ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು

ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು



ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ ಟೋಸ್ಟ್ ಮಾಸ್ಟರ್ ಆರ೦ಭವಾದದ್ದು ಕನ್ನಡದಲ್ಲಿ ಎ೦ಬ ಹೆಮ್ಮೆ ವಾಕ್ಪಟುಗಳದ್ದು.
ಮೊದಲ ಬಾರಿಗೆ ಇದರ ಬಗ್ಗೆ ಶ್ರೀಯುತ ಪ್ರಭು ಮೂರ್ತಿಯವರು ಸ೦ಪದ ಸಮ್ಮಿಲನದಲ್ಲಿ ಮಾತನಾಡಿದಾಗ ನಿಜಕ್ಕೂ ಸ೦ತಸ ಮತ್ತು ಅಚ್ಚರಿಯೆನಿಸಿತ್ತು ಕಾರಣ ನಾವೆಲ್ಲಾ ಮಾತನಾಡುತ್ತೇವೆ ಆದರೆ ವಸ್ತ...ುವನ್ನು ಕುರಿತಾಗಿ ವಿಷಯವನ್ನು ಕುರಿತಾಗಿ ಮಾತನಾಡಬೇಕಾಗಿ ಬ೦ದಾಗ ವಿಷಯಾ೦ತರ ಮಾಡಿಬಿಡುತ್ತೇವೆ ಮತ್ತು ಹೆಚ್ಚಿನ ಸಮಯವನ್ನು ವಿಷಯಾ೦ತರ ವಿಷಯದಲ್ಲೇ ಹಾಳುಮಾಡಿಬಿಡುತ್ತೇವೆ.
ವಾಕ್ಪಟು (ಕನ್ನಡ ಟೋಸ್ಟ್ ಮಾಸ್ಟರ್) ಈ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಒ೦ದು ಕಾರ್ಯಾಗಾರದ೦ತೆ ಕೆಲ್ಸ ನಿರ್ವಹಿಸುತ್ತಿದೆ. ನಾಯಕತ್ವ ಗುಣ , ಸದಸ್ಯನ ಕಾರ್ಯ ಅವನು ನಿಭಾಯಿಸುವ ರೀತಿ , ಸಲಹಾ ಮ೦ಡಲಿ ಹೇಗಿರಬೇಕು, ಒ೦ದಿಡೀ ಕಾರ್ಯಕ್ರಮವನ್ನು ಕ್ರಮವಾಗಿ ನಿಭಾಯಿಸುವ ಬಗೆ ಹೇಗೆ?
ಒಹ್ ! ಇನ್ನೂ ಹಲವಾರು ವಿಷಯಗಳನ್ನು ಕಲಿಯಬಹುದು
ಇದರೊ೦ದಿಗೆ ಮುಖ್ಯವಾಗಿ ನಿಗದಿತ ಸಮಯದಲ್ಲಿ ವಿಷಯಾ೦ತರ ವಾಗದ೦ತೆ ದನಿಯ ಏರಿಳಿತದಲ್ಲಿ ವೀಕ್ಷಕರನ್ನು ಸೆರೆಹಿಡಿಯುವ ಕಲೆಯನ್ನು ಕಲಿಸುತ್ತದೆ
ಈ ಬಗ್ಗೆ ಕಾರ್ಯ ನಿರ್ವಹಿಸಿದ ಅಥವಾ ಕಾರ್ಯಾಗಾರ ಮಾಡಿದ ಉದಾಹರಣೆಗಳಿಲ್ಲ. ಶ್ರೀಯುತ ಪ್ರಭುರವರು ಈ ಬಗ್ಗೆ ಹೇಳಿದಾಗ ಇಲ್ಲೂ ವಾಕ್ಪಟುಗಳ ಗು೦ಪನ್ನು ಕಟ್ಟಿಕೊಳ್ಳಬಾರದೇಕೆ ಎನಿಸಿತು
ಫೆಬ್ರವರಿ ೨೦೧೧ ರಲ್ಲಿ ಮೊದಲ ಸಭೆ ಸೇರಿ ವಾಕ್ಪಟುಗಳು ವಾಕ್ಪಥವೆ೦ಬ ನಾಮಕರಣದೊ೦ದಿಗೆ ಕಾರ್ಯ ಆರ೦ಭಿಯೇ ಬಿಟ್ಟರು ಹೀಗೆ ಆರ೦ಭವಾದ ನಮ್ಮ ವಾಕ್ಪಥ ತನ್ನ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸ೦ಭ್ರಮದಲ್ಲಿ ಸ೦ಪದಿಗರು ಜೊತೆಗೂಡಬೇಕು. ಸ೦ಪದದಿ೦ದಲೇ ಆರ೦ಭವಾದ ವಾಕ್ಪಥ ಇನ್ನೂ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯನ್ನಿಡಲಿದೆ.ಇದರ ಮೊದಲನೆಯ ಹೆಜ್ಜೆಯಾಗಿ ಮಧುಮೇಹ ಒ೦ದು ಆಪ್ತ ಸಮಾಲೋಚನೆ ಎ೦ಬ ಕಾರ್ಯಕ್ರಮವನ್ನು ದಿನಾ೦ಕ ೧೨ ಫೆಬ್ರವರಿಯ೦ದು ಸೃಷ್ಟಿ ವೆ೦ಚರ್ಸ್ ನಲ್ಲಿ ನಡೆಸಲಿದೆ.  ಬನ್ನಿ ಕೈ ಜೋಡಿಸಿ. ಇಲ್ಲೊಮ್ಮೆ ಕಣ್ಣಾಡಿಸಿ


 




 

ಆತ್ಮೀಯರೇ

ವಾಕ್ಪಥ ವಾರ್ಷಿಕೋತ್ಸವದ ಸ೦ಭ್ರಮದಲ್ಲಿದೆ. ಗೆಳೆಯರೇ ಒ೦ದು ವರ್ಷ ಕಳೆದದ್ದೇ ತಿಳಿಯಲಿಲ್ಲ. ಈ ಹ೦ತದಲ್ಲಿ ವಿಭಿನ್ನವಾದ ವಿಚಾರಗಳನ್ನು ವಾಕ್ಪಥಿಕರು ಸಹ ಪಥಿಕರೊ೦ದಿಗೆ ಹ೦ಚಿಕೊ೦ಡಿದ್ದಾರೆ.
ಭಾಷಣ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಗು೦ಪು ವಾಕ್ಪಥ. ಶ್ರೀಯುತ ಪ್ರಭು ಮೂರ್ತಿಯವರ ಕನಸು ಸ೦ಪದದಲ್ಲಿ ಅನಾವರಣಗೊ೦ಡು ಸೃಷ್ಟಿ ವೆ೦ಚರ್ಸ್ ನಲ್ಲಿ ಸತತವಾಗಿ ಒ೦ದು ವರ್ಷ ತನ್ನ ದಾರಿಯನ್ನು
ಸಾಗಿಸಿದೆ. ಈ ಹಾದಿಯಲ್ಲಿ ಅನೇಕ ಪಥಿಕರು ಸಹಾಯಾತ್ರಿಗಳಾಗಿ ಸಹ ಪಥಿಕರಾಗಿ ಜೊತೆಗೂಡಿ......ದ್ದಾರೆ ಅವರಿಗೆಲ್ಲ ನಮನಗಳನ್ನು ತಿಳಿಸೋಣವೆ೦ದರೆ ಅವರೆಲ್ಲಾ ಸಹ ಪಥಿಕರು, ಜೊತೆಗಾರರು ಸ್ನೇಹಿತರು . ಗೆಳೆಯರಿಗೆ ನಮನಗಳನ್ನು ತಿಳಿಸಿದರೆ ಸಿಟ್ಟಿಗೆದ್ದಾರು. :) ಆದರೂ ಜೊತೆಯಲ್ಲಿ ಸಾಗುತ್ತಿರುವ ಎಲ್ಲಾ ಪಥಿಕರಿಗೆ ಹ್ರುತ್ಪೂರ್ವಕ ಅಭಿನ೦ದನೆಗಳು
Rating
No votes yet

Comments