ಶತಕ
ಮಾರುದ್ದ ಜಡೆ, ಮೋಹಕ ಕಂಗಳವಳು
ಮಾತನಾಡಿಸಿದರೆ ನಾಚುವಳು, ದೂರ ಸರಿದರೆ ಕಳ್ಳ ನೋಟವ ಬೀರುವಳು
ಮಾತನಾಡಳೆಂದು ಬೇರೆ ಹುಡುಗಿಯರೊಡನೆ ಹರಟಿದರೆ ಹುಸಿ ಮುನಿಸ ತೋರುವಳು
ಹೊಸ ಉಡುಗೆಯ ತೊಟ್ಟು ವಯ್ಯಾರ ತೋರುವಳು
ಅವಳ ಅಂದವ ಹೊಗಳಿದರೆ ಕೆಂಪಾಗುವಳು
ಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು
ಹಗಲೆಲ್ಲಾ ದೂರವಾಣಿಯಲ್ಲಿ ಪಿಸು ಮಾತು, ಸದ್ದು
ಗೆಳೆಯನಿರಬಹುದೇ ಎಂದು ಕೇಳಬಯಸಿದರೆ ಕದ್ದು
ಹೊರಡುತ್ತಾಳವಳಲ್ಲಿಂದ ಎದ್ದು
ನಲ್ಲೆ ಎಂದೊಡೆ ಒಲ್ಲೆ ಎನಳು
ಓಲೆ ಕಳಿಸಿದರೆ ಕಲೆ ಹಾಕುವಳು
ಉತ್ತರ ಕೇಳಿದರೆ "ಇದು ನನ್ನ ೧೦೦ನೇ ಪ್ರೇಮ ಪತ್ರ ಎಂದಳು"!
ವಿ.ಸೂ: ಕವನ ಬರೆಯುವ ನನ್ನ ಮೊದಲ ಪ್ರಯತ್ನ, ಮಹೇಶ ಹಾಗೂ ರಾಕೇಶ್-ರಿಗೆ ಅರ್ಪಣೆ
Rating
Comments
ಉ: ಶತಕ
In reply to ಉ: ಶತಕ by anil.ramesh
ಉ: ಶತಕ