ವೇದಭಾರತೀ,ಹಾಸನ-ಚಟುವಟಿಕೆಗಳ ಪರಿಚಯ

ವೇದಭಾರತೀ,ಹಾಸನ-ಚಟುವಟಿಕೆಗಳ ಪರಿಚಯ

 

ಕವಿ ನಾಗರಾಜರು ಮೊದಲು ಸ್ವಯಂ ನಿವೃತ್ತಿ ಪಡೆದರು. ನಾನು ಅವರನ್ನು ಹಿಂಬಾಲಿಸಿದೆ. ಸಾಮಾನ್ಯವಾಗಿ ನಿವೃತ್ತರ ಜೀವನ ನೋಡಿದ್ದೀರಲ್ಲಾ! ಪಾಪ! ಕಾಲ ಕಳೆಯುವುದು ಬಲು ಕಷ್ಟ. ಆದರೆ ನಮಗೆ  ದಿನದಲ್ಲಿ ಇನ್ನೂ ಮೂರ್ನಾಲ್ಕು ಗಂಟೆಗಳಿದ್ದರೂ ಅದರ ಸದ್ವಿನಿಯೋಗ ವಾಗುತ್ತೆ.ಅದಕ್ಕೆ ಕಾರಣ ನಾವು ಆರಂಭಿಸಿದ ವೇದಭಾರತೀ. 

                    ನಾನು ನಿವೃತ್ತಿ ತೆಗೆದುಕೊಳ್ಳುವಾಗಲೇ ಹೀಗೇ ನನ್ನ ಮುಂದಿನ ಜೀವನ ಸಾಗಬೇಕೆಂದು ನಿರ್ಧರಿಸಿದ್ದೆ. ಅದಕ್ಕೆ ಭಗವಂತನ ಆಶೀರ್ವಾದ ದೊರೆಯಿತು.ನಾಗರಾಜ್ ಮತ್ತು ಮಿತ್ರರ ಸಹಕಾರ ದೊರೆಯಿತು. ವಾನಪ್ರಸ್ತ ಜೀವನಕ್ಕೆ ಕಾಡಿಗೆ ಹೋಗದೆ , ಅದಕ್ಕಾಗಿಯೇ ಮನೆಯ ಮೇಲೆ  ಸುಮಾರು ಐವತ್ತು ಅರವತ್ತು ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ  ಒಂದು ಹಾಲ್ ಮತ್ತು ಅಥಿತಿಗಳಿಗಾಗಿ  ಒಂದು ರೂಮ್, ಎರಡು ಶೌಚಾಲಯ[ಒಂದು ರೂಮಿಗೆ ಅಟ್ಯಾಚ್ಡ್ ,ಒಂದು ಹಾಲ್ ಗೆ ಅಟ್ಯಾಚ್ಡ್] ನಿರ್ಮಾಣವಾಯ್ತು.ರಾಮಕೃಷ್ಣಾಶ್ರಮದ ಮತ್ತು ಚಿನ್ಮಯಾ ಮಿಷನ್ನಿನ ಸ್ವಾಮೀಜಿ ಗಳಿಂದ ಒಂದೆರಡು ಸತ್ಸಂಗ ನಡೆಯಿತು. ಕಳೆದ ಆಗಸ್ಟ್ 19 ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ  ಶ್ರೀ ಸುಧರ್ಮ ಚೈತನ್ಯರ ಒಂದು ಸತ್ಸಂಗ ಯೋಜನೆಯಾಗಿತ್ತು. ಆದರೆ  ಸ್ವಾಮೀಜಿಯವರು  ಬೇರೊಂದು ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಭಾಗವಹಿಸಬೇಕಾಗಿ ಬಂತು.ಆಗ ಅದೇ ದಿನಕ್ಕೆ ಮತ್ತೊಂದು ಕಾರ್ಯಕ್ರಮ ಯೋಜಿಸಿದೆವು.ಅದೇ "ಸಾಪ್ತಾಹಿಕ ವೇದ ಪಾಠದ ಆರಂಭ" ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರನ್ನು ಕರೆಸಿ "ಎಲ್ಲರಿಗಾಗಿ ವೇದಪಾಠ" ವನ್ನು "ವೇದಭಾರತಿಯ" ಆಶ್ರಯದಲ್ಲಿ ಆರಂಭಿಸಿದೆವು.     ನಿತ್ಯವೂ  ವೇದಾಭ್ಯಾಸ ಮಾಡಿದರೆ ಹೇಗೆ? ಎಂದು ಕೆಲವರು ಅಭಿಪ್ರಾಯ ಪಟ್ಟರು. ಕಳೆದ ಮೂರು ವಾರಗಳಿಂದ ಪ್ರತಿದಿನ  ಸಂಜೆ 6.00 ರಿಂದ 7.00ರವರಗೆ ಈಗ ವೇದಾಭ್ಯಾಸವು ನಡೆಯುತ್ತಿದೆ. ಸರಿಯಾಗಿ 6.00ಕ್ಕೆ ಆರಂಭವಾಗುವ ವೇದಾಭ್ಯಾಸದಲ್ಲಿ ಮೊದಲಿಗೆ ಹತ್ತು ನಿಮಿಷ ಧ್ಯಾನ. ನಂತರ ಮುಕ್ಕಾಲು ಗಂಟೆ  ವೇದಾಧ್ಯಾಯೀ ಶ್ರೀ ಅನಂತನಾರಾಯಣರು ವೇದಾಭ್ಯಾಸವನ್ನು ಮಾಡಿಸುತ್ತಿದ್ದಾರೆ. ನಿವೃತ್ತರಾಗಿರುವ ನಾವು ಮಾತ್ರ ಅಲ್ಲ....ಉದ್ಯೋಗ ಮಾಡುವ ಮಾತೆಯರು, ಪುರುಷರು, ವಿದ್ಯಾರ್ಥಿಗಳು ವೇದಾಭ್ಯಾಸಕ್ಕೆ ಬರುತ್ತಾರೆ. ಜಾತಿ/ಮತ/ಲಿಂಗ ಭೇದವಿಲ್ಲದೆ ಎಲ್ಲರಿಗಾಗಿ ನಡೆಯುತ್ತಿರುವ ಈ ವೇದ ಪಾಠವು ಬಲು ನೆಮ್ಮದಿಕೊಟ್ಟಿದೆ.ಈಗಾಗಲೇ ಒಂದು ಸಂಸ್ಕೃತ ಸಂಭಾಷಣಾ ಶಿಬಿರವೂ ಇಲ್ಲಿ  ನಡೆದಿದೆ. ಯೋಗಾಭ್ಯಾಸವೂ ಆರಂಭವಾಗಲಿದೆ. ಅಂದಹಾಗೆ ಅಂತರ್ಜಾಲದಲ್ಲೂ vedasudhe.com ನಲ್ಲಿ  ವೇದಪಾಠವು ನಡೆದಿದೆ. ಅಪೇಕ್ಷಿಸುವ ಸುಮಾರು 35 ಜನರಿಗೆ ಮೇಲ್ ಮೂಲಕವೂ ವೇದಪಾಠವನ್ನು ಕಳಿಸಿಕೊಡಲಾಗುತ್ತಿದೆ

 

Rating
No votes yet

Comments

Submitted by hariharapurasridhar Sat, 12/29/2012 - 15:30

ಪೋಸ್ಟ್ ಮಾಡಿದಮೇಲೆ ಚಿತ್ರಗಳು ದೊಡ್ದದಾಗಿರುವುದು ಗಮನಕ್ಕೆ ಬಂತು. ಯಾಕೋ ಎಡಿಟ್ ಮಾಡಲು ಆಪ್ಶನ್ ಕಾಣ್ತಾಇಲ್ಲ. ಯಾರಾದರೂ ಸಹಾಯ ಮಾಡಿ