ಶತೃ ಎಲ್ಲವನ್ನೂ ನೆನಪಿಟ್ಟುಕೊಳ್ಳುವಾಗ, ಮಿತ್ರ ಮರೆತುದುದಕ್ಕೆ ಕ್ಷಮೆ ನಿರೀಕ್ಷಿಸುತ್ತಾನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೮
(೨೯೬) ತಲೆಯನ್ನು ಯಾವ ಸಂದರ್ಭದಲ್ಲಿಯಾದರೂ ನೆಲಕ್ಕೆ ಮುಟ್ಟಿಸಿಬಿಡಬಲ್ಲ ವಿನಯವನ್ನು ಬೆಳೆಸಿಕೊಂಡಾತ, ಹಾಗೆ ಮಾಡುವಾಗ ಜಗತ್ತನ್ನೇ ತಲೆಕೆಳಗು ಮಾಡಿಬಿಡಬಲ್ಲ!
(೨೯೭) ಆತನಿಗೆ/ಆಕೆಗೆ ನೀವೇನೇನೆಲ್ಲಾ ಮಾಡಿದ್ದೀರೆಂಬ ಪ್ರತಿಯೊಂದು ವಿವರವನ್ನೂ ಶತೃ ನೆನಪಿಟ್ಟುಕೊಂಡಿರುತ್ತಾನೆ/ಳೆ. ನಿಮ್ಮ ಇಂತಹದ್ದೇ ಕ್ರಿಯೆಗಳನ್ನೆಲ್ಲಾ ಮರೆತುಹೋಗಿಯೊ, ಅದಕ್ಕೆಲ್ಲ ನಿಮ್ಮಲ್ಲಿ ಕ್ಷಮೆ ನಿರೀಕ್ಷಿಸುವಾತನ ಕ್ರಿಯೆಯನ್ನು ಸ್ನೇಹವೆನ್ನುತ್ತೇವೆ.
(೨೯೮) ತನ್ನ ನಿಶ್ಯಕ್ತಿಯನ್ನು ಸಾಧ್ಯಂತವಾಗಿ ಅರಿತವನೆ ನಿಜಕ್ಕೂ ಶಕ್ತಿವಂತ.
(೨೯೯) ದಣಿವರಿಯದ ವ್ಯಕ್ತಿಃ ಯಾವಾಗ ಬೇಕಾದರೂ ಕರೆಮಾಡಿ. ನನ್ನ ಫೋನಿನಲ್ಲಿ ಬ್ಯುಸಿಟ್ಯೂನಿನ ಆಶ್ವಾಸನೆಯನ್ನು ನೀಡುತ್ತೇನೆ ನಿಮಗೆ.
(೩೦೦) ಸೋಂಬೇರಿ ವ್ಯಕ್ತಿಃ ನನಗೆ ಯಾವಾಗ ಬೇಕಾದರೂ ಕರೆ ಮಾಡಿ. ಕೂಡಲೆ ಒಂದು ಮೊಬೈಲು ಖರೀದಿಸಿಬಿಡುತ್ತೇನೆ!
Rating
Comments
ಉ: ಶತೃ ಎಲ್ಲವನ್ನೂ ನೆನಪಿಟ್ಟುಕೊಳ್ಳುವಾಗ, ಮಿತ್ರ ಮರೆತುದುದಕ್ಕೆ ...