ವೆನಿಲ್ಲಾ...

ವೆನಿಲ್ಲಾ...

ವೆನಿಲ್ಲಾ...
ಯಾರಿಗೆ ವೆನಿಲ್ಲಾ ಬಗ್ಗೆ  ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ?  ಅದ್ರ ಗಿಡ ಹೇಗಿರುತ್ತೆ  ಅಂತ ತಿಳಿಯುವ  ಕುತೂಹಲ ಇದೆಯೇ?

ಇದೊಂದು  ಆರ್ಕಿಡ್  ಜಾತಿಗೆ ಸೇರಿದ ಬಳ್ಳಿ, ನಮ್ಮೂರಿನ  ಕಡೆ ಅಡಿಕೆ ಮರಕ್ಕೆ/ ಸಣ್ಣ ಮರಗಳಿಗೆ ಹಬ್ಬಿಸುತ್ತಾರೆ. ಬಳ್ಳಿಯನ್ನೇ ಎರಡು ಮೂರು ಗಣ್ಣುಗಳಿರುವಂತೆ  ತುಂಡರಿಸಿ  ಮತ್ತೊಂದು ಗಿಡವಾಗಿ ನೆಡಬಹುದು.
ವೆನಿಲ್ಲಾಗೆ ಸ್ವಾಭಾವಿಕವಾಗಿ  ಪರಾಗಸ್ಪರ್ಷ  ಆಗುವುದಿಲ್ಲವಾದ್ದರಿಂದ  ಪ್ರತಿಯೊಂದು ಹೂಗಳಿಗೆ  ಪರಾಗಸ್ಪರ್ಷ ಮಾಡಬೇಕು. (ಮೆಕ್ಸಿಕೋದಲ್ಲಿರುವ ಒಂದು ಕೀಟ ಮಾತ್ರ ಇದಕ್ಕೆ   ಪರಾಗಸ್ಪರ್ಷ ಮಾಡುತ್ತಂತೆ)
(ಚಿತ್ರ: ವೆನಿಲ್ಲಾ ಹೂವು)
ವೆನಿಲ್ಲಾ ಹೂವು

(ಚಿತ್ರ : ವೆನಿಲ್ಲಾ ಹೂವು ಮತ್ತು ಮೊಗ್ಗುಗಳು )

ವೆನಿಲ್ಲಾ ಹೂವು ಮತ್ತು ಮೊಗ್ಗು

(ಚಿತ್ರ : ವೆನಿಲ್ಲಾ ಹೂವಿನ  ಒಳಭಾಗ, ಪರಾಗಸ್ಪರ್ಷ ಮಾಡುವಾಗ ಒಂದು ಸಣ್ಣ ಕಡ್ಡಿ  ಬಳಸಿ  ಒಳಗಿನ ಭಾಗ ಎತ್ತಿ  ಅದರ ಮೇಲುಗಡೆ ಭಾಗಕ್ಕೆ   ತಾಗಿಸುತ್ತಾರೆ)

ಬಳ್ಳಿಗಳು ತುಂಬಾ  ಉದ್ದವಾಗಿ ಹಬ್ಬಿದರೆ  ಪರಾಗಸ್ಪರ್ಷ ಮಾಡಲು ಕಾಯಿ ಕುಯ್ಯಲು ಕಷ್ಟ ಆಗುತ್ತದಾದ್ದರಿಂದ  ಸಲ್ಪ ಎತ್ತರಕ್ಕೆ ಹೋದಮೇಲೆ  ಸಲ್ಪ ಎತ್ತರಕ್ಕೆ  ಒಂದು ಆಸರೆ ಕೊಟ್ಟು  ವುಳಿದ ಭಾಗವನ್ನು  ಇಳಿಬಿಡುತ್ತಾರೆ. ಇಳಿಬಿಟ್ಟ ಭಾಗ ನೆಲ ಮುಟ್ಟುವಷ್ಟು ಉದ್ದವಿದ್ದರೆ   ತುಂಡರಿಸಿ  ಅವುಗಳನ್ನು ಬೇರೆಡೆಗೆ ನೆಡುತ್ತಾರೆ.

ವೆನಿಲ್ಲಾ ಕಾಯಿಗಳು  ಬೀನ್ಸ್ ತರಹ ಇರುತ್ತೆ ನೋಡಕ್ಕೆ, ವೆನಿಲ್ಲಾ ಬೀನ್ಸ್ ಅಂತಾನೇ ಕರೀತಾರೆ. ಕೆಳಗಿನ ಚಿತ್ರ ನೋಡಿ.

ಈ ಕಾಯಿಗಳು ಒಂದು ಹದಕ್ಕೆ  ಬೆಳೆದ ನಂತರ, ಕೊಯ್ದು     ಒಣಗಿಸುತ್ತಾರೆ. ಒಣಗಿಸೋದಕ್ಕೂ  ಕೆಲವು ಕ್ರಮಗಳಿವೆ. ನನ್ನ  ಕೆಲವು ಪ್ರಯೋಗಗಳು  ವೆನಿಲ್ಲಾ ಕಾಯಿಗಳನ್ನ ಹಾಳು ಮಾಡಿದ್ದವಾದ್ದರಿಂದ ಇಲ್ಲಿ ಬಹಿರಂಗ ಪಡಿಸುತ್ತಿಲ್ಲ :)


ವೆನಿಲ್ಲಾ ಬಗ್ಗೆ ಹೆಚ್ಚಿನ ವಿವರಗಳಿಗಾಗಿ  ವಿಕಿಪೀಡಿಯ ಪುಟ ನೋಡಬಹುದು.
http://en.wikipedia.org/wiki/Vanilla

Rating
No votes yet

Comments