ವೇದ ಸುಳ್ಳಾದರು ಗಾದೆ ಸುಳ್ಳಾಗದು !!!!

ವೇದ ಸುಳ್ಳಾದರು ಗಾದೆ ಸುಳ್ಳಾಗದು !!!!

Local Boyz presents presents presents ...ನೀತಿ ಕಥೆ ...

ಸಿದ್ದ ಊರಲ್ಲಿ ತುಂಬಾ ಸಿದ್ದ್ ಪ್ರ"ಸಿದ್ದ"

ಹುಡ್ಗ ದೊಡ್ಡೋನ್ ಆದ ಮದುವೆಗೆ ಹೆಣ್ಣೂ ಗೊತ್ತಾಯ್ತು ..ಹಿರಿಯರೆಲ್ಲ ಕೂರ್ಸ್ಕೋಂಡು ಸಿದ್ದಂಗೆ ಜೀವನೋಪಾಯ ಹೇಳಿ ಕೊಟ್ರು ಸಿದ್ದಂಗೆ ..

ನೋಡು ಸಿದ್ದ ನೀನು ಈಗ ದೊಡ್ಡೋನ್ ಆಗಿದಿಯ ..
ಜವಬ್ದಾರಿ ಬೆಳೆದಿದೆ, so ನೀನು ಮದುವೆ ಅದ್ ಮೇಲೆ ಹೆಂಡ್ತೀನ ನೊಡ್ಕೊಬೇಕು ..
ಅದ್ಕೆ ನಿನ್ ಕಾಲ್ಮೇಲೆ ನಿಂತ್ಕೋಬೇಕು .. ಹಂಗೆ .. ಹಿಂಗೆ ..
ಅಂತೆಲ್ಲ ತಮ್ಮ ಅನುಭವನೆಲ್ಲ ಊದಿದ್ರು ...

(ಪಾಪ ಎನ್ ಮಾಡ್ಲಿಕ್ ಆಗುತ್ತೆ ಸ್ವಂತ ಮಕ್ಳಂತು ಮಾತ್ ಕೆಳಲ್ಲ, ಅದ್ಕೆ ಊರೊರ್ ಮಕ್ಳಿಗೆ ಹೇಳೋದಪ್ಪ) :)

ಹೀಗೆ ದೊಡ್ಡವರ ಉಪದೇಶ ಮುಂದುವರಿತು ..

ನೋಡು ಸಿದ್ದ ಹುಡ್ಗೀರು ತುಂಬಾ ಸೂಕ್ಶ್ಮ ಹೊಸದಾಗಿ, ಹಂಗೆ ಅನ್ಕೋಂಡು ಸಡ್ಲು ಸಹ ಕೊಡ್ಬಾರ್ದು, ಅದ್ಕೆ ದೊಡ್ಡೋರು ಹೇಳಿರೋದು "ನಾರಿ ಮುನಿದರೆ ಮಾರಿ" etc etc

ಸಿದ್ದ ತಲೆ ಬಗ್ಗಿಸಿ ಹೇಳಿದ್ನೆಲ್ಲ ಕೇಳ್ದ ,ಪರಿಪಾಲನೆ ಮಾಡ್ಲಿಕ್ಕು schetch ..ಹಾಕ್ದ ..

ಮದುವೇನು ಆಯ್ತು .. (ಮಂಗಲ್ಯಮ್ ತಂತು ನಾನೆನ ಮಮ ಜೀವನ್ ಹೇತುನ. ಕಂಟೆ ಬಧ್ನಾಮಿ ಸುಭಗೆ ತ್ವಮ್ಜೀವ ಶರದಹ್ಶ್ಹತಮ್)

ಊರ್ ಬಿಟ್ಟು ಬೆಂಗಳೂರಿಗೆ ಹೆಂಡ್ತಿ ಕರ್ಕೊಂಡು ಹೊರ್ಟ ..(ಕೆಲ್ಸ ಅಂದ್ರೆ ಜನ್ರಿಗೆ ನೆನ್ಪ್ ಅಗೋದು ಇದೊಂದೆ ಊರಲ್ವ)

ಮದುವೆಯಾಗಿ ... ದಿನ ಕಳಿತು ..
ಪ್ರೀತಿ ಪ್ರೇಮದ್ದು ಹುಚ್ಚೂ ಬಿಡ್ತು ..

ದಿನ ಮತ್ತೊಷ್ಟು ಉರುಳಿದವು ..

ಬೆಂಗಳೂರಿನ traffic "jam" , kissan "jam" ತಿಂದು ತಿಂದು ಸಾಕಗಿ ವಾಪಸ್ ಊರಿಗೆ ಹೋಗೊ ನಿರ್ಧಾರ ಮಾಡಿ ಊರಿಗೆ ನಡೆದೆಬಿಟ್ಟ..

ಊರಲ್ಲಿ ಮತ್ತದೇ ದೊಡ್ಡವರು ಅನ್ನಿಸ್ಕೊಂಡಿರೋರನ್ನ ಭೇಟಿ ಆದ ..

ದೊಡ್ಡೊರು: ಎನ್ಲ ಸಿದ್ದ, ಹೆಂಗಿತ್ತು, ಬೆಂಗಳೂರು ..

ಸಿದ್ದ:ಎನ್ ಸ್ವಾಮಿ .. ಮೆಟ್ರೋ ರೈಲು ಅಂತ ಕಾರಣ ಹೇಳಿ .. ಗಿಡ ಮರ ಎಲ್ಲ ಕಡಿತ ಇದಾರೆ .. ಒಳ್ಳೆ, ಬೆಂಗಳೂರ್ನ "ದುಬೈ" (ಮರುಭೂಮಿ) ಮಾಡೋಕೆ ಎನ್ಬೇಕೋ ಎಲ್ಲಾ ಮಾಡ್ತ ಇದಾರೆ .. ಅದೆನ್ ಕೆಡ್ಗಾಲ ಬಂದೈಯ್ತೊ ..

ದೊಡ್ಡೋರು: ಹ್ಮ್ಮ್ಮ್ .. ಎನೋಪ .. ಅದಿರ್ಲಿ ಮತ್ತೆ ಹೆಂಡ್ತಿ ಮಕ್ಳು ಹೆಂಗ್ವೌರೆ ..

ಸಿದ್ದ: ಇಲ್ಲ, ಅದು .. ಅದು .. ಹೆಂಡ್ತೀನ ಕೆ ಅರ್ ಮಾರ್ಕೆಟ್ನಲ್ಲಿ ಮಾರ್ಬಿಟ್ಟೆ ..

ದೊಡ್ಡೋರು: ಅಯ್ಯಯ್ಯೊ .. ನಿಂಗೇನ್ಲ ಆಗಿತ್ತು ..

ಸಿದ್ದ: ತುಂಬಾನೆ ಸಿಟ್ಟು ಮಡ್ಕೊಂತಿದ್ಲು ಸ್ವಾಮಿ ಅದ್ಕೆ ಮಾರ್ಬಿಟ್ಟೆ ..

ದೊಡ್ಡೋರು: ಸಿಟ್ಟಾದ್ಲು ಅಂತ ಕಟ್ಕೊಂಡ್ ಹೆಂಡ್ತಿನ ಮಾರ್ಬಿಡೋದ ...

ಸಿದ್ದ: ಎನೊ ನಿಮ್ಮ ಮಾತಿಗೆ ಬೆಲೆ ಕೊಡ್ಬೇಕು ಅಂತ ಮಾರ್ಬಿಟ್ಟೆ ಸ್ವಾಮಿ ..

ದೊಡ್ಡೋರು: ಎನ್ಲ ಹಿಂಗಂತೀಯ ..

ಸಿದ್ದ:ಅಲ್ವ್ರೆ !! ನೀವೆ ಹೇಳಿದ್ರಲ್ಲ "ನಾರಿ ಮುನಿದರೆ ಮಾರಿ " ಅಂತ .. ಸೊ ಮಾರ್ಬಿಟ್ಟೆ .... :)

ದೊಡ್ಡೋರು: !@#$%^****!@#$%^

ಹೀಹಹಹಹಾ

ನೀತಿ1: ಮರ ಗಿಡ ಬೆಳಿಸಿ, ಬೆಂಗಳೂರು ಉಳಿಸಿ ... :)

ಈ ಕತೆಯಿಂದ ನಿಮಗೂ ನೀತಿ ಸಿಕ್ರೆ ಹೇಳಿ .. :)

Rating
No votes yet

Comments