ವಿದಾಯ

ವಿದಾಯ

     

      ನಾನು ನೀನು ಬೇರೆ ಎಂದು ತಿಳಿದಿರಲಿಲ್ಲ ನನಗೆ
      ಇಬ್ಬರೂ ಬೇರೆ ಬೇರೆ ಹಾದಿ ಆಯ್ದುಕೊಳ್ಳುವವರೆಗೆ,
      ನಿನ್ನ ಆಸೆಗೆ ನೀರೆರೆದು ಪೋಷಿಸುತ್ತಾ
      ನಿನ್ನಿಂದ ದೂರವಾಗುತ್ತಿರುವುದನ್ನೇ ಮರೆತೆ
    
      ನಾ ಕೊಟ್ಟ ವಚನದಂತೆ ನಿನ್ನ ಪ್ರೋತ್ಸಾಹಿಸಬೇಕಿದೆ
      ನಿನ್ನ ಕನಸುಗಳು ಸಾಕಾರಗೊಳ್ಳಲು ನಾವು ಅಗಲಿರಬೇಕಿದೆ
     
      ಕಾಣದ ಊರು, ಕಾಣದ ಜನರ ನಡುವೆ
      ನಿನ್ನನ್ನು ಗುರುತಿಸಿಕೊಳ್ಳುವ ತವಕ ನಿನಗೆ,
     ನಾನೇ ನೀನೋ, ನೀನೆ ನಾನೋ  ಅಥವಾ
     ಇಬ್ಬರೂ ಬೇರೆಯೋ ಎಂಬ ಗೊಂದಲ ನನಗೆ.

     ಹೋಗಿ ಬಾ ಗೆಳೆಯ, ಇಲ್ಲಿಂದಲೇ ಹೇಳುವೆನು ವಿದಾಯ,
     ನಿನ್ನ ಬೀಳ್ಕೊಡುವ ಧೈರ್ಯ ಉಳಿದಿಲ್ಲ,
     ನಿನ್ನ ಕಂಗಳಲ್ಲಿನ ಪ್ರೀತಿ ದುರ್ಬಲಗೊಳಿಸುವುದು ನನ್ನ - ಸಂಶಯವಿಲ್ಲ.

     ಇಲ್ಲಿಂದಲೇ ಹೇಳುವೆ ವಿದಾಯ ನಿನಗೆ
      ಇನ್ಮುಂದೆ ನಿನ್ನ ನೆನಪು,ಕನಸೇ ಬದುಕು ನನಗೆ.

 

 

-- ಇದು ನನ್ನ ಮೊದಲ ಕವನ(?).  ತಪ್ಪಾಗಿದ್ದಲ್ಲಿ ತಿದ್ದಿ ಪ್ರೋತ್ಸಾಹಿಸಿ :)

Rating
No votes yet

Comments