ವಿಜಯ ಕರ್ನಾಟಕ : ಕನ್ನಡಿಗರ ವಿಜಯ
ವಿಜಯ ಕರ್ನಾಟಕ ನಿಜವಾಗಿಯೂ ಸಮಸ್ತ ಕನ್ನಡಿಗರ ಹೆಮ್ಮೆ. ಇದು ಉತ್ಪ್ರೇಕ್ಷೆಯಲ್ಲ! ಕೇವಲ ೬ ವರ್ಷಗಳ ಹಿಂದೆ ಶುರುವಾದ ಈ ಪತ್ರಿಕೆ ಇಂದು ಎಂತಹ ಸ್ಠಾನದಲ್ಲಿದೆ ನೋಡಿ. ಅಂಕಿ ಅಂಶಗಳ ಪ್ರಕಾರ ಇದು ಕರ್ನಾಟಕದ ನಂ.೧ ಪತ್ರಿಕೆ.
ಕನ್ನಡಿಗರಿಗೆ ನಿಜವಾಗಿಯೂ ಇಂತಹ ಪತ್ರಿಕೆಯೊಂದರ ಅವಶ್ಯಕತೆಯಿತ್ತು. ಇತರ ಕನ್ನಡ ಪತ್ರಿಕೆಗಳಂತೂ ನಮ್ಮದೇ ಆದ ಚೌಕಟ್ಟನ್ನು ಹಾಕಿ ಕೊಂಡು ಅದರ ಮಿತಿಯೊಳಗೆ ಬರೆಯುತ್ತಿವೆ. ಏನೇ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಖಂಡಿಸುವ ಧೈರ್ಯವೂ ಇಲ್ಲದೆ ಒಂದು ವರದಿಯನ್ನು ಹಾಕಿ ಸುಮ್ಮನಾಗುತ್ತವೆ. ಆದರೆ ವಿ.ಕ ಹಾಗಲ್ಲ. ಅದರ ವರದಿಗಳು, ಅಂಕಣಗಳು ಸೂಜಿ ಮೊನೆಯಷ್ಟೇ ಚೂಪು ಚೂಪು. ವಿವಾದಾತ್ಮಕ ಘಟನೆಗಳನ್ನು ವಿವರವಾಗಿ ವಿಷ್ಲೇಶಿಸಿ, ಓದುಗರ ಅಭಿಪ್ರಾಯವನ್ನೂ ನಿಷ್ಪಕ್ಷವಾಗಿ ಪ್ರಕಟಿಸಿ ಜನ ಜಾಗೃತಿ ಮೂಡಿಸುತ್ತಾರೆ. ಒಟ್ಟಿನಲ್ಲಿ ವಿಶ್ವೇಶ್ವರ ಭಟ್ ಹಾಗೂ ಪ್ರತಾಪ ಸಿಂಹರನ್ನೂಳಗೊಂಡ ಸಂಪಾದಕ ವರ್ಗ ಉತ್ತಮ ಕೆಲಸ ಮಾಡುತ್ತಿದೆ.
Rating