ಶಾಯರಿ ಜುಗಲಬಂದಿ

ಶಾಯರಿ ಜುಗಲಬಂದಿ

(ಒಂದೇ ಕಡೆ ಇರಲಿ ಅಂತ)

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !!
- Vರ ( Venkatesha ರಂಗಯ್ಯ )

ಆರಿಸಿ ಸೋತಿರಾ ನೀವು "ಸ್ಯಾರಿ" ತೊಡುವ ಗೌರಿಯನ್ನು?
ಆರಿಸಿ ಸೋತಿರಾ ನೀವು "ಸ್ಯಾರಿ" ತೊಡುವ ಗೌರಿಯನ್ನು?
ಆರಿಸ ಬಹುದಿತ್ತಲ್ಲವೇ ಮಿನಿ, ಮಿಡಿ, ಚೂಡಿಯಲ್ಲೇ ಇರುವ ಚೋರಿಯನ್ನು?
-ಆಸು ಹೆಗ್ಡೆ

ಉಟ್ಟರೆ ಚುಡಿದಾರ ಕಾಣುವಳು ಸೂಜಿ ಧಾರ
ಉಟ್ಟರೆ ಮಿನಿ ಮಿಡ್ಡಿ ಕಾಣುವಳು ಗಿಡ್ಡಿ
ಉಟ್ಟರೆ ಸೀರೆ ಕಾಣುವಳು ಪಕ್ಕಾ ಕನ್ನಡದ ನಾರಿ.
-ಶಶಿಕಾಂತ್

ಉಡುವುದನ್ನೇ ಉಡಬೇಕು, ತೊಡುವುದನ್ನೇ ತೊಡಬೇಕು,
ಉಡುವುದನ್ನೇ ಉಡಬೇಕು, ತೊಡುವುದನ್ನೇ ತೊಡಬೇಕು,
ಉಡುವುದನ್ನು ತೊಟ್ಟರೆ, ತೊಡುವುದನ್ನು ಉಟ್ಟರೆ, ಆಮೇಲೆ ದೇವರೇ ಕಾಪಾಡಬೇಕು!!!
-ಆಸು ಹೆಗ್ಡೆ

ಶಾಯರಿ ಹೇಳುವುದರಲ್ಲಿ ನಿಸ್ಸೀಮರು ಹೆಗ್ಡೆ
ಶಾಯರಿ ಹೇಳುವುದರಲ್ಲಿ ನಿಸ್ಸೀಮರು ಹೆಗ್ಡೆ
ಅದಕ್ಕೆ ಹುಡುಗೀರ ದೃಷ್ಟಿ ಬಿದ್ದಿದೆ ಅವರ ಕಡೆ!!
-Vರ ( Venkatesha ರಂಗಯ್ಯ )

ಬಿದ್ದಿರಬಹುದು ಅಂತೀರಾ ಹುಡುಗೀರ ದೃಷ್ಟಿ ನನ್ನ ಕಡೆ?
ಬಿದ್ದಿರಬಹುದು ಅಂತೀರಾ ಹುಡುಗೀರ ದೃಷ್ಟಿ ನನ್ನ ಕಡೆ?
ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು ನಾ ನನ್ನ ದವಡೆ!!!
-ಆಸು ಹೆಗ್ಡೆ

ನಿಮಗೆ ಬೇಡ ದವಡೆ ಮುರಿದು ಹೋಗುವುದೆಂಬ ಭೀತಿ
ನಿಮಗೆ ಬೇಡ ದವಡೆ ಮುರಿದು ಹೋಗುವುದೆಂಬ ಭೀತಿ
ಏಕೆಂದರೆ ನಿಮ್ಮ ಮೇಲೆ ಇರುವುದು ಅವಳ ಪ್ರೀತಿ!!
-Vರ ( Venkatesha ರಂಗಯ್ಯ )

ಪ್ರೀತಿಯಲೂ ಇರಬೇಕು ಸ್ವಾಮಿ ಸದಾ ಕೊಂಚ ಭೀತಿ
ಪ್ರೀತಿಯಲೂ ಇರಬೇಕು ಸ್ವಾಮಿ ಸದಾ ಕೊಂಚ ಭೀತಿ
ಇಲ್ಲವಾದರೆ ಮಾಡಿ ಬಿಡುತ್ತಾರೆ ನಮ್ಮನ್ನವರು ಕೋತಿ!!!
-ಆಸು ಹೆಗ್ಡೆ

ಅವರೇನು ನಮ್ಮನ್ನು ಮಾಡಬೇಕಾಗಿಲ್ಲ ಕೋತಿ
ಅವರೇನು ನಮ್ಮನ್ನು ಮಾಡಬೇಕಾಗಿಲ್ಲ ಕೋತಿ
ಏಕೆಂದರೆ ಆ ದೇವರೆ ನಮ್ಮೆಲ್ಲರನ್ನು ಮಾಡಿದ್ದಾನೆ ಕೋತಿ!! ( ಮಂಗನಿಂದ ಮಾನವ )
-Vರ ( Venkatesha ರಂಗಯ್ಯ )

ಆ ದೇವರು ನಮ್ಮನ್ನು ಮಾಡಿಯಾಗಿದೆ ಮಂಗನಿಂದ ಮಾನವ
ಆ ದೇವರು ನಮ್ಮನ್ನು ಮಾಡಿಯಾಗಿದೆ ಮಂಗನಿಂದ ಮಾನವ
ಮತ್ತೇಕೆ ಮರಳಿ ಮಂಗನಾಗಿ ಮರವನೇರಲಿ ನಾ ಮಾನವ?
-ಆಸು ಹೆಗ್ಡೆ

ಮೆಚ್ಚಿದೆ ಗೆಳೆಯ ನಿನ್ನ ಬುದ್ದಿವಂತಿಕೆ
ಮೆಚ್ಚಿದೆ ಗೆಳೆಯ ನಿನ್ನ ಬುದ್ದಿವಂತಿಕೆ
ಆದರು ಅವಳಿಗಾಗಿ ಮೀಸಲಿಡು ನಿನ್ನ ಹೃದಯ ಶ್ರೀಮಂತಿಕೆ !!
-Vರ ( Venkatesha ರಂಗಯ್ಯ )

ನಿಮ್ಮ ಮೆಚ್ಚುಗೆಯನು ಮೆಚ್ಚುತ್ತೇನೆ ಆದರೆ ನಾ ಉಬ್ಬಿ ಹೋಗುವುದಿಲ್ಲ,
ನಿಮ್ಮ ಮೆಚ್ಚುಗೆಯನು ಮೆಚ್ಚುತ್ತೇನೆ ಆದರೆ ನಾ ಉಬ್ಬಿ ಹೋಗುವುದಿಲ್ಲ,
ಬತ್ತದ ಹೃದಯ ಶ್ರೀಮಂತಿಕೆ ನನ್ನದು ಅದ ನಾ ಮೀಸಲಿಡಬೇಕಾಗಿಲ್ಲ!!!
-ಆಸು ಹೆಗ್ಡೆ

ಕೇಳಬೇಡ್ವೇ ಸ್ಯಾರಿ ವಾರಕ್ಮೂರು ಸಾರಿ
ಕೇಳಬೇಡ್ವೇ ಸ್ಯಾರಿ ವಾರಕ್ಮೂರು ಸಾರಿ
ಬದಲಿಗೆ ದಿನಕ್ಮೂರು ಬಾರಿ ಪ್ಯಾರಿ
ದಿನಕ್ಮೂರು ಬಾರಿ ಹೇಳುವೆ ಶಾಯಿರಿ..
-ಗಣೇಶ. (ತಡರಾತ್ರಿಯಲ್ಲಿ)

ನಮ್ಮಿಬ್ಬರದು ನಿನ್ನೆ ಹಗಲಿಡೀ ನಡೆದಿತ್ತು ಜುಗಲಬಂದಿ
ನಮ್ಮಿಬ್ಬರದು ನಿನ್ನೆ ಹಗಲಿಡೀ ನಡೆದಿತ್ತು ಜುಗಲಬಂದಿ
ರಾತ್ರಿ ನಾವತ್ತ ಹೋದಮೇಲೆ ನೀ ಇತ್ತ ಯಾಕ ಬಂದೀ?
-ಆಸು ಹೆಗ್ಡೆ

ಒಂದು ಹಸ್ತಕ್ಕೆ ಇನ್ನೊಂದು ಹಸ್ತ ಸೇರಿದರೆ ಚಪ್ಪಾಳೆಯಾಗುತ್ತದೆ
ಒಂದು ಹಸ್ತಕ್ಕೆ ಇನ್ನೊಂದು ಹಸ್ತ ಸೇರಿದರೆ ಚಪ್ಪಾಳೆಯಾಗುತ್ತದೆ
ಯೋಗ್ಯ ಜೊತೆ ದೊರೆತಾಗ ಶಾಯರಿ ನಿಲ್ಲದೆ ಹರಿಯುತ್ತಿರುತ್ತದೆ!!!
-ಆಸು ಹೆಗ್ಡೆ

Rating
No votes yet

Comments