ಶರಣಾಗತಿ (ಶ್ರೀ ನರಸಿಂಹ 56)
ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ
ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ
ಇಂದಾಗಿಹ ಘಟನೆಯಿಂದಲಿ ದುಃಖ ನಿನಗಾದರು
ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು
ನೀ ಬಯಸಿದುದನು ಬಯಸಿದಾಗಲೆ ನೀಡನವನು
ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪನು
ಶರಣಾಗು ಶ್ರೀಹರಿಗೆ ಬಯಕೆಗಳ ತ್ಯಜಿಸಿ ಮನದಿ
ರಕ್ಷಿಪನು ನಿನ್ನ ಮಾರ್ಜಾಲ ಮರಿಯ ರಕ್ಷಿಪ ತೆರದಿ
ನಿನ್ನ ಕರದಿ ದೇವನ ಕರ ಹಿಡಿದಿರಲು ಇಹುದು ಭಯವು
ಇಡೆ ಕರವನು ಶ್ರೀನರಸಿಂಹನ ಕರದೊಳಾಗ ಅಭಯವು
Rating
Comments
ಸತೀಶ್ ಅವ್ರೆ ಒಳ್ಳೆ ಬರಹ.
ಸತೀಶ್ ಅವ್ರೆ ಒಳ್ಳೆ ಬರಹ.
ಈ ಸಾಲುಗಳು ನನಗೆ ಅಣ್ಣಾವ್ರ ಹಾಡು- ಬಾನಿದೊಂದು ಎಲ್ಲೇ ಎಲ್ಲಿದೆ ..... ಸಾಲು ಹಾಡು ದೃಶ್ಯ ನೆನಪಿಸಿತು..
ಹಿರಿಯರಾದ ಕವಿ ನಾಗರಾಜ ಅವರ ಬರಹಗಳ ಮಾಲೆ ಒಟ್ಟಾಗಿ ಪುಸ್ತಕದ ರೂಪದಲ್ಲಿ ಹೊರ ಬಂದ ಹಾಗೆ ನಿಮ್ಮ ಈ ಬರಹಗಳೂ ಪುಸ್ತಕ ರೂಪದಲ್ಲಿ ಸಿಗಲಿ.
ಶುಭವಾಗಲಿ.
\|/
In reply to ಸತೀಶ್ ಅವ್ರೆ ಒಳ್ಳೆ ಬರಹ. by venkatb83
ಆತ್ಮೀಯ ಸತಿಷರೇ,
ಆತ್ಮೀಯ ಸತಿಷರೇ,
ಆದದ್ದಲ್ಲಾ ಒಳಿತೇ ಆಯಿತು, ಎನ್ನುವ ಸೈರಣೆ ಇದ್ದರೆ ಸಾಕು ಮಹತ್ತರವಾದುದನ್ನು ಸಾಧಿಸಬಹುದು. ಉತ್ತಮ ಪ್ರಸ್ತುತಿ.
In reply to ಆತ್ಮೀಯ ಸತಿಷರೇ, by Prakash Narasimhaiya
ಧನ್ಯವಾದಗಳು ಪ್ರಕಾಶ್ ರವರೇ ವಿಳಂಬ
ಧನ್ಯವಾದಗಳು ಪ್ರಕಾಶ್ ರವರೇ ವಿಳಂಬ ಪ್ರತಿಕ್ರಿಯೆಗೆ ಕ್ಷಮೆಯಿರಲಿ
.....ಸತೀಶ್
In reply to ಸತೀಶ್ ಅವ್ರೆ ಒಳ್ಳೆ ಬರಹ. by venkatb83
ನಿಮ್ಮ ಹೃದಯ ಸ್ಪರ್ಶಿ
ನಿಮ್ಮ ಹೃದಯ ಸ್ಪರ್ಶಿ ಪ್ರತಿಕ್ರಿಯೆಗೆ ಧನ್ಯವಾದಗಳು ವಿಳಂಬಕ್ಕೆ ಕ್ಷಮೆ ಇರಲಿ
...........ಸತೀಶ್
> ಅನುಭವದ ಮಾತುಗಳು!!
<<ನೀ ಬಯಸಿದುದನು ಬಯಸಿದಾಗಲೆ ನೀಡನವನು
ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪ>>
ಅನುಭವದ ಮಾತುಗಳು!!
In reply to > ಅನುಭವದ ಮಾತುಗಳು!! by kavinagaraj
+1
+1
In reply to +1 by Premashri
ಧನ್ಯವಾದಗಳು ಪ್ರೇಮ ರವರೇ ವಿಳಂಬ
ಧನ್ಯವಾದಗಳು ಪ್ರೇಮ ರವರೇ ವಿಳಂಬ ಪ್ರತಿಕ್ರಿಯೆಗೆ ಕ್ಷಮೆಯಿರಲಿ
.....ಸತೀಶ್
In reply to > ಅನುಭವದ ಮಾತುಗಳು!! by kavinagaraj
ಧನ್ಯವಾದಗಳು ನಾಗರಾಜ್ ರವರೇ ವಿಳಂಬ
ಧನ್ಯವಾದಗಳು ನಾಗರಾಜ್ ರವರೇ ವಿಳಂಬ ಪ್ರತಿಕ್ರಿಯೆಗೆ ಕ್ಷಮೆಯಿರಲಿ
.....ಸತೀಶ್