ವಿಕ್ಷಿಪ್ತ ವ್ಯಕ್ತಿತ್ವಗಳು

ವಿಕ್ಷಿಪ್ತ ವ್ಯಕ್ತಿತ್ವಗಳು

ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು ಸಣ್ಣ ವಿಷಯ ಬೆಂಗಳೂರಿನ ಕಾರ್ಪೋರೇಟರ ಆಗಿ ಶ್ರೀಮತಿ ಲಲಿತ ಎನ್ನುವವರ ವಿಷಯ.

ಬೆಂಗಳೂರಿನ ಗಿರಿನಗರ ವಿಭಾಗದಿಂದ ಕಾರ್ಪೋರೇಟರ್ ಆಗಿ ಆರಿಸಲ್ಪಟ್ಟ ಆಕೆ ಸಮಾಜದಲ್ಲಿ ಒಂದು ಗೌರವಾನ್ವಿತ ಅನ್ನುವ ಸ್ಥಾನದಲ್ಲಿದ್ದರು. ಕಳೆದ ಏಪ್ರಿಲ್ ನಲ್ಲಿ ಒಂದು ಮಾಲ್ ನಲ್ಲಿ ಕಳ್ಳತನ ಮಾಡಿದ ಆರೋಪಕ್ಕೆ ಒಳಗಾಗಿ ಪೋಲಿಸರು ಬಂದಿಸಿದರು. ರಾಜಕಾರಣಿಗಳು ಕೋಟಿ ಕೋಟಿ, ಕಾರ್ಪೋರೇಟರ್ ಗಳು ಕೋಟಿ ಲೆಕ್ಕದಲ್ಲಿ ಸಾರ್ವಜನಿಕ ಹಣವನ್ನು ನುಂಗಿ ನೀರು ಕುಡಿಯುತ್ತಿರುವಾಗ ಆಕೆ ಕಳತನ ಮಾಡಿದ್ದು ಕೇವಲ ಒಂದು ಚೂಡಿದಾರ್ ಟಾಪ್ ಅನ್ನುವುದು ಕುತೂಹಲದ ವಿಷಯ.

ಅಂಗಡಿಯಾತ ನೀಡಿದ ಕಂಪ್ಲೇಟ್ ಮೇಲೆ ಆಕೆ ಅರೆಷ್ಟ್ ಆಗಿ ಪರಪ್ಪನ ಅಗ್ರಹಾರ ಸೇರಿದರು.

ನಂತರ ಕೋರ್ಟ್ ನಿಂದ ಬೈಲ್ ಸಿಕ್ಕಿ ಬಿಡುಗಡೆಯೂ ಆಗಿತ್ತು.

ಪತ್ರಿಕೆಗಳಲ್ಲಿ ಬಂದಂತೆ ಆಕೆ ಮಾನಸಿಕ ರೋಗಿಯಾಗಿದ್ದರು ಅಂದರೆ ವಸ್ತುಗಳನ್ನು ಕದಿಯುವ ವ್ಯಸನ. 
ಅದು ನಿಜವೋ ಸುಳ್ಳೋ ಎನ್ನುವುದು ಗೊಂದಲ

ಆದರೆ ಎಷ್ಟೋ ತಿಂಗಳ ನಂತರ ಆಕೆ ನವೆಂಬರ್ ನಲ್ಲಿ ವಿಷಕುಡಿದು ಆಸ್ಪತ್ರೆ ಸೇರಿದರು, ನಂತರ ಮರಣ ಹೊಂದಿದರು.

ಸಾಕಷ್ಟು ಜವಾಬ್ದಾರಿಯುತ ಸ್ಥಾನ ಹೊಂದಿದ್ದ ಆಕೆ, ತೀರ ಬೀದಿ ಬದಿಯ ಕಳ್ಳರು ಕದಿಯುವ ಸಣ್ಣ ವಸ್ತುಗಳನ್ನು, ಕದಿಯುವ ವ್ಯಸನಕ್ಕೆ ಏಕೆ ಬಿದ್ದರು, ಅಥವ ಇರುವ ಹುನ್ನಾರವಾದರು ಎಂತಹುದು. ಆಕೆಗೆ ಅಂತಹ ಖಾಯಿಲೆ ಒಂದು ಇತ್ತೆ, ಅದು ನಿಜವೇ ಆಗಿದ್ದರೆ ಆಕೆ ಅದಕ್ಕೆ ತಕ್ಕ ಚಿಕಿತ್ಸೆ ಪಡೆಯದೆ ಆತ್ಮಹತ್ಯೆಯಂತ ನಿರ್ಧಾರಕ್ಕೆ ಬಂದುದ್ದಾದರು ಏಕೆ.

ಅವರ ಮಾನಸಿಕ ಸ್ಥಿಥಿ ಎಂತದಿತ್ತು. ಅತ್ಯಂತ ಕುತೂಹಲ ಹಾಗು ನೋವಿನ ವಿಷಯ ಆದರೆ ಅದೇಕೊ ಪತ್ರಿಕೆಗಳಲ್ಲಿ ಅವುಗಳ ಬಗ್ಗೆ ಸಾಕಷ್ಟು ವಿವರ ಬರಲೇ ಇಲ್ಲ , ಅವರಿಗೆ ಅದು ಕುತೂಹಲದ ವಿಷಯವಾಗಿ ಕಾಣಲಿಲ್ಲ . ನನಗಂತೂ ಇಂತಹ ವ್ಯಕ್ತಿತ್ವಗಳು ಸಾಕಷ್ಟು ಕುತೂಹಲ ಆಸಕ್ತಿ ಹುಟ್ಟಿಸುತ್ತದೆ

Rating
No votes yet

Comments

Submitted by ಗಣೇಶ Sun, 12/14/2014 - 20:54

ಕವಿನಾಗರಾಜರು ಹೇಳಿದಂತೆ ಟಿವಿ ಚಾನಲ್‌ಗಳು/ಪತ್ರಿಕೆಗಳು ತೀರಾ ಕಳ್ಳರ ಹಾಗೆ ಇವರನ್ನು( http://bit.ly/1GmWZOz ) ನೋಡಿತು. ಅವಮಾನ,(ಪಕ್ಷದಿಂದ ಅಮಾನತು ಮಾಡಿರಬಹುದು..) ಡಿಪ್ರೆಶನ್ ಇತ್ಯಾದಿ ಕಾರಣಗಳು ಅವರ ಆತ್ಮಹತ್ಯೆಗೆ ಕಾರಣವಿರಬಹುದು, http://www.afternoondc.in/health-fitness/dealing-with-a-kleptomaniac/art...