ಶಕಟರೇಫನೊ ಇವನು ಅನುಕರಣಾವ್ಯಯನೊ?
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ
ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ
ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು
ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು
ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ
ಮತ್ತದೆ ನೋವಿನ ನಲಿದಾಟ ಕುಣಿದಾಟ ತಲೆಯಿಂದ ಕಾಲಿಗೆ
ನಿಷ್ಪಾಪಿ ಎಂದು ನಿರ್ಲಕ್ಷಿಸಸಿದಿರಿ ಇವನ ಶಕಟರೇಫನ
ತಿರ್ರನೆ ತಿರುವುವನು ಹೊಟ್ಟೆಯಲ್ಲಿ ಒಮ್ಮೆ
ಡರ್ರನೆ ಕೂಗುವನು ಊರ್ದ್ವಮುಖಿ ಇನ್ನೊಮ್ಮೆ
ಪುರ್ರನೆ ಶಬ್ದ ಮಾಡುವನು ಅಧೋಮುಖಿ ಮತ್ತೊಮ್ಮೆ
ಎಲ್ಲರೆದುರು ಮಾನ ಕಳೆಯುವನು ಇವನು
ಗ್ಯಾಸ್ಟ್ರಿಕ್ ಎಂಬ ತುಂಟನು
ಇವನು ಶಕಟರೇಫನೊ ಇಲ್ಲ ಅನುಕರಣಾವ್ಯಯನೊ..?
Rating
Comments
:))))
:))))