ವೈನ್ -ದ್ರಾಕ್ಷಾಸವ

ವೈನ್ -ದ್ರಾಕ್ಷಾಸವ

ಇಂದ್ರಾದಿ ದೇವತೆಗಳು ವೈನ್(ಸೋಮರಸ) ಕುಡಿಯುತ್ತಿದ್ದರು.
ಮುಸಲ್ಮಾನ್ ರಾಜರ ಆಳ್ವಿಕೆಗೆ ಮೊದಲು ಅಲ್ಲಲ್ಲಿ ಮದಿರಾಲಯಗಳು ಇದ್ದವು.

ಈಗ ಕರ್ನಾಟಕ ಸರಕಾರ ರಾಜ್ಯಾದ್ಯಂತ wine tavern ಸುರುಮಾಡಲು ಕೇವಲ ೧೦೦೦ ರೂಪಾಯಿ ಫೀಸ್ ತೆಗೆದುಕೊಂಡು ಪರ್ಮಿಟ್ ಕೊಡುವುದು. ಅಗತ್ಯ ಡಾಕ್ಯುಮೆಂಟ್‌ಗಳ ಜತೆ ೫೦೦೦ ರೂ. ಕೊಟ್ಟರೆ ವೈನ್ ತಯಾರಿಕೆಗೂ ಅವಕಾಶವಿದೆ.

ಸದ್ಯಕ್ಕೆ ಕರ್ನಾಟಕದಲ್ಲಿ ಎರಡೇ ವೈನರಿಗಳು(ಬೆಂಗಳೂರು ರೂರಲ್ ಮತ್ತು ವಿಜಾಪುರದಲ್ಲಿ) ಇದೆ. ಮಹಾರಾಷ್ಟ್ರದಲ್ಲಿ ೩೦ಕ್ಕೂ ಹೆಚ್ಚು ಇದೆ.

ಕರ್ನಾಟಕದ ೯೭೦೦ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುವರು. ಅಂದಾಜು ೧.೬೭ ಲಕ್ಷ ಟನ್ ದ್ರಾಕ್ಷಿ ಸಿಗುವುದು.

ಹೆಚ್ಚುಕಮ್ಮಿ ವೈನ್ ಮಾಡುವ ಕ್ರಮದಲ್ಲೇ ಆಯುರ್ವೇದೀಯ ಔಷಧಿ ‘ದ್ರಾಕ್ಷಾಸವ’ ಮಾಡುವರು. ಈ ದ್ರಾಕ್ಷಾಸವವನ್ನೇ ಈಗಿನ ಜನರೇಶನ್‌ಗೆ ಅನುಗುಣವಾಗಿ ಮಾರ್ಪಾಡು ಮಾಡಿ (೨-೩ ಸ್ಪೂನ್ ಬದಲು ಜಾಸ್ತಿ ಕುಡಿಯುವಂತೆ, ಸೇರಿಸುವ ಔಷಧಿಗಳ ಪ್ರಮಾಣ ಕಮ್ಮಿ ಮಾಡಿ) ತಯಾರಿಸಬಹುದಲ್ಲವೇ? ಸರಕಾರವೂ ಸಹ ವೈನ್‌ಗೆ ಅವಕಾಶ ಕೊಡುವ ಬದಲು ಈ ಔಷಧೀಯ ವೈನ್‌ಗೆ ಪ್ರಚಾರ ಕೊಟ್ಟರೆ ಜನರ ಆರೋಗ್ಯವೂ ವರ್ಧಿಸುವುದು.

ಅಧಿಕ ವೈನ್ ಸೇವನೆಯಿಂದ ಕಣ್ಣು ಮಂಜಾಗುವುದು, ಕೆಂಪಗಾಗುವುದು, ಬಾಯಿ ಒಣಗುವುದು, ಉಳಿದ ವಿಷಯದಲ್ಲಿ ನಿರಾಸಕ್ತಿ ಉಂಟಾಗುವುದು. ಅದೇ ದ್ರಾಕ್ಷಾಸವ ಸೇವನೆಯಿಂದ ಬಲ,ಆಯುರಾರೋಗ್ಯ ವರ್ಧಿಸುವುದು.

-ಗಣೇಶ.

Rating
No votes yet

Comments