ವೈದ್ಯಲೋಕ

ವೈದ್ಯಲೋಕ

೧)

ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರು
ಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರು
ಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ
ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ.

೨)

ಈ ಮಾತ್ರೆಗಳ ದಿನಕೆ ತಿನ್ನಿರಿ ಮೂರುಬಾರಿ
'ಶಕ್ತಿವರ್ಧಕ' ಇದನು ತಿನ್ನಿರಿ ಎರಡು ಬಾರಿ
ಹಾಗೆಯೇ ವಿಟಮಿನ್ನು ಮಿನರಲ್ಲು, ಗ್ಯಾಸು- ರಕ್ತದೊತ್ತಡಕೆ
ಮಧುಮೇಹ,ಹೃದಯಕ್ಕೆ೦ದು ವೈದ್ಯರು ಕೊಟ್ಟ ಮಾತ್ರೆಗಳ--- ನು೦ಗೀರಿ ಜೋಕೆ

Rating
No votes yet