ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯ
ವೀರಾಂಜನೇಯನಿಗೆ ನಮನ - 8
ಕಂಡಿರಾ ಮಾರುತಿಯ
ಕಂಡಿರಾ ಮಾರುತಿಯ | ನೀವು | ಕಂಡಿರಾ ಮಾರುತಿಯ ||
ಕೋದಂಡಪಾಣಿಯ ಹೆಗಲಲಿ ಹೊತ್ತವನ |
ಶತಯೋಜನ ಸಾಗರವನೆ ಜಿಗಿದವನ ||ಪ||
ವೇದ ಸಂಪನ್ನನ ಚಾರು ಭಾಷಿಕನ |
ದಾಶರಥಿಗೆ ಹಿತ ಮುಖ್ಯಪ್ರಾಣನ ||
ಸುಗ್ರೀವಾಪ್ತನ ಸುಗುಣಪೂರ್ಣನ |
ಪವನಸಂಭೂತ ವಿಮಲ ಸಚರಿತನ ||1||
ಶಿವಸ್ವರೂಪನ ನಿತ್ಯತೃಪ್ತನ |
ಭೀಮಪರಾಕ್ರಮಿ ಶಾಂತ ವಿಚಕ್ಷಣ ||
ಕೋಮಲತೆಗೆ ಸುಮ ಸದೃಶನೀತನ |
ಗುಣ ಖಳರಿಗೆ ಬಲು ವಜ್ರ ಸಮಾನ ||2||
ಕಪಿಕುಲೋತ್ತಮ ವಿಶ್ವಂಬರನ |
ಸಾತ್ವಿಕ ಗುಣ ಸಂಪದ ಪರಿಪೂರ್ಣನ ||
ಭಯವರಿಯದ ಧೀ ತೇಜೋನ್ವಿತನ |
ಸಕಲ ಚರಾಚರ ಅಂತಃಸ್ಥಿತನ ||3||
- ಸದಾನಂದ
Rating