ವಾಯುವ್ಯನೋ ಅಥವಾ ವಾಯವ್ಯನೋ

ವಾಯುವ್ಯನೋ ಅಥವಾ ವಾಯವ್ಯನೋ

ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ ಇರುವದಿಲ್ಲ ಅದು 'ವಾಯವ್ಯ' ಎಂದಿರುತ್ತದೆ.

ವಾಯವ್ಯ ಸರಿಯೋ ವಾಯುವ್ಯ ಸರಿಯೋ?

ವಾಯವ್ಯ ತಪ್ಪಾಗಿದ್ದರೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಜನರು ಇದನ್ನು ಏಕೆ ಗಮನಿಸಿಲ್ಲ ಎನ್ನುವದು ಸೋಜಿಗದ ಮಾತೆ ಸರಿ.

Rating
No votes yet

Comments