ವ್ಯಕ್ತಿತ್ವ ವಿಭಿನ್ನತೆ

ವ್ಯಕ್ತಿತ್ವ ವಿಭಿನ್ನತೆ

ಒಂದು ತಿಂಗಳ ಹಿಂದೆ ಊರಿಗೆ ಹೋಗ್ಲಿಕ್ಕೆ ನವರಂಗ್ ಹತ್ತಿರ ಬಸ್ (ರಿಸರ್ವೇಶನ್ ಆಗಿತ್ತು) ಕಾಯ್ತಿದ್ದೆ. ಬಸ್ ಬಂತು ಹತ್ತಿ ಹೋದೆ, ಬಸ್ ಫುಲ್ ಆಗಿತ್ತು, ಲಗೇಜ್ ಸಹ ತುಂಬಿಕೊಂಡಿದ್ವು. ನವರಂಗ್ನಿಂದ ಒಬ್ರು ಆಂಟಿ ಮತ್ತೆ ಅಜ್ಜಿ ಸಹ ಹತ್ತಿದ್ರು. ನಾನು ನನ್ನ ಸೀಟ್ ಮೇಲೆ ಲಗೇಜ್ ಇಡ್ಲಿಕ್ಕೆ ಅಲ್ಲಿರೋ ಬ್ಯಾಗ್ ಸ್ವಲ್ಪ ಸರಿಸಿಲಿಕ್ಕೆ ಪ್ರಯತ್ನಿಸುತ್ತಿದ್ದೆ, ನನ್ನ ಸೀಟ್ ಪಕ್ಕ ಕೂತಿರೋ ವ್ಯಕ್ತಿ ಸುಮಾರು 35 ವರ್ಷ ಇರಬಹುದು, ಆ ಮನುಷ್ಯ ನನಗೆ 'ನನ್ನ ಲಗೇಜ್ ಸರಿಸಿದ್ರೆ ಸರಿ ಇರಲ್ಲ ನೋಡಿ' ಅಂದ, ನೋಡೋದಕ್ಕೆ ಸ್ವಲ್ಪ ಮರ್ಯಾದಸ್ಥ ಅನ್ನೋ ಹಾಗಿದ್ದ, ನಾನು ಅದಕ್ಕೆ ಅಲ್ರೀ ಎಲ್ಲೂ ಇಡ್ಲಿಕ್ಕೆ ಜಾಗ ಇಲ್ಲ, ಇಲ್ಲೇ ಸ್ವಲ್ಪ ಸರಿಸಿ ಇಡಬಹುದು ಅಂದೆ. ಆದ್ರೂ ಆ ಮನುಷ್ಯನಿಗೆ ಏನು ಹೇಳಿದ್ರೂ ಕೇಳುವಷ್ಟು ವ್ಯವದಾನ ಇರ್ಲಿಲ್ಲ, ಸುಮ್ನೆ ಜೋರಾಗಿ ಹೇಳ್ತಾ ಸೀನ್ ಕ್ರಿಯೇಟ್ ಮಾಡ್ತಿದ್ದ.

ನಾನು ಸಾಯ್ಲಿ, ಯಾಕೆ ಇವನತ್ರ ಜಗಳ ಅನ್ಕೊಂಡು ಕಾಲು ಹತ್ತಿರ ಬ್ಯಾಗ್ ಇಟ್ಕೊಂಡೆ.
ನನ್ನ ಹಿಂದೆ ಹತ್ತಿದ ಅಜ್ಜಿ ನನ್ನ ಸೀಟ್ ಮೇಲೆ ಸ್ವಲ್ಪ ಜಾಗ ಇದ್ದದ್ದು ನೋಡಿ ಅವನ ಬ್ಯಾಗ್ನ ಎತ್ತಿ ಸ್ವಲ್ಪ ಆಚೆ ಸರಿಸಿ ಅವ್ರ ಬ್ಯಾಗ್ ಇಟ್ರು, ಈ ಮನುಷ್ಯ ತುಟಿಪಿಟಕ್ ಅನ್ನಲಿಲ್ಲ.

ನಾನು, ಮುಂಗಾರು ಮಳೆಯಲ್ಲಿ ಗಣೇಶಂಗೆ ಪೂಜಾ ಗಾಂಧಿ (ಅವಳ ಮದುವೆ ವಿಷಯ ತಿಳಿದಾಗ) ಲುಕ್ ಕೊಡ್ತಾಳಲ್ಲ ಹಾಗೆ ಲುಕ್ ಕೊಟ್ಟು ಸುಮ್ನಾದೆ. ಅವ್ನು ತಬ್ಬಿಬ್ಬಾಗಿ ಸುಮ್ನೆ ಕೂತ.

Rating
No votes yet

Comments