ವ್ಯಾಕಾರಣ

ವ್ಯಾಕಾರಣ

ಸಂಪದದಲ್ಲಿ ನಾನು ವ್ಯಾಕಾರಣ ಪಾಠ ಸುರುಮಾಡುವ ಆಲೋಚನೆಯಲ್ಲಿದ್ದೇನೆ.


ಮೊದಲಿಗೆ ಒಂದು ಸಣ್ಣ ಕತೆ ಹೇಳಿ ನಂತರ ಪಾಠ ಸುರುಮಾಡುವೆನು-


ಒಂದು ಊರಲ್ಲಿ ಒಂದು ಸರಕಾರೀ ಸ್ಕೂಲ್ ಇತ್ತು. ಅಲ್ಲಿನ ಮಕ್ಕಳು ದಿನವೂ ಸ್ಕೂಲಿಗೆ ಹೊರಡುವ ಮೊದಲು ಲೆಕ್ಕ,ಗಣಿತ,ಸಮಾಜ ಪಾಠ ಕಲಿಸುವ ಗುರುಗಳು ರಜೆ ಮಾಡುವುದು ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು.


ಯಾಕೆಂದರೆ-


ಅದೇ ಸ್ಕೂಲಿನ ಕನ್ನಡ ಗುರುಗಳು ಮತ್ತು ಇಂಗ್ಲೀಷ್ ಮೇಸ್ಟ್ರುಗಳಿಬ್ಬರಿಗೂ ಪಾಠ ಕಲಿಸುವುದರಲ್ಲಿ ಪೈಪೋಟಿ. ಉಳಿದ ಗುರುಗಳು ರಜೆ ಮಾಡಿದ್ದಾರೆಂದು ತಿಳಿದ ಕೂಡಲೇ ಇವರು ಕ್ಲಾಸ್‌ಗೆ ನುಗ್ಗಿ ವ್ಯಾಕಾರಣ/ಗ್ರಾಮರ್ ಪಾಠ ಮಾಡುತ್ತಿದ್ದರು. ಇಬ್ಬರೂ ಬಹಳ ಸ್ಟ್ರಿಕ್ಟ್. ಹಗಲೂ ರಾತ್ರಿ ಮಕ್ಕಳು ಬರೀ ವ್ಯಾಕಾರಣ/ಗ್ರಾಮರ್ ಕಲಿಯುತ್ತಿದ್ದರು. ವ್ಯಾಕಾರಣ,ಅಕ್ಟಿವ್ ವಾಯ್ಸ್,ಪೇಸಿವ್ ವಾಯ್ಸ್.. ಎಲ್ಲಾ ವಾಯ್ಸ್‌ಗಳು ಬಂದರೂ ಅವರೆದುರು ನಿಂತು ಉತ್ತರಿಸಲು ವಾಯ್ಸೇ ಬರುತ್ತಿರಲಿಲ್ಲ.


ಆ ಸ್ಕೂಲಲ್ಲಿ ಕಲಿತು ಬಂದವನು ನಾನು!


ಈಗ ಪಾಠ ಸುರುಮಾಡೋಣ-


ಮೊದಲಿಗೆ  ವ್ಯಾಕಾರಾಣದ ಬಗ್ಗೆ ನಿಮಗೇನು ಗೊತ್ತು? ಒಬ್ಬೊಬ್ಬರೇ ಹೇಳಿ ನೋಡೋಣ..  


-ಗಣೇಶ.

Rating
No votes yet

Comments