ಶನಿವಾರವಾಡದ ಸುಂದರ ಸಂಜೆ

ಶನಿವಾರವಾಡದ ಸುಂದರ ಸಂಜೆ

ಓರ್ಕುಟ್.ಕಾಮ್ ಅಂದ್ರೆ ಅಂತರ್ಜಾಲದಲ್ಲಿ, ಕಾಲಹರಣಕ್ಕೆ ಒಂದು ಒಳ್ಳೇ ತಾಣ ಅಂತ ಸಾಕಷ್ಟು ಕುಖ್ಯಾತಿ ಪಡೆದಿದೆ. ಈ ಅಂತರ್ಜಾಲ ತಾಣದಲ್ಲಿ, ಅಸ್ತಿತ್ವದಲ್ಲಿರುವ ಹಲವು ಲಕ್ಷಗಟ್ಟಲೇ ಸಮುದಾಯಗಳಲ್ಲಿ 'ಪುಣೆ ಕನ್ನಡಿಗರ ಬಳಗ'ವೂ ಒಂದು. ಪುಣೆಯಲ್ಲಿ ತಂತ್ರಾಂಶ ತಜ್ಞರಾಗಿ ಕೆಲಸ ಮಾಡುತ್ತಿರುವ, ನರಸಿಂಹ ಅವರಿಂದ ಪ್ರಾರಂಭಿಸಲ್ಪಟ್ಟಿದ್ದು ಈ ಸಮುದಾಯ. ಈ ಬ್ಲಾಗ್ ಬರೆಯುವ ಹೊತ್ತಿಗೆ ೧೯೬ ಸದಸ್ಯರು ಈ ಬಳಗಕ್ಕೆ ನೋಂದಾಯಿಸಿಕೊಂಡಿದ್ದಾರೆ. ಪುಣೆ ನಗರದಲ್ಲಿ ವಾಸಿಸುವ ಎಲ್ಲ ಕನ್ನಡ ಭಾಷಿಕರಿಗೆ ಇಲ್ಲಿ ಮುಕ್ತವಾಗಿ ಪ್ರವೇಶ. ಸಾಂಪ್ರದಾಯಿಕ ಸಂವಹನ ಮಾಧ್ಯಮಗಳಿಗಿಂತ ಒಂದು ಹೆಜ್ಜೆ ಮುಂದೆ, ಪುಣೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಪರಸ್ಪರರನ್ನು ಪರಿಚಯ ಮಾಡಿಕೊಳ್ಳೋಕೂ, ತಮ್ಮ ಕನ್ನಡ ಸಂಬಂಧಿತ ಆಸಕ್ತಿ, ಪ್ರವೃತ್ತಿಗಳನ್ನು ಜೀವಂತವಾಗಿರಿಸ್ಕೊಳ್ಳೋಕೆ ಒಂದು ಅವಕಾಶವನ್ನು ಈ ಅಂತರ್ಜಾಲ ಮಾಧ್ಯಮ ಒದಗಿಸಿಕೊಟ್ಟಿದೆ. ಇದಕ್ಕೆ ಸಾಕ್ಷಿ ಅಂದ್ರೆ ಕಳೆದ ಎರಡು ತಿಂಗಳುಗಳಲ್ಲಿ ಇದರ ಸದಸ್ಯ ಸಂಖ್ಯೆ ೩೦ ರಿಂದ ೧೯೬ಕ್ಕೆ ಏರಿಕೆಯಾಗಿದೆ. ಚರ್ಚೆ, ಮಾತುಕತೆಗಳೂ ಹೆಚ್ಚಾಗಿವೆ. ಇದರಿಂದ ಉತ್ಸಾಹಿತರಾಗಿ, ಕಳೆದ ಶನಿವಾರ ಅಂದ್ರೆ ೨೧-೦೪-೨೦೦೭ರಂದು, ಸಾಯಂಕಾಲ ಆಸಕ್ತಿಯಿರುವವರೆಲ್ಲರೂ, 'ಪುಣೆ ಕನ್ನಡಿಗರ ಬಳಗ'ದ ಚಟುವಟಿಕೆಗಳನ್ನು ವಿಸ್ತರಿಸಿವುದರ ಬಗ್ಗೆ ಚರ್ಚಿಸ್ಲಿಕ್ಕೆ ಒಂದು ಅನೌಪಚಾರಿಕ ಭೇಟಿಯನ್ನು, ಶನಿವಾರವಾಡ ಅರಮನೆಯೆದುರಿನ ಪ್ರಾಂಗಣದಲ್ಲಿ ಏರ್ಪಡಿಸಿದ್ವಿ.

http://www.orkut.com/Community.aspx?cmm=18133176

www.punekannadigaru.tk

Rating
No votes yet

Comments