿನೆಮ ಗೇಮ್ಸ್ ಇತ್ಯಾದಿ ಬಂದ ಮೇಲೆ ಅದರತ್ತ ಆಕರ್ಷಿತರಾದ ಬಹುಪಾಲು ಜನ ಈ ನಾಟಕ-ಬಯಲಾಟ ಇತ್ಯಾದಿ ಮರೆತೇ ಹೋಗಿದ್ದಾರೆ...ಈ ಮಧ್ಯೆ ಮಲೆಗಳಲ್ಲಿ ಮದುಮಗಳು ಯಶಸ್ವಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ್ದು ಹೋದ ವರ್ಷ ಓದಿದ ನೆನಪು...
'ಸುಳಿ'ಯಲಿ ಸಿಕ್ಕು ಸುರುಳಿಯಾಗಲು ನಾವಲ್ಲಿಗೆ ಬರುವ ಸಂಭವ ಇದೆ...!!

ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ..

\।/

Submitted by gopinatha Mon, 02/04/2013 - 19:15

ಬಿ ಜಿ ರಾಯ್ (ಬೆಳ್ಳಾಲ ಗೋಪಿನಾಥ ರಾಯರು)
ಪಾರ್ಥರೇ
ಧನ್ಯವಾದಗಳು
ಆದರೆ ಅದು ನನ್ನ ಹೆಸರಲ್ಲ
ನಾನು ಬೆಳ್ಳಾಲ ಗೋಪೀನಾಥ ರಾವ್
ಅಲ್ಲಿ ಯಾರೋ ರೋಯ್ ಅಂತ ಬಂಗಾಳಿ ಹೆಸರು ಕೊಟ್ಟಿದ್ದೀರಲ್ಲಾ?

Submitted by partha1059 Mon, 02/04/2013 - 19:52

In reply to by gopinatha

ರಾಯರು ಕ್ಷಮಿಸಲು ಅದು ರಾವ್ ಹೋಗಿ ಅದು ಹೇಗೊ ರಾಯ್ ಆಗಿದೆ.
ಬ0ಗಾಳಿಯಲ್ಲ ಅಪ್ಪಟ‌ ಕನ್ನಡಿಗ‌ ಬೆಳ್ಳಾಲ‌ ಗೋಪಿನಾಥ‌ ರಾಯರು ಮಹಾರಾಜರಾಗಿ ರ0ಜಿಸುವರು !!

Submitted by partha1059 Wed, 02/06/2013 - 10:30

In reply to by ಗಣೇಶ

ನಾಗರಾಜ‌ ಹಾಗು ಗಣೇಶರಿಗೆ ವ0ದನೆಗಳು
ಸೂಪರ್ ಆಗಲಿ ಅ0ತ‌ ಹಾರೈಸಿದ್ದೀರಿ, ಆದರೆ ಅಲ್ಲಿ ಎಲ್ಲರು ಪ್ರಥಮ‌ ಪ್ರಯತ್ನ . ಎಲ್ಲರಿಗು ಹೊಸ‌ ಕ್ಶ್ಹೇತ್ರ ಹೇಗಾಗುತ್ತದೆ ತಿಳಿಯದು
ನಿರ್ದೇಕರಿಗೆ ಮೊದಲ‌ ನಾಟಕ‌, ಪಾತ್ರದಾರಿಗಳಿಗೆ ಪ್ರಥಮ‌ ನಾಟಕ‌ ಸ್ತ್ರೀ ಪಾತ್ರ ಮಾಡುತ್ತಿರುವ‌ ಇಬ್ಬರು ಹೊಸಬರು
ಹಾಗೆ ಸ0ಗೀತದ‌ ಪ್ರಯತ್ನವು ಅಷ್ಟೆ. ಕಡೆಗೆ ಸ0ಬಾಷಣೆ ಸಹ‌ ನಾನು ಎ0ದು ಕೈ ಹಾಕಿಲ್ಲ, ಹರೀಶರಾದರೆ ಪರವಾಗಿಲ್ಲ
ನೋಡೋಣ ಹೇಗೆ ಆಗುತ್ತೆ. ಸಪ್ತಗಿರಿಯನ್ನು ವಿಮರ್ಷೆಗೆ ಕರೆದರೆ ಅವರು ಏನಿದ್ದರು ಅಮೇರಿಕ‌ ಸಿನಿಮಾ ಮಾತ್ರ ವಿಮರ್ಷೆ ಮಾಡುವುದು ಇದೆಲ್ಲ‌ ಆಗಲ್ಲ ನನಗೆ ಟೈಮಿಲ್ಲ ಅ0ದರು :‍)

Submitted by venkatb83 Thu, 02/07/2013 - 14:28

In reply to by partha1059

ಗುರುಗಳೇ-ಅದೊಮ್ಮೆ ಫೆಸ್ಬುಕ್ಕಲಿ-ಬರುವೆವು ಎಂದವರು ಬಾರದೆ ಹೋಗಬಹುದು -ಬರಬಹ್ದು ಎಂದವರು ಬರಬಹುದು-ಬಾರದೆಯೂ ಹೋಗಬಹುದು ..ಆದರೆ ಬರೋಲ್ಲ ಹೋಗೋಲ್ಲ ಎಂದವರು ಬಂದೇ ಬರಬಹ್ದು... ಎಂದು ಹಾಕಿದ್ದೀರಿ-ಅದಕ್ಕೆ ನಾ ಪ್ರತಿಕ್ರಿಯಿಸಿಯೂ ಇದ್ದೆ..!!
ಈಗ ನಾ ಬರುವೆ ಎಂದು ಹೇಳಿರುವೆ....!!
ಬರುವೆನೆ?
ಸಸ್ಪೆನ್ಸ್..!!

ಇನ್ನು ವಿಮರ್ಷೆ ವಿಷಯಕ್ಕೆ ಬಂದರೆ-ಯಾವೊಂದು ವಿಷ್ಯ ವಸ್ತುವಿನ ಬಗ್ಗೆ ನಮ್ ಯೋಚನಾ ಲಹರಿ ಹರಿದು ಅದರ ಬಗ್ಗೆ ಬರೆದರೆ ಅದು ನಮಗೆ ಮಾತ್ರ ಇಷ್ಟ ಆಗಬಹುದು-ಇನ್ನೊಬ್ಬರಿಗೆ ಆಗದೇ ಇರಬಹದು.ಈ ಗೊಂದಲದ ಕಾರಣವಾಗಿಯೇ ನಾ ಚಿತ್ರಗಳ ಬಗ್ಗೆ ಬರೆವುದಕ್ಕೆ ವಿಮರ್ಶೆ ಎಂದು ವರ್ಗೀಕರಣ ಮಾಡಲು ಹೋಗಿಲ್ಲ.-ಅದೊಂದು ಬರಹ ಅಸ್ಟೆ ..!

ಇನ್ನು ನಾಟಕಗಳು-ಅವುಗಳ ತಯಾರಿ-ವೇಷ ಭೂಷಣ-ಹಾವ -ಭಾವ ಅಭಿನಯ ಇತ್ಯಾದಿ ಬಗ್ಗೆ ನನಗೇನೇನೂ ಗೊತ್ತಿಲ್ಲ...
ಈ ಹಿಂದೆ ನಮ್ ಹಳ್ಳಿಯಲ್ಲಿ ಬಯಲಾಟ ಅಡುವವರಿಗಾಗಿ (ಬಹುಪಾಲು ಅನಕ್ಷರಸ್ಥರು)ಅವರ ಪರವಾಗಿ ನಾನೇ ಅವರ ಸಂಭಾಷಣೆ ಓದಿ ಅವರಿಗೆ ಉರು ಹೊಡೆಸಿದ್ದೆ (ಕಂಠ ಪಾಠ ) ಹಾಗೆಯೇ ಅವರಿಗೆಲ್ಲ ಅವರ ಸಂಭಾಷಣೆ ಹೇಳಿ ಹೇಳಿ- ಆ ಎಲ್ಲ ಪಾತ್ರಧಾರಿಗಳ ಸಂಭಾಷಣೆ ನನಗೆ ಕಂಠ ಪಾಠವಾಗಿ ಅವರಲ್ಲಿ ಕೆಲವರು ಬಯಲಾಟದ ಹಿಂದಿನ ದಿನ ಕೈ ಎತ್ತಿ ಕೈ ಕೊಟ್ಟು ಪರಾರಿ ಆಗಿ ಆ ಪಾತ್ರಗಳನ್ನೂ ನಾ ಮಾಡಬೇಕು ಎಂದು ಹಕ್ಕೊತ್ತಾಯ ಆಗಿತ್ತು-ಆದರೆ ನಾ ಸದಾ ಪ್ರೇಕ್ಷಕ ವೀಕ್ಷಕ ಮಾತ್ರ ನನಗೆ ಅಭಿನಯ ಬರೋಲ್ಲ ಎಂದು ನಿರಾಕರಿಸಿ -ಪರಾರಿ ಅದವರನ್ನೇ ಹುಡುಕಿ ಅಭಿನಯಿಸುವ ಹಾಗೆ ಮಾಡಿದೆ....!!

ನಮ್ಮ ಮನೆಯಲ್ಲೋ ನಮ್ಮ ಮುತ್ತಾತ-ತಾತ - ದೊಡ್ಡಪ್ಪ -ಅಪ್ಪ-ಹಲವು ಬಯಲಾಟ-ನಾಟಕಗಳಲ್ಲಿ ನಾರದ-ಶಿವ -ಇತ್ಯಾದಿ ಪಾತ್ರ ಮಾಡಿದವರು-ಮೆಚ್ಚುಗೆ ಗಳಿಸಿದವರು-ಆದರೆ ಅದ್ಯಾಕೋ ನಮಗೆ ಆ ತುಡಿತ ಬರಲೇ ಇಲ್ಲ..!!
ಈಗ್ಗೆ ಸುಮಾರು ೧೦ ವರ್ಷಗಳ ಹಿಂದೆ ನಮ್ ತಂದೆಯವರು ಕೊನೆಯದಾಗಿ ಶಿವನ ಪಾತ್ರಧಾರಿ ಆಗಿ ಅಭಿನಯಿಸಿದ್ದರು..ಆಮೇಲೆ ಜನರ ಅಭಿರುಚಿ ಬದಲಾಗಿ ಸಿನ್ಮ -ಧಾರವಾಹಿ -ಗ್ರಾಫಿಕ್ಸ್ ಅಬ್ಬರಕ್ಕೆ ಮರುಳಾದರು...ಈಗಂತೂ ಹಳ್ಳಿಗಳಲ್ಲಿ ಬಯಲಾಟ ಇಲ್ಲವೇ ಇಲ್ಲ-ನಾಟಕಗಳು ತುಂಬಾನೇ ಕಡಿಮೆ..:(((

ವಾಕ್ಪಥ-ಗೊಸ್ಟಿ -ಚರ್ಚೆ ಇತ್ಯಾದಿ ನಡೆದು ಅದರಲ್ಲಿ ಭಾಗವಹಿಸಿ ಆ ಬಗೆಗೆ ವಿವರಣಾತ್ಮಕ ಬರಹ ಬರೆವ ನೀವೇ ಈ ನಾಟಕದ ಬಗ್ಗೆ ಬರೆಯಲು ಶಕ್ಯರು ಎಂದು ನನ್ನ ಅಭಿಪ್ರಾಯ...ಆದರೂ ,
ಒಂದೊಮ್ಮೆ ನಾ ಈ ಸುಳಿಗೆ ಸಿಕ್ಕಿ ..!! ಆ ಬಗ್ಗೆ ಬರೆದರೂ ಬರೆದೇನೂ ....
ನೋಡುವ..

ಶುಭವಾಗಲಿ.

\।

Submitted by partha1059 Thu, 02/07/2013 - 14:51

In reply to by venkatb83

ಸಪ್ತಗಿರಿಯವರೆ
ಈ ನಾಟಕದ ವಿಶೇಷವೆಂದರೆ ನಿರ್ದೇಶಕರಿಂದ ನಟರು , ಸಾಹಿತ್ಯ ಸಂಬಾಷಣೆ ಹಾಡು ಎಲ್ಲರದು ಪ್ರಥಮ ಪ್ರಯತ್ನ. ಹಾಗಿದ್ದಾಗ ವಿಮರ್ಷಕರು ಹೊಸಬರೆ ಆದರೆ ತಪ್ಪೇನಿಲ್ಲ , ಬಿಡಿ ಬೇಕಿದ್ದಲ್ಲಿ ನೀವು ಪ್ರಯತ್ನಪಡಬಹುದು. ಹಾಗೆ ನಾವು ಮಾಡುತ್ತಿರುವ ಪ್ರಯತ್ನಕ್ಕೆ ನಾನೆ ವಿಮರ್ಷೆ ಮಾಡಲಾರೆ, ಬೇರೆ ಯಾರಾದರು ಮಾಡಬಹುದು ಅನ್ನಿಸುತ್ತೆ ಗೊತ್ತಿಲ್ಲ.
ಕೊನೆಯ ಸೂಚನೆ :ವಿಮರ್ಷೆ ಮಾಡಲು ಯಾವ ಅನುಭವವು ಬೇಕಿಲ್ಲ :‍) :)

Submitted by venkatb83 Thu, 02/07/2013 - 16:56

In reply to by partha1059

ಗುರುಗಳೇ-
ನಾ ಅಲ್ಲಿಗೆ ಬಂದರೆ...!!
ನಾಟಕ ವೀಕ್ಷಿಸಿ ಖಂಡಿತ ಆ ಬಗ್ಗೆ ಬರಹ (ವಿಮರ್ಶೆ ಎನ್ನಲು ನಾ ತಯಾರಿಲ್ಲ.!!)ಬರೆವೆನೇನೋ..!!

ಶುಭವಾಗಲಿ..

\।

Submitted by venkatb83 Thu, 02/07/2013 - 16:56

In reply to by partha1059

ಗುರುಗಳೇ-
ನಾ ಅಲ್ಲಿಗೆ ಬಂದರೆ...!!
ನಾಟಕ ವೀಕ್ಷಿಸಿ ಖಂಡಿತ ಆ ಬಗ್ಗೆ ಬರಹ (ವಿಮರ್ಶೆ ಎನ್ನಲು ನಾ ತಯಾರಿಲ್ಲ.!!)ಬರೆವೆನೇನೋ..!!

ಶುಭವಾಗಲಿ..

\।

Submitted by Praveen.Kulkar… Wed, 02/06/2013 - 21:06

In reply to by RAMAMOHANA

ಪಾರ್ಥರವರೆ ದಯವಿಟ್ಟು ಈ ನಾಟಕದ ವಿಡಿಯೋ ತುಣುಕನ್ನು ಸಂಪದಲ್ಲಿ ಸೇರಿಸಲು ಮರೆಯದಿರಿ..ಹಾಗೂ ಎಲ್ಲರಿಗೂ ಶುಭವಾಗಲಿ

Submitted by swara kamath Wed, 02/06/2013 - 21:06

ತುಂಬಾ ಸಂತೋಷದ ವಿಶಯ. ಸಂಪದ ತಂಡದವರು ವಿಭಿನ್ನ ಪಾತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಲಿರುವ ಎಲ್ಲರಿಗೂ ನನ್ನ ಶುಭಾಶಯಗಳು. ಹಾಗೆಯೆ ಸಪ್ತಗಿರಿಯವರ ನಾಟಕದ ವಿಮರ್ಷೆಯ ನಿರೀಕ್ಷೆಯಲ್ಲಿ......ವಂದನೆಗಳು ಪಾರ್ಥರೆ......ರಮೇಶ ಕಾಮತ್

Submitted by venkatb83 Thu, 02/07/2013 - 14:37

In reply to by swara kamath

ಹಿರಿಯರೇ -ನಾ ಸಿನೆಮ ಇತ್ಯಾದಿ ಬಗ್ಗೆ ಏನಾದರೂ ಕೊಂಚ ಬರೆದೇನೂ -ಆದರೆ ಈ ನಾಟಕ ಇತ್ಯಾದಿ ಬಗ್ಗೆ ನನಗೇನೇನೂ ಅನುಭವ ಇಲ್ಲ..
ಅಳದೆ ಅರ್ಧ ಮರ್ಧ ಗೊತ್ತಿರುವುದು ಯಾವತ್ತೂ ಯಾವುದೇ ಆದರೂ ಅಪಾಯಕಾರಿ..!!
ಆ ಬಗ್ಗೆ ಬರೆಯಲು ಗುರುಗಳಾದ ಶ್ರೀಯುತ ಪಾರ್ಥ ಸಾರಥಿ ಅವರು ಮತ್ತು ಗೋಪಿನಾಥ್ ರಾಯರು-ಜಯಂತ್ ರಾಮ್ ಮೋಹನ ಅವರು ಶಕ್ಯರು ಅನ್ಸುತ್ತೆ...
ಒಂದೊಮ್ಮೆ ನಾ ಏನಾದರೂ ಆ ಸುಳಿಗೆ ಸಿಕ್ಕರೆ (ನಾಟಕ ನೋಡಲು ಹೋಗಿದ್ದರೆ)ಆ ಬಗ್ಗೆ ಬರೆದರೂ ಬರೆವೆನೇನೋ...!!

ಶುಭವಾಗಲಿ..

\।