ವೇದದಲ್ಲಿ ಬೆಳಕಿನ ವೇಗ!

ವೇದದಲ್ಲಿ ಬೆಳಕಿನ ವೇಗ!

ಬೆಳಕಿನ ವೇಗ ಪ್ರತಿ ಸೆಕಂಡಿಗೆ ೧೮೬ ಸಾವಿರ ಮೈಲುಗಳಂತೆ. ರೋಮರ್ ಎಂಬಾತ ೧೬೭೫ರಲ್ಲಿ ಇದನ್ನು ಕಂಡು ಹಿಡಿದ.

ಆದರೆ ನಮ್ಮ (ವಿಜಯನಗರ ಸಾಮ್ರಾಜ್ಯದ) ಬುಕ್ಕರಾಯನ ಆಸ್ತಾನದಲ್ಲಿ ಇದ್ದಂತ ಸಾಯನ ( c. 1315-1387) , ತನ್ನ ಋಗ್ವೇದ ಭಾಷ್ಯದಲ್ಲಿ ಬೆಳಕಿನ ವೇಗದ ಬಗ್ಗೆ ಬರೆದಿದ್ದಾನೆ ಅಂತ ಓದಿದೆ.

तरणिर्विश्वदर्शतो ज्योतिष्कृदसि सूर्य । विश्वमा भासिरोचनम् ॥
ತರಣಿರ್ವಿಶ್ವದರ್ಶತೋ ಜ್ಯೋತಿಕೃದಸಿ ಸೂರ್ಯ ! ವಿಶ್ವಮಾ ಭಾಸಿರೋಚನಂ!!

ಈ ಋಗ್ವೇದ ವಚನಕ್ಕೆ ಸಾಯನ ಭಾಷ್ಯ ಬರೆಯುತ್ತಾ "ಸ್ಮರ್ಯತೆ ಯೋಜನಾನಂ, ಸಹಸ್ರೆ ದ್ವೇ ದ್ವೇ ಶತೆ ದ್ವೇ ಚ ಯೋಜನೀಕೇನ ನಿಮಿಷೆ ಅರ್ಧೇನ ಕ್ರಮಮಾನ್! " ಅಂತ ಹೇಳ್ತಾನೆ.

ಇದರ ಅನುವಾದ ಸೂರ್ಯನು ೨೨೦೨ ಯೋಜನೆಗಳನ್ನು ನಿಮಿಶಾರ್ಧ ದಲ್ಲಿ ಕ್ರಮಿಸುತ್ತಾನೆ ಅಂತ ನೆನೆಸಿಕೊಳ್ಳುತೀನಿ.

...................
ಕೌಟಿಲ್ಯನ ಅರ್ಥ ಶಾಸ್ತ್ರ ಒಂದು ನಿಮಿಷವನ್ನು "ದಿನದ ೩೬೦,೦೦೦ ನೆ ಒಂದು ಭಾಗ" ಅಂತ ಹೇಳಿದೆ ಅಂತೆ. ಅಂದ್ರೆ ಹೆಚ್ಚು ಕಡಿಮೆ ೦.೨೪ ಸೆಕೆಂಡುಗಳು.

ಇದರ ಪ್ರಕಾರ ಅರ್ಧ ನಿಮಿಷ ಅಂದ್ರೆ ೦.೧೨ ಸೆಕೆಂಡುಗಳು.

ಇನ್ನೊಂದು ಲೆಕ್ಕದ ಪ್ರಕಾರ
ಒಂದು ನಿಮಿಷ ಅಂದ್ರೆ ೧೬/೭೫ ಸೆಕೆಂಡು ಅಂತೆ

........................................

ಈಗಲೂ ನಾವು ಹೇಗೆ ಗೇಣು, ಅಡಿ ಅಂತ ಮನುಷ್ಯನ ದೇಹದ ಅಳತೆ ಆಧಾರದಲಿ ಲೆಕ್ಕ ಹಾಕ್ತೀವೋ ಹಾಗೆ ಮನುಷ್ಯನ ಎತ್ತರ ವೂ ಅಳತೆಯಾ ಒಂದು basic unit ಆಗಿದೆ ಅಂತಾರೆ.

ಓದು ದಂಡ ಅಂದ್ರೆ ಒಂದು ಪೌರುಷ (ಮನುಷ್ಯನ ಎತ್ತರ ಅಂತೆ)..ಇದು ಒಂದು ಬಿಲ್ಲಿಗೆ ( ಧನು) ಅತ್ವ ಬಿಲ್ಲಿನ ಎಳೆಗೆ (ಧನ್ವಂತರ) ಸಮ.

ಅರ್ಥ ಶಾಸ್ತ್ರದ ಪ್ರಕಾರ ಒಂದು ಯೋಜನ ಅಂದ್ರೆ ೮೦೦೦ ಧನುಗಳಂತೆ!

ಒಂದು ಪೌರುಷ ವನ್ನ ೬ ಅಡಿ ಅಂತ ( ೬ ಅಡಿನೆ ಏಕೆ?! ಪಾಶ್ಚ್ಯಾತ್ಯ ರ ಲೆಕ್ಕ ?! ) ಒಂದು ಯೋಜನ ಅಂದ್ರೆ ಸುಮಾರು ೯ ಮೈಲುಗಳಾಗುತ್ತೆ.

......................................

ಈ ಪ್ರಕಾರ ಅರ್ಧ ನಿಮಿಷದಲ್ಲಿ ೨೨೦೨ ಯೋಜನ ಅಂದ್ರೆ ಸೆಕೆಂಡಿಗೆ 185,794 ಮೈಲು ಅಂತ ಆಗುತ್ತೆ . ಮತ್ತು ಇದು ಅಧುನಿಕ ವಿಜ್ನಾದ ಲೆಕ್ಕಕ್ಕೆ ತುಂಬ ಹತ್ತಿರವಾಗಿದೆ.

ನೆಟ್ ಲೋಕದಲ್ಲಿ ಅಡ್ಡಾಡುತ್ತಿದ್ದಾಗ ನನಗ ಕಂಡು ಬಂದ ಮಾಹಿತಿ. ಕೆಲವರಿಗಾದರೂ ಆಸಕ್ತಿ ಇದೆ ಅಂತ ಇಲ್ಲಿ ಹಾಕ್ತಾ ಇದ್ದೀನಿ .

ಈ ಲೆಕ್ಕದಬಗ್ಗೆ ಯಾರಾದರೂ ವಿವರಿಸುತ್ತಾರೆ ( ವಿವರಣೆ , ಮೂಲ ಗಳೊಂದಿಗೆ ) ಅಂತ ಕಾಯ್ತಾ ಇದ್ದೀನಿ.

Rating
No votes yet

Comments