ವಿರಹ ಗೀತ
ನೆನಸಲೊಲ್ಲೆಯ ಕನಸಿನೊಳಾದರು ನೀ ಮರೆತುಹೋದ ಹಾಡನ್ನು|
ಬಿಕ್ಕಳಿಸುತ್ತಲೇ ನಾ ನೆನಸುತ್ತಿಹ ಪ್ರೇಮದ ಕವಿತೆಯ ಅಂತ್ಯವನು|
ತೊರೆದು ಹೋದರೂ ನೀನೀ ಕವಿತೆಯ ನೆನಸಲೊಲ್ಲೆಯ ಈಗ|
ತುಂಬಿದ ಒಡಲಿನ ಉಗುರೊತ್ತುಗಳ ಅಳಿಸಬಲ್ಲೆಯ ಈಗ-
ಬೆರಳಿನ್ದ್- ಅಳಿಸಬಲ್ಲೆಯ ಈಗ|
ಉದುರಿದ ಎಲೆಗಳ ಹೆಕ್ಕುತ್ತಿಹೆನು, ಕಟ್ಟುತಿಹೆನು ಗೂಡುಗಳ|
ಬಿರಿದಿಹ ಹೂವೊಳು ಉದುರಿದ ಹನಿಗಳ ಬಯಸುತ್ತಿಹೆ ನಾನಿನ್ದು-
ಇನ್ದಿಗೂ ಬಯಸುತ್ತಿಹೆ ನಾನೆನುತ|
ನೆನಸಲೊಲ್ಲೆಯ ಕನಸಿನೊಳಾದರು ಮರೆತುಹೋದ ಹಾಡನ್ನು|
ಬಿಕ್ಕಳಿಸುತ್ತಲೇ ನಾ ನೆನಸುತ್ತಿಹ ಪ್ರೇಮದ ಅನ್ತಿಮ ಚರಣವನು|
Rating
Comments
ಉ: ವಿರಹ ಗೀತ
In reply to ಉ: ವಿರಹ ಗೀತ by kavinagaraj
ಉ: ವಿರಹ ಗೀತ
In reply to ಉ: ವಿರಹ ಗೀತ by kpbolumbu
ಉ: ವಿರಹ ಗೀತ