ವಾಹ್ ರೇ ಸಂಪದ!

ವಾಹ್ ರೇ ಸಂಪದ!

ಪ್ರಿಯರೇ,

ಬಹುದಿನಗಳ, ಅಲ್ಲಲ್ಲ... ಬಹು ಮಾಸಗಳ ನಂತರ ಸಂಪದಕ್ಕೆ ಪುನಃ ಭೇಟಿ ನೀಡಿದ್ದೇನೆ... ಹೊಸ ಬಣ್ಣ, ಹೊಸ ಲಾವಣ್ಯ ತುಂಬಿ ನಿಂತಿದ್ದಾಳೆ ಸಂಪದ (ದಾ)...!!! ಸಂತೋಷವಾಗ್ತಿದೆ...

ಈಗ ನಾನು ಬ್ಯಾಂಕಾಕಿನಿಂದ ಅಲ್ಲ, ಭಾರತದ ಮಂಗಳೂರಿನಿಂದ ಈ ಅಕ್ಷರಗಳನ್ನು ಟೈಪಿಸುತ್ತಿದ್ದೇನೆ! ಹೌದು, ನಾನು ಭಾರತಕ್ಕೆ ಮರಳಿ ಬಂದಿದ್ದೇನೆ. :)

ಆಯುರ್ವೇದ ಪಾಠ, ಚಿಕಿತ್ಸೆ ಮತ್ತು ಫೋಟೋಗ್ರಫಿಯ ಜೊತೆಗೆ ರಿ/ಮ್ಯಾಕ್ಸ್ ಎಂಬ ಸಂಸ್ಥೆಯ ಫ಼್ರ್ಯಾಂಚೈಸಿಯನ್ನು ನಡೆಸುತ್ತಿದ್ದೇನೆ. ಅದರಲ್ಲಿ ಜನರಿಗೆ ಎಲ್ಲಾ ಬಗೆಯ ಆಸ್ತಿ (ರಿಯಲ್ ಎಸ್ಟೇಟ್) ಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸಲು ಅನುಕೂಲ ಮಾಡಿಕೊಡುತ್ತಿದ್ದೇವೆ. :)

ಇದನ್ನು ಕೇಳಿ ಕೆಲವರಿಗೆ ತಮಾಷೆ ಅನಿಸಬಹುದು, ಕೆಲವರಿಗೆ ಆಶ್ಚರ್ಯವಾಗಬಹುದು ಅಥವಾ ಇನ್ನು ಕೆಲವರಿಗೆ ಈ ವೈದ್ಯರಿಗೆ ಮರುಳೇ ಅಂತ ಅನಿಸಲೂಬಹುದು. :) ವೈವಿಧ್ಯವಿರುವ ಜೀವನ ಚೆನ್ನ ಅಂತ ನನ್ನ ಅನಿಸಿಕೆ, ಅದೇ ನನ್ನ ಸ್ವಭಾವ ಕೂಡ, ಏನು ಮಾಡೋಣ!

ಇನ್ನು ಮುಂದೆ ಸಾಧ್ಯವಾದಷ್ಟು ಸಂಪದದಲ್ಲಿ ಸಕ್ರಿಯನಾಗಿರಬೇಕು ಅಂದುಕೊಂಡಿದ್ದೇನೆ... ಹಾಗೆಯೇ ಆಗುತ್ತದೆ ಅಂತ ನಂಬಿದ್ದೇನೆ!

ಪುನಃ ಭೇಟಿಯಾಗೋಣ... :)

Rating
No votes yet

Comments