ವೀರಾಂಜನೇಯ ಭಕ್ತಿ ಕುಸುಮಾಂಜಲಿ 6
ವೀರಾಂಜನೇಯನಿಗೆ ನಮನ - 6
ಜೈ ಹನುಮಂತ
ವಾನರವೀರನೇ ಜೈ ಹನುಮಂತ |
ಭುವನಧೀರನೇ ಜೈ ಹನುಮಂತ ||ಪ||
ಸಾಗರವನು ಹಾರಿದ ಹನುಮಂತ |
ಜಾಂಬವ ಜೈ ಎನ್ನಲು ಬಲವರಿತ |
ಏರಿದ ಬಂಡೆಯ ಝಾಡಿಸಿ ನೆಗೆದ |
ರಾಮನ ನೆನೆದಾಗಸದಲಿ ಚಿಮ್ಮಿದ ||
ಅಡೆತಡೆ ಯಾವುದು ಗಣನೆಗೆ ಇಲ್ಲ |
ಶರಧಿಯ ದಾಟಿ ನೋಡಿದನೆಲ್ಲ |
ಸೂಕ್ಷ್ಮಾಕಾರವ ಧರಿಸಿದನಲ್ಲ |
ಬೇಕಾದೆಡೆ ಹಿರಿದಾಗಲು ಬಲ್ಲ || 1||
ಅರಮನೆ ನೆರಮನೆ ಎಲ್ಲವ ಹುಡುಕಿ |
ಸೀತಾದೇವಿಯ ಕಾಣದೆ ಬಳಲಿ |
ಉಪವನದಲ್ಲಿ ಅರಸಲು ತೆರಳಿ |
ಅಶೋಕವನದಲಿ ಕಂಡನು ಮಾರುತಿ ||
ರಾಮನ ಕಥೆ ಹೇಳುತ ಪರಿಚಯಿಸಿ |
ಸೀತೆಯ ಸಂಶಯವೆಲ್ಲ ನಿವಾರಿಸಿ |
ಮದ್ರೆಯ ಉಂಗುರವನು ತಾ ನೀಡಿ |
ಚೂಡಾಮಣಿಯನು ಪಡೆದನು ಮುದದಿ ||2||
ಸುತ್ತಲ ವನವನು ಧ್ವಂಸ ಮಾಡಿದನು |
ಎದುರಿಸಿದಕ್ಷಕುಮಾರನ ಕೊಂದನು |
ರಾವಣನಿಗೆ ಬಲು ಹಿತೋಕ್ತಿ ನುಡಿದನು |
ಬಾಲಕೆ ಬೆಂಕಿಯ ಹಚ್ಚಲು ಬೆಳೆದನು ||
ಲಂಕಾದಹನದ ವೀರಾಂಜನೇಯ |
ಸೀತಾನ್ವೇಷಕ ವೀರಾಂಜನೇಯ ||
ರಾಘವಪ್ರೀಯನೆ ವೀರಾಂಜನೇಯ |
ಮುಖ್ಯಪ್ರಾಣನು ವೀರಾಂಜನೇಯ ||
ಜೈ ಜೈ ಜೈ ಜೈ ವೀರಾಂಜನೇಯ |
ಬಂಗಾರಮಕ್ಕಿಯ ವೀರಾಂಜನೇಯ ||3||
- ಸದಾನಂದ
Comments
ಚೆನ್ನಾಗಿದೆ ಸದಾನ0ದರೆ.
ಚೆನ್ನಾಗಿದೆ ಸದಾನ0ದರೆ.
ಆದರೆ ಪುಟ ನೋಡುವಾಗ ಗದ್ಯದ ಹಾಗೆ ಕಾಣುತ್ತಾ ಇದೆ,ತಾ0ತ್ರಿಕ ತೊ0ದರೆಯೇ?