ವೈರಸ್(ವಿರಸ) ದಾಳಿ

ವೈರಸ್(ವಿರಸ) ದಾಳಿ

ಕಂಪ್ಯೂಟರ್ ಯುಗ.ಬಹಳಾ fast.ಆ ವೇಗಕ್ಕೆ ಹೊಂದಿಕೊಳ್ಳಲು ನಾನೂ ನನ್ನ ಕಂಪ್ಯೂಟರನ್ನು update ಮಾಡುತ್ತಾ ಬಂದಿದ್ದೇನೆ.ಆದರೂ ನನ್ನ ಕಂಪ್ಯೂಟರ್ ಆನ್ ಮಾಡಿ ಕೆಲಸ ಶುರುಮಾಡಲು ಅರ್ಧ ಘಂಟೆ ತಗಲುವುದು!!


ಹೌದು.,


ವಿರಸ ದಾಳಿ!!(ನೀವೆಲ್ಲಾ ಆಂಗ್ಲ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದಂತೆ ನಾನೂ "ವೈರಸ್ ಅಟ್ಟ್ಯಾಕ್" ನ್ನು ಕನ್ನಡೀಕರಿಸಿದ್ದೇನೆ.)


ನಾನು ಕಂಪ್ಯೂಟರ್ ನ ಎದುರಿಗೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು,ನನ್ನ ಹೆಂಡತಿಯ ಸವತಿಮಾತ್ಸರ್ಯಕ್ಕೆ ಕಾರಣವಾಗಿದೆ.ಒಂದೋ ಕಂಪ್ಯೂಟರ್ ಎದುರು ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ಕನೆಕ್ಟ್ ಮಾಡುವ ಸ್ವಿಚ್ ಗೆ ಇಸ್ತ್ರಿಪೆಟ್ಟಿಗೆಯೋ,ಮಿಕ್ಸಿಯೋ ಸಿಕ್ಕಿಸಿ ಅವಳ ಕೆಲಸ ಮಾಡುವಳು,ಇಲ್ಲಾ "ತೆಂಗಿನಕಾಯಿ/ಗೋಧಿಹಿಟ್ಟು/ ಸಕ್ಕರೆಮುಗಿದಿದೆ. ಬೇಗ ತನ್ನಿ" ಎಂದು ಆಜ್ಞಾಪಿಸುವಳು. ಇಷ್ಟೆಲ್ಲಾ ಸುಧಾರಿಸಿದ ಮೇಲೂ- -ಕಂಪ್ಯೂಟರ್ ನ ಮೇಲಿರುವ ಪುಸ್ತಕ,ಪೇಪರ್ ಗಳನ್ನು ತೆಗೆದು, -ಮೌಸ್ ಪ್ಯಾಡ್ ಮೇಲಿರುವ ಪೌಡರ್ ಡಬ್ಬಿ,ಬಾಚಣಿಗೆ..ಗಳನ್ನು ತೆಗೆದು, -ಕೀ ಬೋರ್ಡ್ ಅಡಿಯಲ್ಲಿರುವ ರಸೀದಿಗಳನ್ನು ತೆಗೆದು, -ಕುಳಿತುಕೊಳ್ಳುವ ಕುರ್ಚಿ ಮೇಲಿರುವ ಬಟ್ಟೆ ರಾಶಿ ತೆಗೆದು ನನ್ನ ಕೆಲಸ ಮಾಡಬೇಕು. ಈ ವಿರಸದಾಳಿಯನ್ನು ತಪ್ಪಿಸಲು ಒಳ್ಳೆ ಆಂಟಿ ವೈರಸನ್ನು(anti virus)ಹುಡುಕುತಿದ್ದೇನೆ.

Rating
No votes yet

Comments