ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!
ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು.
ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩. ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರ ಹಿರಿಯ ಮಗ. ಮೆಟ್ರಿಕ್ವರೆಗೆ ಶಿಕ್ಷಣ. ಜಿಲ್ಲಾ ಬೋರ್ದ್ ಕಚೇರಿಯಲ್ಲಿ ಸ್ವಲ್ಪಕಾಲ ಕೆಲಸ. ನಂತರ ಮುಂಬಯಿಗೆ ಪಯಣ.
೧೯೪೪. ಕಾಲ್ಟೆಕ್ಸ್ ಸಂಸ್ಥೆಯಲ್ಲಿ ಕೆಲಸ. ೪೦ ವರ್ಷಗಳ ಸೇವೆ. ೧೯೮೪ರಲ್ಲಿ ನಿವೃತ್ತಿ.
ಮುಂಬಯಿಯಲ್ಲಿ ಯುವಕರು ‘ನುಡಿ‘ ಎಂಬ ಪ್ರತ್ರಿಕೆಯನ್ನು ನಡೆಸುತ್ತಿದ್ದರು. ೧೯೪೭. ಮೌಂಟ್ ಬ್ಯಾಟನ್ ಅವರ ಯೋಜನೆಯನ್ನು ವಿರೋಧಿಸಿ ಲೇಖನ. ಇದರಿಂದ ವ್ಯಾಸರಾಯರು ಜನಸಾಮಾನ್ಯರಗ ಮನದೊಡನೆ ಮುಂಬಯಿ ಸರ್ಕಾರದ ಗಮನವನ್ನೂ ಸೆಳೆದರು. ಮುಂದೆ ಇದರ ಸಂಪಾದಕತ್ವ. ಅಲ್ಲಿಂದ ಅವರ ಬರಹ ನಿರಂತರವಾಗಿ ಹರಿದು ಬಂದಿತು.
ಕಾದಂಬರಿಗಳು: ಅನುರಕ್ತೆ, ಆಕಾಶಕ್ಕೊಂದು ಕಂದೀಲು, ವಾತ್ಸಲ್ಯಪಥ, ಹೇಮಂತಗಾನ, ಬಂಡಾಯ, ಉತ್ತರಾಯಣ, ಹೆಜ್ಜೆ ಹಾಗೂ ಹೆಜ್ಜೆಗುರುತು. ಇವುಗಳಲ್ಲಿ ಅನುರಕ್ತೆ ಹಾಗೂ ವಾತ್ಸಲ್ಯಪಥ ಚಲನಚಿತ್ರಗಳಾದವು. ಬಂಡಾಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.
ಸಣ್ಣಕಥೆಗಳು: ಬದುಕಿನ ಆದರ್ಶ, ಕಾಡುಮಲ್ಲಿಗೆ, ಸಂಪಿಗೆ ಹೂ, ಮಂಜರಿ, ತ್ರಿಕಾಲ ಇತ್ಯಾದಿ. ಇವುಗಳಲ್ಲಿ ಕಾಡುಮಲ್ಲಿಗೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಂಕಿತ ಪ್ರಕಾಶನದವರು ‘ವಾಸರಾಯಬ್ಲ್ಲಾಳರ ಸಮಗ್ರ ಕಠೆಗಳು‘ ಪ್ರಕಟಿಸಿದ್ದಾರೆ.
ಪ್ರವಾಸ ಸಾಹಿತ್ಯ: ನಾನೊಬ್ಬ ಭಾರತೀಯ ಪ್ರವಾಸಿ. ೧೯೮೮. ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ವಿಚಾರ ಸಾಹಿತ್ಯ: ಕಟ್ಟುವೆವು ನಾವು, ಸ್ವಾಥಂತ್ರ್ಯಕ್ಕೆ ಐವತ್ತು ವರ್ಷ, ಕಲಾವಿದ ಹೆಬ್ಬಾರರ ರೇಖಾ ಲಾವಣ್ಯ ಇತ್ಯಾದಿ.
ನಾಟಕ: ಗಿಳಿಯು ಪಂಜರದೊಳಿಲ್ಲ, ಮುಳ್ಳೆಲ್ಲಿದೆ ಮಂದಾರ.
ವಿಡಂಬನೆ: ಸಂಗ್ರಹ ಭಾರತಾಯಣ
ಜೀವನ ಚರಿತ್ರೆ: ಕುರ್ಶೇದ್ ನಾರಿಮನ್
ಪ್ರಶಸ್ತಿಗಳು: ೧೯೯೬. ಗದ್ಯಭಾಸ್ಕರ ಪ್ರಸಸ್ಥಿ, ಉಡುಪಿ ಪರ್ಯಾಯ ಮಹೋತ್ಸವ. ೨೦೦೦ ಅನಕೃ ಪ್ರಶಸ್ತಿ. ನಿರಂಜನ ಪ್ರಶಸ್ತಿ ಇತ್ಯಾದಿ.
ಆರು ದಶಕಗಳ ಕಾಲ ಕನ್ನಡ ಸಾಹಿತ್ಯ ರಚನೆ. ವಸ್ತುವೈವಿಧ್ಯ ಹಾಗೂ ಅಭಿವ್ಯಕ್ಥ ವಿಧಾನ ನೂತನ. ಕನ್ನಡಕ್ಕೆ ಸಮೃಧ್ಢ ಕಾಣಿಕೆ. ಯಾವ ಪಂಥಕ್ಕೂ ಸೇರದೆ, ಎಲ್ಲವನ್ನೂ ಜೀರ್ಣಿಸಿಕೊಂಡು ಬರೆದದ್ದು ವಿಶೇಷ. ಆದರೆ ಕನ್ನಡಿಗರು ಇವರನ್ನು ಉದಾಸೀನ ಮಾಡಿದ್ದೇ ಹೆಚ್ಚು. ವಿಮರ್ಶಕರು ಇವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಹುಶಃ ಇವರಿಗೆ ಹಿಂಬಾಲಕರಿರದಿರುವುದೆ ಇದಕ್ಕೆ ಕಾರಣವಿರಬಹುದು. ಬಹುಶಃ ಇದೇ ಕಾರಣದಿಂದ ಇವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯೂ ತಪ್ಪಿತೇನೋ!!
ಇವರ ಕೃತಿಗಳನ್ನು ಓದಿ, ಇವರ ಬರಹದ ಹರವನ್ನು, ಆಳವನ್ನು ಅನಾವರಣಗೊಳಿಸಿದರೆ, ಓದುಗರಾಗಿ ನಾವು ಕವಿಋಣವನ್ನು ತೀರಿಸಿಕೊಳ್ಳಬಹುದು.
- ನಾಸೋ
Comments
ಉ: ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!