ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿ - ೨

ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿ - ೨

ಏಪ್ರಿಲ್ ೨೬. ೨೦೦೯ ಭಾನುವಾರದಂದು ಕೋಟೆ ಮೈದಾನದಲ್ಲಿ ರಂಜನಿ-ಗಾಯತ್ರಿ ಸಹೋದರಿಯರ ಸಂಗೀತ ಕಾರ್ಯಕ್ರಮವಿತ್ತು. ಅಪಾರ ಜನಸ್ತೋಮ ಸೇರಿತ್ತು. ಮತ್ತೊಂದು ಉತ್ತಮವಾದ

ಕಚೇರಿ ಕೇಳುವ ಸೌಭಾಗ್ಯ ನನ್ನದಾಗಿತ್ತು

೧) ಎವ್ವರಿಬೋದ - ಅಭೋಗಿ- ಪಟ್ಣಂ ಸುಬ್ರಮಣ್ಯ ಐಯ್ಯರ್ - ಆದಿ

೨) ಶ್ರೀ ಸರಸ್ವತಿ ನಮೋಸ್ತುತೆ - ಆರಭಿ - ಮುತ್ತುಸ್ವಾಮಿ ದೀಕ್ಷಿತರು - ರೂಪಕ
-- "ಧರಹಾಸಯುತ ಮುಕಾಂಬುರುಹೆ" ಸಾಲುಗಳಲ್ಲಿ ಸಣ್ಣ ಮಟ್ಟಿನ ಸ್ವರ ಪ್ರಸ್ತಾರಗಳು
-- ಈ ಕೀರ್ತನೆಯ "ವಾಸವಾದ್ಯಖಿಲ ನಿರ್ಜರ" ಸಾಲುಗಳನ್ನು ಅಪ್ಪ ಬಹಳ ಅಭ್ಯಾಸ ಮಾಡಿಸುತ್ತಿದ್ದುದ್ದು ನೆನಪು

೩) ತೆಲಿಯಲೇರು ರಾಮ - ಧೇನುಕ - ತ್ಯಾಗರಾಜ - ಆದಿ

೪) ಕಾದಿರುವೆನು ನಿನಗಾಗಿ ಶ್ರೀ ರಾಮ - ರಂಜನಿ - ಅಂಬುಜಂ ಕೃಷ್ಣ - ಆದಿ
-- ರಾಗಾಲಾಪನೆ ಉತ್ತಮವಾಗಿತ್ತು
-- "ಪಾದಾಂಬುಜದ ಪೂಜೆಗೆ" ಸಾಲಿನಲ್ಲಿ ನೆರವಲ್ ಹಾಗೂ ಸ್ವರ ಪ್ರಸ್ತಾರಗಳು

೫) ಚಿತಂ ಇರಂಗಾನಿರಯ್ಯ (ಸಾಹಿತ್ಯ??) - ಶಹನಾ(ಸಹನಾ) - ಪಾಪನಾಶಮ್ ಶಿವನ್ - ಮಿಶ್ರಚಾಪು

೬) ಕಲಿಗಿಯುಂಟೆ ಕದಾ - ಕೀರವಾಣಿ - ತ್ಯಾಗರಾಜ - ಆದಿ
-- ಈ ರಾಗವನ್ನು ಬಹಳಷ್ಟು ಮಂದಿ ಹೇಳುವುದಿಲ್ಲ. ಬಹಳ ಭಕ್ತಿಪೂರ್ಣ ರಾಗ
-- ಉತ್ತಮವಾದ ಆಲಾಪನೆ
-- ನೆರವಲ್ ಇರಲಿಲ್ಲ. ಬಹುಶಃ ರಾಗ-ತಾನ-ಪಲ್ಲವಿ ಹಾಡಬಹುದು ಎಂದು ಊಹಿಸಿದೆ.
-- "ಬಾಗುಹ ಶ್ರೀ ರಘು" ಸಾಲುಗಳಲ್ಲಿ ಸ್ವರ-ಪ್ರಸ್ತಾರಗಳು
-- ಈ ಹಾಡಿಗೆ ತನಿ ಬಿಟ್ಟರು. ಬಹುಶಃ ತಡವಾಗಿ ತನಿ ಬಿಟ್ಟರೆ ಅನೇಕರು ಎದ್ದು ಹೋಗಬಹುದೆಂದು ಹೀಗೆ ಮಾಡಿರಬೇಕು. ಶ್ರೀ ಮುಷ್ಣಂ ವಿ ರಾಜಾರಾವ್ ಅವರು ಒಮ್ಮೆ "ರಸಿಕರಿಗೆ ಶೌಚದ

ನೆನಪಾಗುವುದು ತನಿ ಆವರ್ತನೆಯ ಸಮಯದಲ್ಲಿ" ಎಂದು ಹಾಸ್ಯದ ಜೊತೆಗೆ ಖೇದ ವ್ಯಕ್ತಪಡಿಸಿದ್ದರು.

೭) ವರನಾರದ - ವಿಜಯಶ್ರೀ - ತ್ಯಾಗರಾಜ - ಆದಿ

೮) ರಾಗ-ತಾನ-ಪಲ್ಲವಿ (ನಾಟಕುರಂಜಿ ರಾಗ) - ಖಂಡಜತಿ ಝಂಪೆ
-- ಮೊದಲನೆಯ ಬಾರಿ ಈ ರಾಗದ ರಾಗ-ತಾನ-ಪಲ್ಲವಿ ಆಲಿಸಿದ್ದು
-- ಪಲ್ಲವಿಗೆ ಆರಿಸಿಕೊಂಡಿದ್ದು ಸದಾಶಿವ ಬ್ರಹ್ಮೇಂದ್ರರ ರಚನೆಯ ಸಾಲು "ಚೇತ: ಶ್ರೀ ರಾಮಂ ಚಿಂತಯ ಜೀಮೂತ ಶ್ಯಾಮಂ"
-- ಸ್ವರ ಪ್ರಸ್ತಾರಗಳು ರಾಗಮಾಲಿಕೆಯಲ್ಲಿದ್ದವು (ನಾಟಕುರಂಜಿ, ನಾಟ, ಸಾರಮತಿ(?), ಹಮಿರ್ ಕಲ್ಯಾಣಿ, ದ್ವಿಜಾವಂತಿ, ನಾಟಕುರಂಜಿ)

ಸಮಯದ ಅಭಾವದಿಂದ ಸಂಪೂರ್ಣ ಕಚೇರಿ ಕೇಳಲಾಗಲಿಲ್ಲ. ಇದರ ನಂತರ ಒಂದೆರಡು ಕೀರ್ತನೆಗಳನ್ನು ಹಾಡಿರಬಹುದೆಂಬ ನನ್ನ ಊಹೆ.

Rating
No votes yet

Comments