ವಿಶ್ವ ಏಡ್ಸ್ ದಿನ : ಸಡಗರದ ಆಚರಣೆ !

ವಿಶ್ವ ಏಡ್ಸ್ ದಿನ : ಸಡಗರದ ಆಚರಣೆ !

ಬೊಗಳೂರು, ಡಿ.1- ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮ ಸಡಗರಗಳಿಂದ ವಿಧ್ಯುಕ್ತವಾಗಿ ಆಚರಿಸಲಾಯಿತು ಎಂದು ತಿಳಿದುಬಂದಿದೆ. (bogaleragale.blogspot.com)

ಸುಮಾರು 25 ವರ್ಷಗಳ ಹಿಂದೆ ಏಡ್ಸ್‌ಗೆ ಕಾರಣವಾಗುವ ಎಚ್ಐವಿ (ವೈರಸ್) ಪತ್ತೆಯಾದ ಬಳಿಕ ಏಡ್ಸ್‌ ಕುರಿತಾಗಿ ಭರ್ಜರಿ ಪ್ರಗತಿಯಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದ್ದು, ತನ್ನ ಆಳವಾದ ಬೇರುಗಳನ್ನು ಕುಗ್ರಾಮಗಳಿಗೂ ತೂರಿಸಿದೆ.

ಈ ಶುಭವಸರದಲ್ಲಿ, ಏಡ್ಸ್ ನಿಷೇಧಿಸಲು ಸರಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.

ಏರುತ್ತಿರುವ ಜನಸಂಖ್ಯೆ ಹತೋಟಿಗೆ ತರಲು ಪ್ರಮುಖ ಆಯುಧಗಳಲ್ಲೊಂದಾಗಿರುವ ಈ ರೋಗವನ್ನು ನಿಷೇಧಿಸಿದರೆ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬುದು ಪ್ರತಿಪಕ್ಷಗಳ ಕೂಗಾಟ.

ಆದರೆ ಪ್ರತಿಪಕ್ಷಗಳ ಒಕ್ಕೂಟ ಅಂಗ ಪಕ್ಷವೊಂದು, ಏಡ್ಸ್ ನಿಷೇಧಿಸಿದಲ್ಲಿ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವುದಾದರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸಿದೆ

Rating
No votes yet