ವೇದ ಸುಳ್ಳಾದರೂ ಗಾದೆ ಸುಳ್ಳಾಗದು !!

ವೇದ ಸುಳ್ಳಾದರೂ ಗಾದೆ ಸುಳ್ಳಾಗದು !!

 .....ಅಂತ ಹಿರಿಯರು ಹೇಳಿದ್ದಾರೆ. ಕೆಲವು ಗಾದೆಗಳು ಅದನ್ನು ನಿರೂಪಿಸಿದೆ ಹಾಗೂ ಇವತ್ತಿಗೂ ಸತ್ಯವೇ! ಈ ಸತ್ಯದ ಪರವಾಗಿ ಒಂದು ಗಾದೆ

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.

ಬನ್ನಿ ಸ್ವಾಮಿ ಸ್ವಲ್ಪ ಸಮಾಜದಲ್ಲಿ ಇಣುಕೋಣ. ಸತ್ಯ ಏನೆಂದು ತಿಳಿಯಲು ಹೋದರೆ ಎಲ್ಲಿದೆ ! ಎಲ್ಲದರಲ್ಲಿಯೂ ಸುಳ್ಳಿನ ಸರಮಾಲೆ. ಕೋಕಾಕೋಲಾ ಕುಡಿಯಿರಿ ಅದರಲ್ಲಿ ಕೀಟನಾಶಕ ಇಲ್ಲ ಇದನ್ನು ಹೇಳುವದು ನಮ್ಮ ತಾರಾಮಣಿಗಳು, ತಾರಾ ಆಟಗಾರರು!! ಪ್ರಯೋಗಶಾಲೆಯಲ್ಲಿ ಏನು ಪರೀಕ್ಷೆ ಮಾಡುತ್ತಾರೆ? ಅದಕ್ಕಿಂತ ಹೆಚ್ಚಿನ ಮುತುವರ್ಜಿ ನಾವು ಅದನ್ನು ತಯಾರಿ ಮಾಡುವಾಗ ವಹಿಸುತ್ತೇವೆ ಎಂದು ಕೋಲಾ ಕಂ. ಉವಾಚ ಯಾರು ಸತ್ಯ ಯಾವದು ಸತ್ಯ !!

ಸ್ಯಾಂಪಲ್ ೨ : ನಮ್ಮ ಸಾಬೂನಿನಲ್ಲಿ ನಿಮ್ಮ ಮಕ್ಕಳನ್ನು ಸ್ನಾನ ಮಾಡಿಸಿ. ಅವಳು ವಿಶ್ವ ಸುಂದರಿ ಗ್ಯಾರಂಟಿ !! ಸಾಬೂನು ಕಂ. ಉವಾಚ.

ಸ್ಯಾಂಪಲ್ ೩ : ಸೈಕಲ್ ಮೇಲೆ ಸಿಮೆಂಟ್ ಚೀಲ ಇದ್ದರೆ ಅದು ಟ್ರಕ್ಕಿಗೆ ಡಿಕ್ಕಿ ಹೊಡೆದಾಗ ಟ್ರಕ್ ಗಾಯಬ್  ಸಿಮೆಂಟ್ ಚೀಲ ಇರುವ ಸೈಕಲ್ ಗೆ ಸಣ್ಣ ಗೀರು ಸಹ ಇಲ್ಲ !!! ಸಿಮೆಂಟ್ ಮಜಬೂತಾಗಿದೆ.

ಹೀಗೆಯೆ ಬೇಕಾದಷ್ತು ವಿಷಯಗಳಿವೆ.

ಹೀಗಾಗಿ ಪ್ರಚಲಿತದಲ್ಲಿ ಗಾದೆಯು ಹೀಗೆ ಇದ್ದರೆ ಸೂಕ್ತವೇನೋ !!

  • ಸತ್ಯ ಹೇಳಿದವ ಸತ್ತೇ ಹೋದ ! ಅನ್ಯಾಯ ಮಾಡಿದವ ಅನ್ನ ತಿಂದ !!

ಹುಡುಕಾಟದಲ್ಲಿ ಕಳೆದುಹೋದ ಕಡೇಶಮ್ಮಿ !! 

Rating
No votes yet